ದೇವರೇ ಒಮ್ಮೆ ಕಾಲೇಜು ಶುರುವಾಗಲಿ, ನನ್ನ ಕಣ್ಣು ಅವನನ್ನು ಕಾಣಲಿ

 

          ರೋಶಲ್  ಕೊರ್ಡೆರೋ

ಬೇಸರದಿಂದ ನಾ ಕುಳಿತುಕೊಂಡು, ನಿನ್ನ ದಾರಿಯ ಹುಡುಕುತ್ತಾ ಕಾದುಕೊಂಡು, ನಿನ್ನ ಬಳಿಗೆ ಈಗ ಬರಲು ಸಾಧ್ಯವಿಲ್ಲ ಎಂದು ತಿಳಿದಾಗ ಮನಸ್ಸಿಗೆ ತೋಚಿದ್ದನ್ನ ತಕ್ಷಣ ಬರೆದ ಲೇಖನವಿದು.

ಅಯ್ಯೋ ಸಮಯ ಓಡುತಿದೆ ,ಕಾಲ ಉರುಳುತಿದೆ. ಆದರೆ ನನ್ನ ಮನಸು ಮಾತ್ರ ನಿನ್ನನೇ ಕಾಯುತಿದೆ. ನಿನ್ನ ಬಿಟ್ಟು ಇದೀಗ ನಾಲ್ಕು ತಿಂಗಳುಗಳು  ಕಳೆದಿವೆ. ನಿನ್ನ ನೋಡಲು ಮನ  ತವಕ ಪಡುತ್ತಿದೆ. ನಿನ್ನ ಮಾತನಾಡಿಸಲು ಮನಸು ಚಂಚಲಿಸುತ್ತಿದೆ. ನಿನ್ನೊಂದಿಗೆ ಕಳೆದ ದಿನಗಳನ್ನು ಮತ್ತೆ ,ಮತ್ತೆ  ನೆನಪಿಸುತ್ತಾ  ಕುಳಿತರೆ ಸಂತೋಷದ  ಜೊತೆಗೆ ಕಣ್ಣೀರು ಸುರಿಯುತ್ತದೆ. ನಿನ್ನ ಜೊತೆಗೆ ಇದ್ದಾಗ ನಿನ್ನ ಬೆಲೆಯು ತಿಳಿಯಲಿಲ್ಲ. ಆದರೆ ನಿನ್ನ ಬಿಟ್ಟು ಇಷ್ಟು ದಿನ ಇರಬೇಕಾದರೆ ನೀನೆ ಬೇಕೆಂದು ಮನಸು ಹೇಳುತ್ತಿದೆ.

ನಿನ್ನ ಜೊತೆ ಇದ್ದಾಗ ನೀನು ಅನೇಕರನ್ನು ಪರಿಚಯಿಸಿಕೊಟ್ಟೆ. ನನ್ನ ,ನಿನ್ನ ನಡುವೆ ಅವರನ್ನು ಸೇರಿಸಿಕೊಂಡು ನಮ್ಮೆಲ್ಲರ ಬಾಂಧ್ಯವವನ್ನು ಗಟ್ಟಿಗೊಳಿಸಿದೆ. ಅಂದು ಪಡೆದ ಆ ಖುಷಿ ಇಂದು ಇಲ್ಲದಾಗಿದೆ. ಆ ಖುಷಿಗಾಗಿಯೆ ನನ್ನ ಮನಸು ನಿನ್ನ ಕಾಯುತಿದೆ. ಅಂದು ನಾವೆಲ್ಲ ಒಂದಾಗಿ ಆಡಿದ ಆಟ, ಮಾಡಿದ ನೃತ್ಯ, ಹಾಡಿದ ಪದ್ಯ , ತುಂಟಾಟ  ಎಲ್ಲವೂ ಮಾಯವಾಗಿದೆ. ನಿನ್ನ ಜೊತೆಗೂಡಿ ಕಳೆದ ಕ್ಷಣಗಳೆಲ್ಲವೂ ಕೇವಲ ಇಂದು ಕಲ್ಪನೆಯಾಗಿದೆ. ಆ  ಕಲ್ಪನೆಯೇ ಪ್ರತಿದಿನ ನನ್ನನ್ನು ನೆನಪಿಸಿ , ನೆನಪಿಸಿ  ಯಾವಾಗ ನೀನು ಮತ್ತೆ ಸಿಗುವೆಂದು ನನ್ನ ಮನಸು ಕಾಯುತಿದೆ.

ದೇವರೇ  ಒಮ್ಮೆ  ಎಲ್ಲ ಪರಿಸ್ಥಿತಿಯೂ ಸರಿಯಾಗಿ, ಎಲ್ಲವೂ ಮೊದಲಿನ  ಸ್ಥಿತಿಗೆ ಪರಿವರ್ತನೆಯಾಗಿ ಬೇಗನೆ ನಮ್ಮಿಬ್ಬರ ಭೇಟಿಯಾಗಲಿ. ಯಾವಾಗ ನನ್ನ – ನಿನ್ನ ಭೇಟಿ…? ಮೊದಲಿನ ಸುಂದರ ಕ್ಷಣಕ್ಕಾಗಿ ಕಾಯುತಿರುವೆ ನಾ ಕಾಲೇಜಿನ ಮೆಟ್ಟಿಲೇರಲು.

ರೋಶಲ್  ಕೊರ್ಡೆರೋ