ರಷ್ಯಾದ “ಡ್ಯಾಡಿ” ಬಾಟ್ಸ್ ಅನ್ನು ಸೋಲಿಸಿದ ಭಾರತದ “ಗಾಡ್‌ಸ್ಪೀಡ್”: ರೋಬೋಟ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಡಿಎಸ್ ರೋಬೋಟಿಕ್ಸ್

ಮಾಸ್ಕೋ: ಕೌಶಲ್ಯ ಮತ್ತು ಕಾರ್ಯತಂತ್ರದ ಅದ್ಭುತ ಪ್ರದರ್ಶನದಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್ ರೋಬೋಟ್ ಯುದ್ಧದಲ್ಲಿ ರಷ್ಯಾದ ಅತ್ಯುತ್ತಮ ತಂಡ ಡ್ಯಾಡಿ ಬಾಟ್ಸ್ ಅನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ರಷ್ಯಾದಲ್ಲಿ ನಡೆದ ‘ಗೇಮ್ಸ್ ಆಫ್ ದಿ ಫ್ಯೂಚರ್’ ಪಂದ್ಯಾವಳಿಯಲ್ಲಿ ಮಾಸ್ಕೋದ ಟರ್ಬೊಮೆಕಾಟ್ರೊನಿಕಿ ನಂತರದ ಸ್ಥಾನವನ್ನು ಗಳಿಸಿದ ರಷ್ಯಾದ ಡ್ಯಾಡಿ ಬಾಟ್ಸ್ ತಂಡವನ್ನು ಹಿಂದಿಕ್ಕಿ ಭಾರತದ ಡಿಎಸ್ ರೋಬೋಟಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫಿನಾಲೆಯಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್, ತಮ್ಮ “ಗಾಡ್‌ಸ್ಪೀಡ್” ಎಂಬ ರೋಬೋಟ್‌ನೊಂದಿಗೆ, ರಷ್ಯಾದ “ಡ್ಯಾಡಿ” ಎಂಬ […]

ಗುಜರಾತ್‌ನ ರೋಬೋಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಚಹಾ ಸವಿದ ಪ್ರಧಾನಿ ಮೋದಿ

ಅಹಮದಾಬಾದ್: ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ರೊಬೊಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ ನೀಡಿದ ಒಂದು ಕಪ್ ಚಹಾವನ್ನು ಆನಂದಿಸಿದರು. ಬುಧವಾರ ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸೈನ್ಸ್ ಸಿಟಿಯಲ್ಲಿ ರೋಬೋಟ್ ಪ್ರದರ್ಶನಕ್ಕೆ ಭೇಟಿ ನೀಡಿದ ಪ್ರಧಾನಿ, ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆಯನ್ನು ಉದ್ಘಾಟಿಸಿದರು. ರೋಬೋಟಿಕ್ಸ್ ಗ್ಯಾಲರಿಯು DRDO ರೋಬೋಟ್‌ಗಳು, ಮೈಕ್ರೋಬೋಟ್‌ಗಳು, ಕೃಷಿ ರೋಬೋಟ್, ವೈದ್ಯಕೀಯ ರೋಬೋಟ್‌ಗಳು, ಸ್ಪೇಸ್ ರೋಬೋಟ್ ಮತ್ತು ಹೆಚ್ಚಿನದನ್ನು ಪ್ರದರ್ಶಿಸುತ್ತದೆ. ಈ ಆಕರ್ಷಕ ಪ್ರದರ್ಶನಗಳ ಮೂಲಕ, ಆರೋಗ್ಯ ರಕ್ಷಣೆ, ಉತ್ಪಾದನೆ ಮತ್ತು ದೈನಂದಿನ ಜೀವನದಲ್ಲಿ […]