ಪ್ರಧಾನಿ ಮೋದಿ ಆಡಳಿತ ದೇಶಕ್ಕೆ ಹೊಸ ದಿಸೆ ಕೊಟ್ಟಿದೆ, ಯಶಸ್ವಿ ನಾಯಕತ್ವದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ
ಉಡುಪಿ:ಹಿಂದೆ ನಮ್ಮ ದೇಶದ ನಾಯಕತ್ವ ಮಾತ್ರ ಅಲ್ಲ, ಜನರ ರಕ್ತದಲ್ಲಿಯೇ ಭ್ರಷ್ಟಚಾರ ಇತ್ತು. ಅದು ಈಗ ಸಂಪೂರ್ಣ ನಿವಾರಣೆ ಆಗಿದೆ ಎಂದು ಹೈಕೋರ್ಟ್‌ನ ವಕೀಲ ಸಂದೇಶ್ ಕುಮಾರ್ ಶೆಟ್ಟಿ ಹೇಳಿದರು. ಉಡುಪಿ ಪ್ರೇರಣಾ ಸಂಘಟನೆಯ ವತಿಯಿಂದ ಕಿನ್ನಿಮುಲ್ಕಿ ವೀರಭದ್ರ ಕಲಾಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಬದಲಾಗುತ್ತಿರುವ ಭಾರತ’ ಎಂಬ ವಿಷಯದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರವನ್ನು ಪ್ರಗತಿ ಪಥದತ್ತಾ ಕೊಂಡೊಯ್ಯುವುದರ ಜತೆಗೆ ಅದಕ್ಕೆ ಸಂಪೂರ್ಣ ಶಕ್ತಿ ತುಂಬಿದಾಗ ಮಾತ್ರ ರಾಜಕೀಯ ನಾಯಕತ್ವ ಯಶಸ್ವಿಯಾಗುತ್ತದೆ. ಸ್ವಾತಂತ್ರ್ಯ ಪಡೆದ ಬಳಿಕ […]