ಶಿರೂರು ಶ್ರೀಗಳ ಸಾವಿನ ಪ್ರಕರಣ ಜೀವಂತವಾಗಿದೆ: ರವಿಕಿರಣ್ ಮುರ್ಡೇಶ್ವರ
ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣ ಹಳ್ಳಹಿಡಿದಿಲ್ಲ. ಇನ್ನೂ ಜೀವಂತವಾಗಿದೆ. ಆದರೆ ಪ್ರಕರಣವನ್ನು ಮುಂದುವರಿಸುವವರು ಯಾರು ಎಂಬುವುದೇ ದೊಡ್ಡ ಯಕ್ಷ ಪ್ರಶ್ನೆಯಾಗಿದೆ ಎಂದು ಹಿರಿಯ ವಕೀಲ ರವಿಕಿರಣ್ ಮುರ್ಡೇಶ್ವರ ಹೇಳಿದರು. ಶಿರೂರು ಶ್ರೀಗಳ ವರ್ಷದ ಸಂಸ್ಮರಣ ಕಾರ್ಯಕ್ರಮದ ಬಳಿಕ ಮಾಧ್ಯಮದ ಜತೆ ಮಾತನಾಡಿದ ಅವರು, ಶ್ರೀಗಳ ಪೂರ್ವಾಶ್ರಮದ ರಕ್ತ ಸಂಬಂಧಿಗಳು ದೂರು ನೀಡಿದರೆ ಮಾತ್ರ ಪ್ರಕರಣವನ್ನು ಮುಂದುವರಿಸಬಹುದು. ಆದರೆ ಅಭಿಮಾನಿ ಬಳಗದವರು ನ್ಯಾಯಾಲಯದಲ್ಲಿ ದಾವೆ ಹೂಡಲು ಸಾಧ್ಯವಿಲ್ಲ. ಕೊಲೆ ಪ್ರಕರಣ, ಸಂಶಯದ ಸಾವಿಗೆ ಕಾಲಮಿತಿ ಇಲ್ಲ. ಹಾಗಾಗಿ […]