ಅಖಂಡ ರಷಿಯಾಕ್ಕೆ ಮುನ್ನುಡಿ ಬರೆದರೆ ವ್ಲಾದಿಮಿರ್ ಪುತಿನ್? ರಕ್ತಪಾತವಿಲ್ಲದೆ ಉಕ್ರೇನ್ ಆಯಿತು ಮೂರು ತುಂಡು!
ನವದೆಹಲಿ: ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವದ ಮಾಧ್ಯಮಗಳು ವ್ಲಾದಿಮಿರ್ ಪುತಿನ್ ಅನ್ನು ಒಬ್ಬ ಸರ್ವಾಧಿಕಾರಿ, ನಿರ್ದಯಿ ನಾಯಕನೆಂದು ಜರೆಯುತ್ತಿರಬಹುದು. ಆತನನ್ನು ಖಳನಾಯಕನಂತೆ ಬಿಂಬಿಸುತ್ತಿರಬಹುದು. ಆದರೆ ತನ್ನ ರಾಷ್ಟ್ರದ ಅಖಂಡತೆಯ ವಿಷಯ ಬಂದಾಗ ಎಂತಹ ಕಠೋರ ನಿರ್ಧಾವನ್ನು ತೆಗೆದುಕೊಳ್ಳಲೂ ಹಿಂಜರಿಯುವುದಿಲ್ಲ, ತಾನು ಯಾರಿಗೂ ಜಗ್ಗುವುದಿಲ್ಲ ಎನ್ನುವುದನ್ನವರು ಮತ್ತೊಮ್ಮೆ ಜಗಜ್ಜಾಹೀರು ಮಾಡಿದ್ದಾರೆ. ತನ್ನ ‘ಅಖಂಡ ರಷಿಯಾ’ ನೀತಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪುತಿನ್ ಮುಂದಡಿಯಿಟ್ಟು, ಮಗ್ಗುಲ ಮುಳ್ಳಾಗಿದ್ದ ಉಕ್ರೇನ್ ಅನ್ನು ಶಸ್ತ್ರಾಸ್ತ್ರಗಳ ಸಹಾಯವಿಲ್ಲದೆಯೆ ಮೂರು ತುಂಡುಗಳಾಗಿ ವಿಭಾಗಿಸಿದ್ದಾರೆ! ರಷಿಯಾಕ್ಕೆ ಅಂಟಿಕೊಂಡಿರುವ ಪೂರ್ವ […]