ಕಾಂತಾರ ಅಧ್ಯಾಯ-1 ಮೊದಲ ನೋಟ ಮತ್ತು ಟೀಸರ್ ಬಿಡುಗಡೆ! ಇದು ಬೆಳಕಲ್ಲ, ದರ್ಶನ!!

ರಾಜ್ಯ, ದೇಶ ಮಾತ್ರವಲ್ಲ ವಿದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಕಾಂತಾರ ಚಿತ್ರದ ಪ್ರೀಕ್ವಲ್ ಕಾಂತಾರ ಅಧ್ಯಾಯ-1 ಇದು ಬೆಳಕಲ್ಲ, ದರ್ಶನ… ಚಿತ್ರದ ಎರಡನೇ ಭಾಗದ ಮೊದಲ ನೋಟ ಮತ್ತು ಟೀಸರ್ ಇಂದು ಮಧ್ಯಾಹ್ನ ಬಿಡುಗಡೆ ಹೊಂದಿದೆ. ಚಿತ್ರದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಈ ಬಗ್ಗೆ ಮಾಹಿತಿ ನೀಡಿದೆ.

ಚಿತ್ರವು ಕನ್ನಡ, ಹಿಂದಿ, ಇಂಗ್ಲಿಷ್, ಬಂಗಾಳಿ, ತಮಿಳು, ತೆಲು ಮತ್ತು ಮಳಯಾಳಂ ಭಾಷೆಯಲ್ಲಿ ಬಿಡುಗಡೆ ಹೊಂದಲಿದೆ.

ಚಿತ್ರದ ಮೊದಲನೆ ನೋಟ ಕುತೂಹಲ ಕೆರಳಿಸಿದೆ ಮತ್ತು ಟೀಸರ್ ಭಯಾನಕವೆನಿಸುವಷ್ಟು ಮನೋಜ್ಞವಾಗಿದೆ. ರಿಷಬ್ ಶೆಟ್ಟಿ ಅವರ ರುದ್ರ ಅವತಾರವು ನೆಟ್ಟಿಗರಿಗೆ ಮೋಡಿ ಮಾಡುತ್ತಿದೆ. ಚಿತ್ರವು ಕದಂಬರ ಕಾಲದ ಕಥಾಹಂದರವನ್ನು ಒಳಗೊಂಡಿರುವಂತೆ ಟೀಸರ್ ನಲ್ಲಿ ಬಿಂಬಿಸಲಾಗಿದೆ. ಟೀಸರ್ ಬಿಡುಗಡೆಯಾದ ಅರ್ಧ ಗಂಟೆಯಲ್ಲಿ 4,89457 ವೀವ್ಸ್ ಗಳನ್ನು ಪಡೆದುಕೊಂಡಿದೆ.