ಮುಟ್ಟುಗೋಲು ಹಾಕಿಕೊಂಡ ವಾಹನಗಳ ಬಹಿರಂಗ ಹರಾಜು

ಉಡುಪಿ: ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯ ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದು, ಸದರಿ ವಾಹನಗಳ ಮಾಲೀಕರು ಇದುವರೆಗೂ ಈ ವಾಹನಕ್ಕೆ ನೀಡಿರುವ ತನಿಖಾ ವರದಿಯಂತೆ ವಾಹನ ಬಿಡಿಸಿಕೊಳ್ಳಲು ಮುಂದೆ ಬಾರದಿರುವ ಹಿನ್ನೆಲೆ, ವಾಹನಗಳನ್ನು ನಿಂತಿರುವ ಸ್ಥಳಗಳಲ್ಲಿ ಯಥಾ ಸ್ಥಿತಿಯಲ್ಲಿ ನವೆಂಬರ್ 3 ರಂದು ಬೆಳಗ್ಗೆ 11 ಗಂಟೆಗೆ ನಗರದ ಮಣಿಪಾಲ ರಜತಾದ್ರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಬಹಿರಂಗ ಹರಾಜು ಮಾಡಲಾಗುವುದು. ಆದ್ದರಿಂದ ವಾಹನಗಳನ್ನು ಹೊಂದಿರುವ […]

ಬಸ್ ಗಳಲ್ಲಿನ ಕರ್ಕಶ ಹಾರ್ನ್ ಗಳನ್ನು ತೆರವುಗೊಳಿಸಲು ಆರ್.ಟಿ.ಓ ಸೂಚನೆ

ಉಡುಪಿ: ಜಿಲ್ಲೆಯಾದ್ಯಂತ ಖಾಸಗಿ ಬಸ್ಸುಗಳಲ್ಲಿ ಅಳವಡಿಸಿರುವ ಕರ್ಕಶ ಹಾರ್ನ್ ಗಳಿಂದಾಗಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆ, ಪ್ರಕಟಣೆಯ ಏಳು ದಿನಗಳ ಒಳಗೆ ಬಸ್ಸುಗಳಲ್ಲಿನ ಕರ್ಕಶ ಹಾರ್ನ್ಗಳನ್ನು ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಪರವಾನಿಗೆಯನ್ನು ಅಮಾನತುಗೊಳಿಸಿ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜುಲೈ 19 ರಂದು ಮುಟ್ಟುಗೋಲು ಹಾಕಿರುವ ವಾಹನಗಳ ಹರಾಜು ಪ್ರಕ್ರಿಯೆ

ಉಡುಪಿ: ಉಡುಪಿ ಸಾರಿಗೆ ಇಲಾಖೆಯ ವಾಹನ ನಿರೀಕ್ಷಕರು ಮುಟ್ಟುಗೋಲು ಹಾಕಿಕೊಂಡಿರುವ ವಾಹನಗಳ ಮಾಲೀಕರು ಇಂದಿನವರೆಗೆ, ವಾಹನಗಳನ್ನು ಬಿಡಿಸಿಕೊಳ್ಳಲು ಮುಂದೆ ಬಾರದ ಕಾರಣ, ಈ ವಾಹನಗಳನ್ನು ಅವುಗಳು ಹೇಗಿವೆಯೋ ಹಾಗೆಯೇ ಜುಲೈ 19 ರಂದು ಬೆ.11 ಗಂಟೆಗೆ ಉಡುಪಿ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಹರಾಜು ಹಾಕಲಾಗುವುದು. ಸದ್ರಿ ವಾಹನಗಳ ಮಾಲೀಕರು 10 ದಿನಗಳ ಒಳಗೆ ವಾಹನಗಳ ದಾಖಲಾತಿಗಳನ್ನು ನೀಡಿ ದಂಡ ಪಾವತಿಸಿ ವಾಹನಗಳನ್ನು ಹರಾಜು ಪ್ರಕ್ರಿಯೆಯಿಂದ ಬಿಡಿಸಿಕೊಳ್ಳಬಹುದು ಇಲ್ಲವಾದಲ್ಲಿ ಹರಾಜು ದಿನದಂದು ಖುದ್ದಾಗಿ ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಾದೇಶಿಕ […]

ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್‌ಗಳ ತೆರವಿಗೆ ಸೂಚನೆ

ಉಡುಪಿ: ರಾಜ್ಯ ವಿಧಾನಸಭೆ ಚುನಾವಣೆ – 2023 ಕ್ಕೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ, ಜಿಲ್ಲೆಯ ಎಲ್ಲಾ ಆಟೋರಿಕ್ಷಾಗಳಲ್ಲಿ ರಾಜಕೀಯ ಸಂಬಂಧಿತ ಪೋಸ್ಟರ್‌ಗಳನ್ನು ತೆರವುಗೊಳಿಸಬೇಕು ಮತ್ತು ಯಾವುದೇ ರೀತಿಯ ರಾಜಕೀಯ ಸಂಬಂಧಿತ ಪೋಸ್ಟರ್‌ಗಳನ್ನು ಅಳವಡಿಸದಂತೆ ಆಟೋರಿಕ್ಷಾ ಚಾಲಕರು ಹಾಗೂ ಮಾಲಕರು ಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ಅಂತಹ ವಾಹನಗಳ ಪರವಾನಿಗೆಯನ್ನು ರದ್ದುಗೊಳಿಸಿ, ಎಫ್.ಐ.ಆರ್ ದಾಖಲಿಸಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಟಿ.ಒಗೆ ವಾಹನ ಅಡಮಾನ ರದ್ಧತಿ ಹಾಗೂ ನಿರಪೇಕ್ಷಣಾ ಪತ್ರ ಸಲ್ಲಿಕೆ ಕಡ್ಡಾಯ

ಉಡುಪಿ: ವಾಹನಕ್ಕೆ ಆರ್ಥಿಕ ನೆರವು ನೀಡುವ ಬ್ಯಾಂಕ್‌ಗಳು, ಸಂಸ್ಥೆಗಳು ಹಾಗೂ ಇತರೆ ಹಣಕಾಸು ಸಂಸ್ಥೆಗಳು ವಾಹನದ ಅಡಮಾನ ರದ್ಧತಿಗಾಗಿ ನಮೂನೆ-35 ಹಾಗೂ ನಿರಪೇಕ್ಷಣಾ ಪತ್ರ ನೀಡಿದ ಕೂಡಲೇ ಅಂತಹ ವಾಹನಗಳ ವಿವರಗಳನ್ನು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಇ-ಮೇಲ್ [email protected] ಮೂಲಕ ಕಡ್ಡಾಯವಾಗಿ ಮಾಹಿತಿಯನ್ನು ರವಾನಿಸುವಂತೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.