ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ: ಶಾಂತಿಮತೀ ಪ್ರತಿಷ್ಟಾನದ ಅಭಿನಂದನೆ ಸ್ವೀಕರಿಸಿ ಪೂರ್ಣಿಮಾ ಜನಾರ್ದನ್ ಅಭಿಮತ
ಬ್ರಹ್ಮಾವರ: ಎಲ್ಲರಲ್ಲೂ ಒಂದಲ್ಲ ಒಂದು ಸುಪ್ತಪ್ರತಿಭೆ ಅಡಗಿದೆ. ಆದರೆ ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟಲ್ಲಿ ಮಾತ್ರ ಅಂತಹ ಪ್ರತಿಭೆಗಳು ಪ್ರಕಾಶಿಸುತ್ತವೆ ಎಂದು ಪೂರ್ಣಿಮಾ ಜನಾರ್ದನ್ ಹೇಳಿದರು. ಬ್ರಹ್ಮಾವರ ಹಂದಾಡಿ ಶಾಂತಿಮತೀ ಪ್ರತಿಷ್ಟಾನ ಹಮ್ಮಿಕೊಂಡ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಶಾಂತಿಮತೀ ಪ್ರತಿಷ್ಟಾನ ವತಿಯಿಂದ ಸಾಧಕರೆಡೆ ನಮ್ಮ ನಡೆ. ನಮ್ಮ ಸಾಧನೆಯ ಬಗ್ಗೆ ನಾವೇ ಅಭಿಮಾನ ಪಟ್ಟರೆ ಸಂತಸವೆನಿಸುತ್ತದೆ. ಆದರೆ ಸಾರ್ಥಕವೆನಿಸುವುದು ಇನ್ನೊಬ್ಬರು ಅಭಿಮಾನ ಪಟ್ಟಾಗ ಮಾತ್ರ ಎಂದರು. ಶಾಂತಿಮತೀ ಪ್ರತಿಷ್ಟಾನದ ವಿದ್ವಾನ್ […]