ಗುಜರಾತಿನ ನರ್ಮದಾ ನದಿಯ ಬಯಲಿನಲ್ಲಿದೆ ಭೂಗ್ರಹದ ಅತ್ಯಂತ ಹಳೆಯ ಬೃಹತ್ ಜೀವಿಗಳ ಪಳೆಯುಳಿಕೆಗಳು!

ಇಂದಿಗೆ ಸುಮಾರು 180 ಮಿಲಿಯನ್ ವರ್ಷಗಳ ಹಿಂದಿನ ಮಾತಿದು. ಆಗ ಭೂಗ್ರಹದ ಭೂಖಂಡಗಳು ಇಂದಿನಂತಿರದೆ ಒಂದಕ್ಕೊಂದು ಅಂಟಿಕೊಂಡಿದ್ದವು. ಈ ಒಂದೇ ಭೂಖಂಡವನ್ನು ಪಾಂಜಿಯಾ ಎಂದು ಕರೆಯಲಾಗುತ್ತದೆ. ಈ ಕಾಲವನ್ನು ಜುರಾಸಿಕ್ ಯುಗವೆಂದೂ ಕರೆಯಲಾಗುತ್ತದೆ. ಭೂ ತಟ್ಟೆಗಳ ಚಲನೆಯಿಂದಾಗಿ ಈ ಪಾಂಜಿಯಾ ಖಂಡವು ಬೇರ್ಪಟ್ಟು ಇಂದು ನಾವು ನೋಡುತ್ತಿರುವ ಸಪ್ತಖಂಡಗಳಾಗಿ ಹರಿದು ಹಂಚಿಹೋದವು. ಕ್ರಿಟೇಶಿಯಸ್ ಅವಧಿಯ ಸರಿಸುಮಾರು 145-65 ಮಿಲಿಯನ್ ವರ್ಷಗಳ ಅಂತರದಲ್ಲಿ ಈ ಎಲ್ಲಾ ಭೂಖಂಡಗಳು ನಿಧಾನವಾಗಿ ದೂರ ಸರಿದು, ಭಾರತೀಯ ಖಂಡವು ಸಮುದ್ರದಲ್ಲಿ ತೇಲುತ್ತಾ ಏಷಿಯಾ […]