ಅಂಬಾಗಿಲು-ಗುಂಡಿಬೈಲು-ಕಲ್ಸಂಕ ಮಾರ್ಗದಲ್ಲಿ ಬಸ್ ಸಂಚಾರ ಕಡ್ಡಾಯ: ಪ್ರಾದೇಶಿಕ ಸಾರಿಗೆ ಕಚೇರಿ

ಉಡುಪಿ: ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆ ಸಂತೆಕಟ್ಟೆಯಿಂದ ಉಡುಪಿ ಕಡೆಗೆ ತೆರಳುವ ಕೆಲವೊಂದು ಬಸ್ಸಿನ ಪರವಾನಿಗೆಯಲ್ಲಿ ನಿಟ್ಟೂರು-ರಾ.ಹೆ. 17 ಎಂದು ನಮೂದಿಸಿರುವ ಬಸ್ಸುಗಳು ಅಂಬಾಗಿಲು ರಾ.ಹೆ. 66 ಕರಾವಳಿ ಬೈಪಾಸಿನಿಂದ ಅಂಬಲಪಾಡಿ ಬೈಪಾಸ್-ಬ್ರಹ್ಮಗಿರಿ-ಅಜ್ಜರಕಾಡು-ತಾಲೂಕು ಕಚೇರಿ ಮೂಲಕ ಹಾಗೂ ಉಳಿದ ಸಿಟಿ ಬಸ್ಸುಗಳು ಅಂಬಾಗಿಲು ತಾಂಗದಗಡಿ-ಗುಂಡಿಬೈಲು ಮೂಲಕ ಕಲ್ಸಂಕಕ್ಕೆ ಬಂದು ಬೃಂದಾವನ ಹೋಟೆಲ್ ಬಳಿ ಎಡಕ್ಕೆ ತಿರುಗಿ ಖಾಫಿಯ ಹೋಟೆಲ್ ಬಳಿ ಬಲಕ್ಕೆ ತಿರುಗಿ ಸಿಟಿ ಬಸ್ಸು ನಿಲ್ದಾಣಕ್ಕೆ ಹಾಗೂ ಬಾರ್ಕೂರು-ಬ್ರಹ್ಮಾವರ-ಹೊನ್ನಾಳ-ಹೆಬ್ರಿ-ಪೆರ್ಡೂರು-ಕುಕ್ಕೆಹಳ್ಳಿ ಹಾಗೂ ಇತರೆ ಕಡೆಯಿಂದ ಬರುವ ಷಟಲ್ ಸರ್ವೀಸ್ ಬಸ್ಸುಗಳು […]

ವಾಹನ ಸಂಬಂಧಿತ ಕೆಲಸಗಳಿಗೆ ವಾಹನ-4 ತಂತ್ರಾಂಶದಲ್ಲಿ ಅರ್ಜಿ ಸಲ್ಲಿಕೆಗೆ ಆರ್.ಟಿ.ಒ ಸೂಚನೆ

ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ವಾಹನಗಳಿಗೆ ಸಂಬಂಧಿಸಿದಂತೆ ವಾಹನ ಮಾರಾಟ, ವಾಹನದದ ಕಂತು ಕರಾರು ನಮೂದು, ಕಂತು ಕರಾರು ರದ್ಧತಿ, ವಿಳಾಸ ಬದಲಾವಣೆ, ತೆರಿಗೆ ತೀರುವಳಿ ಪತ್ರ, ವಾಹನದ ನೋಂದಣಿ ನವೀಕರಣ ಹಾಗೂ ವಾಹನಕ್ಕೆ ಸಂಬಂಧಿಸಿದ ಇನ್ನಿತರ ಯಾವುದೇ ಕೆಲಸಗಳಿಗೆ ಅರ್ಜಿ ಸಲ್ಲಿಸುವಾಗ ಅರ್ಜಿ ನಮೂನೆ ಹಾಗೂ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ವಾಹನ-4 ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ಸಲ್ಲಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರಜತಾದ್ರಿ: ಸೆಪ್ಟಂಬರ್ 14 ರಂದು ಆಟೋರಿಕ್ಷಾ ದರ ಪರಿಷ್ಕರಣಾ ಸಭೆ

ಮಣಿಪಾಲ: ಜಿಲ್ಲೆಯ ಆಟೋರಿಕ್ಷಾ ದರ ಪರಿಷ್ಕರಣೆ ಮತ್ತು 2012 ಏಪ್ರಿಲ್ 21 ರ ಅಧಿಸೂಚನೆ ಮಾರ್ಪಾಡುಗೊಳಿಸುವ ಕುರಿತು ಸೆಪ್ಟಂಬರ್ 14 ರಂದು ಮಧ್ಯಾಹ್ನ 2.30 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಟೋರಿಕ್ಷಾ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬಳಕೆದಾರರ ವೇದಿಕೆ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಿದ ಎಲ್ಲಾ ಸಂಘ-ಸಂಸ್ಥೆ ಮತ್ತು ಸಾರ್ವಜನಿಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಗಳ ಪ್ರಕಟಣೆ ತಿಳಿಸಿದೆ.

ಮಣಿಪಾಲ ಆರ್ ಟಿಒ ಕಚೇರಿಗೆ ಎಸಿಬಿ ದಾಳಿ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರ್ ಟಿಒ ಅಧಿಕಾರಿ ವರ್ಣೇಕರ್

ಉಡುಪಿ: ಬೆಂಕಿಗೆ ಅಹುತಿಯಾದ ಕಾರಿನ ತೆರಿಗೆ ಮರುಪಾವತಿ ಸಂಬಂಧಿಸಿದಂತೆ ಮಾಲೀಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಉಡುಪಿ ಉಪ ಸಾರಿಗೆ ಆಯುಕ್ತ ಹಾಗೂ ಜಿಲ್ಲಾ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ. ವರ್ಣೇಕರ್ ಮತ್ತು ಸಹಾಯಕ ಮುನಾಫ್ ರೆಡ್ ಹ್ಯಾಂಡ್ ಆಗಿ ಉಡುಪಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ. ಕಾರು ಮಾಲೀಕ ಉಡುಪಿಯ ವಿಘ್ನೇಶ್ ಎಂಬುವವರ ದೂರಿನಂತೆ ಇಂದು ಮಧ್ಯಾಹ್ನ ಮಣಿಪಾಲದ ಆರ್ ಟಿಒ ಕಚೇರಿಗೆ ಹಠಾತ್ ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಸಂಭವಿಸಿದ […]