ಬೆಂಗಳೂರು ಪೊಲೀಸರಿಂದ ಚಂದನ ಚೋರರ ಬಂಧನ: ಒಟ್ಟು 3 ಕೋಟಿ ರೂ. ಮೌಲ್ಯದ ಸೊತ್ತು ವಶ
ಬೆಂಗಳೂರು: ಎಂಟು ಚಂದನ ಚೋರರನ್ನು ಬಂಧಿಸಿರುವ ಹೈಗ್ರೌಂಡ್ಸ್ ಪೊಲೀಸರು, ಒಟ್ಟು 3 ಕೋಟಿ ರೂ. ಮೌಲ್ಯದ 730 ಕೆಜಿ ಶ್ರೀಗಂಧ ಮತ್ತು 170 ಕೆಜಿ ಶ್ರೀಗಂಧದ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಗೋವಿಂದ ಸ್ವಾಮಿ, ಕೆ.ಮಧು ಅಲಿಯಾಸ್ ಮಾದ, ವೆಂಕಟೇಶ್, ವರದರಾಜು, ರಮಾಚಂದ್ರ, ವಸೀಮ್ ಬೇಗ್, ರಾಮಚಂದ್ರಪ್ಪ, ನಂಜೇಗೌಡ ಮುಂತಾದವರ ತಂಡವು ಆಗಸ್ಟ್ 1 ರಂದು ಗಾಲ್ಫ್ ಕ್ಲಬ್ ಆವರಣದಲ್ಲಿರುವ ಶ್ರೀಗಂಧದ ಮರವನ್ನು ಕಡಿದು ಹಾಕಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಹಾಯಕ ಪೊಲೀಸ್ […]