ರೂಪಾಯಿಯಲ್ಲೆ ಅಂತರರಾಷ್ಟ್ರೀಯ ವ್ಯಾಪಾರ ಪಾವತಿ: ರೂಪಾಯಿ ಬಲವರ್ಧನೆಗೆ ಆರ್‌ಬಿಐ ಉಪಕ್ರಮ

ನವದೆಹಲಿ: ಇನ್ನು ಮುಂದೆ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಪಾವತಿಗಳನ್ನು ಮಾಡಲು ಆರ್‌ಬಿಐ ಒಂದು ಕಾರ್ಯವಿಧಾನವನ್ನು ಸ್ಥಾಪಿಸಿದೆ. ರೂಪಾಯಿಯಲ್ಲೇ ರಫ್ತು ಮತ್ತು ಆಮದುಗಳ ಇನ್‌ವಾಯ್ಸ್, ಪಾವತಿ ಮತ್ತು ಸೆಟಲ್ ಮೆಂಟ್ ಗಳನ್ನು ನಡೆಸಲು ಕೇಂದ್ರ ಬ್ಯಾಂಕ್ ಈ ಹೆಚ್ಚುವರಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಕ್ರಮವು ಭಾರತದ ರಫ್ತಿಗೆ ಒತ್ತು ನೀಡುವ ಮೂಲಕ ಜಾಗತಿಕ ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತೀಯ ರೂಪಾಯಿಯಲ್ಲಿ ಜಾಗತಿಕ ವ್ಯಾಪಾರ ಸಮುದಾಯದ ಹೆಚ್ಚುತ್ತಿರುವ ಆಸಕ್ತಿಯನ್ನು ಬೆಂಬಲಿಸುತ್ತದೆ. ಈ ಕಾರ್ಯವಿಧಾನವನ್ನು ಜಾರಿಗೆ […]

ಕ್ರೆಡಿಟ್ ಕಾರ್ಡ್‌ಗಳನ್ನು ಯುಪಿಐಗೆ ಲಿಂಕ್ ಮಾಡಲು ಅನುಮತಿಸಿದ ಭಾರತೀಯ ರಿಸರ್ವ್ ಬ್ಯಾಂಕ್

ನವದೆಹಲಿ: ರಿಸರ್ವ್ ಬ್ಯಾಂಕ್ ಬುಧವಾರ ಕ್ರೆಡಿಟ್ ಕಾರ್ಡ್‌ಗಳನ್ನು ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನೊಂದಿಗೆ ಲಿಂಕ್ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇದು ಯುಪಿಐ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಪಾವತಿಗಳನ್ನು ಮಾಡಲು ಇನ್ನೂ ಹೆಚ್ಚಿನ ಜನರಿಗೆ ಅನುವು ಮಾಡಿಕೊಡಲಿದೆ. ಪ್ರಸ್ತುತ, ಯುಪಿಐ ಬಳಕೆದಾರರ ಡೆಬಿಟ್ ಕಾರ್ಡ್‌ಗಳ ಮೂಲಕ ಉಳಿತಾಯ ಅಥವಾ ಚಾಲ್ತಿ ಖಾತೆಗಳನ್ನು ಲಿಂಕ್ ಮಾಡುವ ಮೂಲಕ ವಹಿವಾಟುಗಳನ್ನು ನಡೆಸಲಾಗುತ್ತಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ದ್ವೈಮಾಸಿಕ ನೀತಿ ಪರಿಶೀಲನೆಯೊಂದಿಗೆ ನಿಯಂತ್ರಕ ಕ್ರಮಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಈ ಬಗ್ಗೆ […]

ನೋಟುಗಳ ಮೇಲೆ ರವೀಂದ್ರನಾಥ ಟ್ಯಾಗೋರ್, ಎಪಿಜೆ ಅಬ್ದುಲ್ ಕಲಾಂ ವಾಟರ್‌ಮಾರ್ಕ್? ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲ್ಲಿರುವ ಆರ್‌ಬಿಐ

ನವದೆಹಲಿ: ಇದೇ ಮೊದಲ ಬಾರಿಗೆ, ಭಾರತೀಯ ನೋಟುಗಳ ಮೇಲೆ ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಮತ್ತು ಭಾರತದ 11 ನೇ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ವಾಟರ್‌ಮಾರ್ಕ್‌ಗಳನ್ನು ಪರಿಚಯಿಸಲು ಆರ್‌ಬಿಐ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಆರ್‌ಬಿಐ ಜೊತೆಗೆ ಹಣಕಾಸು ಸಚಿವಾಲಯವು ಶೀಘ್ರದಲ್ಲೇ ಭಾರತದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರಾದ ಟ್ಯಾಗೋರ್ ಮತ್ತು ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಕಲಾಂ ಅವರ ಚಿತ್ರವುಳ್ಳ ವಾಟರ್‌ಮಾರ್ಕ್ ಅನ್ನು ಕೆಲವು ಮುಖಬೆಲೆಯ ನೋಟುಗಳ […]

ಕೃಷಿ ಸಾಲಮನ್ನಾ: ಆರ್‌ಬಿಐ ಎಚ್ಚರಿಕೆ

ನವದೆಹಲಿ: ಕೃಷಿ ಸಾಲಮನ್ನಾಕ್ಕೆ ಕಡಿವಾಣ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ರಾಜ್ಯ ಸರ್ಕಾರಗಳಿಗೆ ತಾಕೀತು ಮಾಡಿದೆ. ರಾಜ್ಯಸರ್ಕಾರಗಳ ಸಾಲಮನ್ನಾ ನಿರ್ಧಾರದಿಂದ ಭವಿಷ್ಯದಲ್ಲಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆ ಸಾಮರ್ಥ್ಯಕ್ಕೆ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ರಾಜ್ಯ ಸರ್ಕಾರಗಳ ಕೃಷಿ ಸಾಲಮನ್ನಾ ನಿರ್ಧಾರದಿಂದಾಗಿ ಬ್ಯಾಂಕ್‌ಗಳ ಕೃಷಿ ಸಾಲ ವಿತರಣೆ ಪ್ರಮಾಣ ಶೇ 70ರವರೆಗೂ ಕುಂಠಿತಗೊಂಡಿದೆ ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ. 2016–17ರಲ್ಲಿ ಬ್ಯಾಂಕ್‌ಗಳ ಕೃಷಿ ಸಾಲ ನೀಡಿಕೆ ಪ್ರಮಾಣ ಶೇ 12.4ರಷ್ಟು ಪ್ರಗತಿ ಸಾಧಿಸಿತ್ತು. 2017–18ರಲ್ಲಿ […]

ದೇಶದಲ್ಲಿ ಎಟಿಎಂಗಳ ಸಂಖ್ಯೆ ಇಳಿಕೆ

ದೇಶದಲ್ಲಿ ಎಟಿಎಂಗಳ ಸಂಖ್ಯೆ 2017ರ ಡಿಸೆಂಬರ್‌ನಿಂದ 2018ರ ಸೆಪ್ಟೆಂಬರ್‌ ಅವಧಿಯಲ್ಲಿ 2.07 ಲಕ್ಷದಿಂದ 2.05ಲಕ್ಷಕ್ಕೆ ಇಳಿಕೆಯಾಗಿದೆ ಎಂದು ಆರ್‌ಬಿಐ ಮಾಹಿತಿ ನೀಡಿದೆ. ಸರ್ಕಾರಿ ಸ್ವಾಮ್ಯದ ಕೆಲವು ಬ್ಯಾಂಕ್‌ಗಳು ಶಾಖೆಗಳನ್ನು ಮೇಲ್ದರ್ಜೆಗೇರಿಸುತ್ತಿವೆ. ಇದರ ಜತೆಗೆ ಪಾಯಿಂಟ್‌ ಆಫ್‌ ಸೇಲ್‌, ಯುಪಿಐನಂತಹ ಡಿಜಿಟಲ್ ಪಾವತಿ ವ್ಯವಸ್ಥೆಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ ಎಟಿಎಂಗಳ ಸಂಖ್ಯೆ ತಗ್ಗಿಸಲಾಗುತ್ತಿದೆ ಎಂದು 2017–18ರ ಬ್ಯಾಂಕಿಂಗ್‌ ಪ್ರಗತಿ ವಲಯವು ವರದಿಯನ್ನು ನೀಡಿದೆ. ಆದರೆ ನಿರ್ವಹಣಾ ವೆಚ್ಚದಲ್ಲಿ ಭಾರಿ ಏರಿಕೆ, ಹೊಸ ನೋಟು ಮಷಿನ್‌ಗಳಿಗೆ ತಗಲುವ ಹೆಚ್ಚುವರಿ ಹೊರೆಯನ್ನು ಬ್ಯಾಂಕ್‌ಗಳು […]