ಸಾಂತಾಕ್ಲಾಸ್ ವೇಷ ಧರಿಸಿ ಕಾಂತಾರ ಪಂಜುರ್ಲಿ ಆವೇಷದ ಅಣಕು: ಸಾರ್ವಜನಿಕರಿಂದ ಆಕ್ರೋಶ

ಉಡುಪಿ: ಕ್ರಿಸ್ಮಸ್ ಹಿನ್ನಲೆಯಲ್ಲಿ ಸಾಂತಾಕ್ಲಾಸ್ ವೇಷದಲ್ಲಿ ಮನೆಮನೆಗೆ ಭೇಟಿ ನೀಡಿ ಉಡುಗೊರೆಗಳನ್ನು ನೀಡುವುದು ಹಿಂದಿನ ಕಾಲದಿಂದಲೂ ವಾಡಿಕೆ. ಟರ್ಕಿಯ ಸೇಂಟ್ ನಿಕೋಲಸ್ ಎನ್ನುವ ಪಾದ್ರಿಯೊಬ್ಬರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ ಉಡುಗೊರೆಗಳನ್ನು ನೀಡುತ್ತಿದ್ದು ಅವರ ಹೆಸರು ನೆದರ್ಲ್ಯಾಂಡ್ಸ್ ದೇಶದಲ್ಲಿ ಸಿಂಟರ್ಕ್ಲಾಸ್ ಎಂದು ಅಪಭ್ರಂಶವಾಗಿ ಮುಂದೆ ಅಮೇರಿಕಾ ಮತ್ತು ಯೂರೋಪ್ ಗಳಲ್ಲಿ ಸಾಂಟಾಕ್ಲಾಸ್ ಎಂದು ಕರೆಯಲ್ಪಟ್ಟು ವಿಶ್ವಾದ್ಯಂತ ಪ್ರಸಿದ್ದವಾಯಿತು. ಸೇಂಟ್ ನಿಕೋಲಸ್ ನೆನಪಿಗಾಗಿ ಕ್ರಿಸ್ ಮಸ್ ಹಬ್ಬದಂದು ಸಾಂಟಾಕ್ಲಾಸ್ ವೇಷ ಧರಿಸಿ ಉಡುಗೊರೆ ನೀಡುವುದು ಎಲ್ಲೆಲ್ಲೂ ನಡೆಯುತ್ತಿದೆ. ಆದರೆ ಈ […]