ದೇವರೇ ಒಮ್ಮೆ ಕಾಲೇಜು ಶುರುವಾಗಲಿ, ನನ್ನ ಕಣ್ಣು ಅವನನ್ನು ಕಾಣಲಿ
ಬೇಸರದಿಂದ ನಾ ಕುಳಿತುಕೊಂಡು, ನಿನ್ನ ದಾರಿಯ ಹುಡುಕುತ್ತಾ ಕಾದುಕೊಂಡು, ನಿನ್ನ ಬಳಿಗೆ ಈಗ ಬರಲು ಸಾಧ್ಯವಿಲ್ಲ ಎಂದು ತಿಳಿದಾಗ ಮನಸ್ಸಿಗೆ ತೋಚಿದ್ದನ್ನ ತಕ್ಷಣ ಬರೆದ ಲೇಖನವಿದು. ಅಯ್ಯೋ ಸಮಯ ಓಡುತಿದೆ ,ಕಾಲ ಉರುಳುತಿದೆ. ಆದರೆ ನನ್ನ ಮನಸು ಮಾತ್ರ ನಿನ್ನನೇ ಕಾಯುತಿದೆ. ನಿನ್ನ ಬಿಟ್ಟು ಇದೀಗ ನಾಲ್ಕು ತಿಂಗಳುಗಳು ಕಳೆದಿವೆ. ನಿನ್ನ ನೋಡಲು ಮನ ತವಕ ಪಡುತ್ತಿದೆ. ನಿನ್ನ ಮಾತನಾಡಿಸಲು ಮನಸು ಚಂಚಲಿಸುತ್ತಿದೆ. ನಿನ್ನೊಂದಿಗೆ ಕಳೆದ ದಿನಗಳನ್ನು ಮತ್ತೆ ,ಮತ್ತೆ ನೆನಪಿಸುತ್ತಾ ಕುಳಿತರೆ ಸಂತೋಷದ ಜೊತೆಗೆ ಕಣ್ಣೀರು […]