ನೈವೇದ್ಯ ಸಲ್ಲಿಸುವ ಅವಕಾಶ : ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಶಬರಿಮಲೆ ಅಯ್ಯಪ್ಪನಿಗೆ ಇ-ಕಾಣಿಕಾ ಸೌಲಭ್ಯ

ಶಬರಿಮಲೆ (ಕೇರಳ): ಈ ಹಿಂದೆ ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ವರ್ಚುವಲ್​ ಸರತಿಯ ವ್ಯವಸ್ಥೆಯಲ್ಲಿ ದೇವಸ್ವಂ ಮಂಡಳಿ ಪ್ರಾರಂಭಿಸಿತ್ತು. ದೇವಾಲಯಗಳಲ್ಲಿ ದೇವರಿಗೆ ನೈವೇದ್ಯ, ಪೂಜೆ ಸಲ್ಲಿಸಬೇಕಾದರೆ ದೇವಸ್ಥಾನಕ್ಕೇ ಹೋಗಬೇಕೆಂದಿಲ್ಲ. ಈಗ ಮನೆಯಲ್ಲೇ ಕುಳಿತು ದೇವರಿಗೆ ಸಲ್ಲಿಸುವಂತಹ ತಂತ್ರಜ್ಞಾನಗಳು ಬೆಳೆದಿವೆ. ಆ ತಂತ್ರಜ್ಞಾನವನ್ನು ಹಲವು ದೇವಾಲಯಗಳು ಕೂಡ ಅಳವಡಿಸಿಕೊಂಡಿವೆ ಕೂಡ. ಅದರಂತೆಯೇ ಇನ್ಮುಂದೆ ಅಯ್ಯಪ್ಪ ಸ್ವಾಮಿಯ ಭಕ್ತರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಯ್ಯಪ್ಪ ಸ್ವಾಮಿಗೆ ನೈವೇದ್ಯ ಸಲ್ಲಿಸಬಹುದು. ಶಬರಿಮಲೆಯ ಅಯ್ಯಪ್ಪನಿಗೆ ಭಕ್ತರು ಕಾಣಿಕೆ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಇ-ಕಾಣಿಕಾ […]