ಕಾಂತಾರ-1 (ಪ್ರೀಕ್ವಲ್) ಚಿತ್ರೀಕರಣ ಆರಂಭ: ರಾಜನ ಪಾತ್ರಧಾರಿಗೆ ದೈವದ ಅಭಯ

ಕುಂದಾಪುರ: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದ್ದ ಕಾಂತಾರ ಚಿತ್ರದ ಪ್ರೀಕ್ವಲ್ ಚಿತ್ರೀಕರಣ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಸದ್ದಿಲ್ಲದೇ ಕಾಂತಾರ 1 ಚಲನಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದಾರೆ ಎನ್ನಲಾಗಿದ್ದು, ಕುಂದಾಪುರದ ಕೆರಾಡಿಯಲ್ಲಿ ಹಾಕಿರುವ ಸೆಟ್ ನಲ್ಲೇ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾದಲ್ಲಿ ರಾಜನ ಪಾತ್ರವನ್ನು ಮಾಡುತ್ತಿರುವ ವಿನಯ್ ಬಿದ್ದಪ್ಪ ಪುತ್ತೂರಿನ ಕಲ್ಲುರ್ಟ್ಟಿ ದೈವದ ಸನ್ನಿಧಿಯಲ್ಲಿ ಪ್ರಾರ್ಥಿಸಿದ್ದಾರೆ. ಸಿನಿಮಾ ಕುರಿತಂತೆ ದೈವ ಅವರಿಗೆ ಅಭಯ ನೀಡಿದೆ ಎಂದು ವರದಿ ಹೇಳಿದೆ.

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕ್ಷಣಕ್ಕೆ ಸಾಕ್ಷೀಭೂತರಾದ ರಿಷಬ್ ಶೆಟ್ಟಿ ದಂಪತಿ

ಅಯೋಧ್ಯೆ: ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ದೇಶಾದ್ಯಂತದ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದರು. ವಿವಿಧ ಭಾಷೆಗಳ ಚಿತ್ರರಂಗದ ದಿಗ್ಗಜರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ನಟ ನಿರ್ದೇಶಕ ರಿಷಬ್ ಶೆಟ್ಟಿ ದಂಪತಿಗಳೂ ಪ್ರಾಣ ಪ್ರತಿಷ್ಠೆಯ ಸಮಾರಂಭವನ್ನು ಕಣ್ತುಂಬಿಕೊಂಡಿದ್ದಾರೆ. ಅಯೋಧ್ಯೆಯ ಪ್ರಸಿದ್ಧ ಹನುಮಾನ್ ಗರ್ಹಿ ದೇವಸ್ಥಾನ ಮತ್ತು ನೂತನ ರಾಮಮಂದಿರದ ಎದುರು ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕಾಂತಾರ ಅಧ್ಯಾಯ-1 ಮೊದಲ ನೋಟ ಮತ್ತು ಟೀಸರ್ ಬಿಡುಗಡೆ! ಇದು ಬೆಳಕಲ್ಲ, ದರ್ಶನ!!

ರಾಜ್ಯ, ದೇಶ ಮಾತ್ರವಲ್ಲ ವಿದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಿತ್ರದ ಪ್ರೀಕ್ವಲ್ ಕಾಂತಾರ ಅಧ್ಯಾಯ-1 ಇದು ಬೆಳಕಲ್ಲ, ದರ್ಶನ… ಚಿತ್ರದ ಎರಡನೇ ಭಾಗದ ಮೊದಲ ನೋಟ ಮತ್ತು ಟೀಸರ್ ಇಂದು ಮಧ್ಯಾಹ್ನ ಬಿಡುಗಡೆ ಹೊಂದಿದೆ. ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಈ ಬಗ್ಗೆ ಮಾಹಿತಿ ನೀಡಿದೆ. ಚಿತ್ರವು ಕನ್ನಡ, ಹಿಂದಿ, ಇಂಗ್ಲಿಷ್, ಬಂಗಾಳಿ, ತಮಿಳು, ತೆಲು ಮತ್ತು ಮಳಯಾಳಂ ಭಾಷೆಯಲ್ಲಿ ಬಿಡುಗಡೆ ಹೊಂದಲಿದೆ. ಚಿತ್ರದ ಮೊದಲನೆ ನೋಟ ಕುತೂಹಲ […]