ಕರ್ನಾಟಕ ಕಲಾಭೂಷಣ ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿಯ ಯುವ ಪ್ರತಿಭೆ ರಾಮಾಂಜಿ ಆಯ್ಕೆ

ಉಡುಪಿ : ಬೆಂಗಳೂರಿನ ಸಿದ್ಧಾರೂಢ ಮಿಷನ್ ಸಂಸ್ಥೆ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ ಪ್ರತಿಷ್ಠಿತ “ಕರ್ನಾಟಕ ಕಲಾಭೂಷಣ ” ರಾಷ್ಟ್ರೀಯ ಪ್ರಶಸ್ತಿಗೆ ಉಡುಪಿಯ ಯುವ ಪ್ರತಿಭಾನ್ವಿತ ಕಲಾವಿದ, ನಮ್ಮ ಭೂಮಿಯ ರಾಮಾಂಜಿ ಆಯ್ಕೆಯಾಗಿದ್ದಾರೆ. ರಾಮಾಂಜಿ ಅವರು ಕಳೆದ 20 ವರ್ಷಗಳಿಂದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಿಸರ, ಶಿಕ್ಷಣ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಡಿ.25ರಂದು ಬೆಂಗಳೂರಿನ ಸಿದ್ಧಾರೂಢ ಮಿಷನ್ ಸಂಸ್ಥೆಯಲ್ಲಿ ವಿಶ್ವ ದರ್ಶನ ದಿನಪತ್ರಿಕೆಯ ದ್ವಿತೀಯ ಸಮ್ಮೇಳನದಲ್ಲಿ ಈ […]