ಕುದ್ರು ನೆಸ್ಟ್ ದ್ವೀಪದ ಮನೆಯಲ್ಲಿ ಯಕ್ಷಾವತಾರದಲ್ಲಿ ಕಂಗೊಳಿಸಿದ ಚೆಲುವ ಕನ್ನಡಿಗ ನಟ ರಮೇಶ್ ಅರವಿಂದ್

ಕುಂದಾಪುರ: ಕನ್ನಡ ಚಿತ್ರರಂಗದ ಹೆಸರಾಂತ ನಟ ರಮೇಶ್ ಅರವಿಂದ್ ಉಡುಪಿ ಜಿಲ್ಲೆಯಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಆಚಾರ ವಿಚಾರ ಸಂಸ್ಕೃತಿಗಳನ್ನು ಆಸ್ವಾದಿಸಿ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ತನ್ನ ಯಕ್ಷಗಾನದ ವೇಷಭೂಷಣಗಳನ್ನು ತಮ್ಮ ಟ್ವಿಟರ್ ಹ್ಯಾಂಡಲ್ ನಲ್ಲಿ ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, “ಪ್ರಶ್ನೆ-ಕಳೆದ ಬಾರಿ ನೀವು ಮೊದಲ ಬಾರಿಗೆ ಯಾವಾಗ ಏನನ್ನಾದರೂ ಮಾಡಿದ್ದೀರಿ? ಉತ್ತರ-ನಿನ್ನೆ. ಮೊದಲ ಬಾರಿಗೆ ಯಕ್ಷಗಾನದ ಪ್ರಸಾಧನವನ್ನು ಪ್ರಯತ್ನಿಸಿದೆ. ಈ ಶ್ರೇಷ್ಠ ಕಲಾ ಪ್ರಕಾರದೊಂದಿಗೆ ಸಂಬಂಧ ಹೊಂದಿರುವ ಎಲ್ಲರ ಬಗ್ಗೆಯೂ ಇರುವ ನನ್ನ […]

ಚಿತ್ರನಟ ರಮೇಶ್ ಅರವಿಂದ್ ಯೋಗಬನ ಭೇಟಿ

ಕುಂದಾಪುರ: ಕನ್ನಡದ ಹೆಸರಾಂತ ಚಲನಚಿತ್ರ ನಟ ನಿರ್ದೇಶಕ ರಮೇಶ್ ಅರವಿಂದ್ ರವರು ಮೂಡು ಗಿಳಿಯಾರಿನ ಯೋಗಬನದ ಸರ್ವಕ್ಷೇಮ ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಡಿವೈನ್ ಪಾರ್ಕ್ ಮತ್ತು ಎಸ್ ಎಚ್ ಆರ್ ಎಫ್ ಸಂಸ್ಥೆಯ ವತಿಯಿಂದ ವೈದ್ಯಕೀಯ ಆಡಳಿತ ನಿರ್ದೇಶಕ ಡಾ. ವಿವೇಕ್ ಉಡುಪ ಮತ್ತು ಮುಖ್ಯ ವೈದ್ಯಾಧಿಕಾರಿ ಮಾನಸ ವಿವೇಕ ಉಡುಪ ಇವರು ಸನ್ಮಾನಿಸಿ ಅಭಿನಂದಿಸಿದರು.

ನಡೆದಾಡುವ ವಿಶ್ವಕೋಶವಾಗಿದ್ದರು ಶಿವರಾಮ ಕಾರಂತರು: ಸಚಿವ ಮಾಧುಸ್ವಾಮಿ

ಉಡುಪಿ: ಶಿವರಾಮ ಕಾರಂತರು ಒಬ್ಬ ವ್ಯಕ್ತಿಯಾಗಿರದೇ ನಡೆದಾಡುವ ವಿಶ್ವಕೋಶ ಹಾಗೂ ವಿಶ್ವವಿದ್ಯಾನಿಲಯವಾಗಿದ್ದರು. ಸಾಹಿತಿಯಾಗಿ ಎಲ್ಲಾ ಕ್ಷೇತ್ರಗಳನ್ನು ಅರಿತು ತನ್ನನ್ನು ತಾನು ತೊಡಗಿಸಿಕೊಂಡಿದ್ದರು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಕೋಟತಟ್ಟು ಗ್ರಾಪಂ, ಉಡುಪಿ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟದ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಪ್ರವಾಸೋದ್ಯಮ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಕೋಟ ಶಾಂಭವಿ ಶಾಲಾ ವಠಾರದಲ್ಲಿ ಸೋಮವಾರ ಆಯೋಜಿಸಲಾದ ಡಾ.ಶಿವರಾಮ ಕಾರಂತರ […]

ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ಚಿತ್ರನಟ ರಮೇಶ್ ಅರವಿಂದ್ ಆಯ್ಕೆ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಇದರ ಸಹಭಾಗಿತ್ವದಲ್ಲಿ ಕಳೆದ ಹದಿನೇಳು ವರುಷಗಳಿಂದ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪುರಸ್ಕಾರ ನೀಡುತ್ತಾ ಬಂದಿದೆ. ಈಗಾಗಲೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ವೆಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ ಕಾಸರವಳ್ಳಿ, ಶ್ರೀಮತಿ ಜಯಶ್ರೀ, ಮೋಹನ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. […]