ಹಿರಿಯಡ್ಕ: ಪುತ್ತಿಗೆ ಮೂಲ ಮಠದಲ್ಲಿ ನರಸಿಂಹ ಜಯಂತಿ ಪ್ರಯುಕ್ತ ಪಂಚಾಮೃತ ಅಭಿಷೇಕ
ಹಿರಿಯಡ್ಕ: ನರಸಿಂಹ ಜಯಂತಿಯ ಪ್ರಯುಕ್ತ ಉಡುಪಿಯ ಹಿರಿಯಡ್ಕ ಸಮೀಪದ ಪುತ್ತಿಗೆ ಮೂಲ ಮಠದಲ್ಲಿ ಶ್ರೀ ದೇವರಿಗೆ ಭಾವಿ ಪರ್ಯಾಯ ಮಠಾಧೀಶರಾದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಪಾದರು ಪಂಚಾಮೃತ ಅಭಿಷೇಕ ಹಾಗೂ ವಿಷೇಶ ಪೂಜೆ ನೆರವೇರಿಸಿದರು.
ಪುತ್ತಿಗೆ ಶ್ರೀಪಾದರಿಗೆ ಸಿಡ್ನಿಯಲ್ಲಿ ಸಂಭ್ರಮದ ಸ್ವಾಗತ
ಸಿಡ್ನಿ: ಭಾವಿ ಪರ್ಯಾಯ ಪುತ್ತಿಗೆ ಶ್ರೀಪಾದರಿಗೆ ಸಿಡ್ನಿಯಲ್ಲಿನ ಭಕ್ತರು ಸಂಭ್ರಮದ ಸ್ವಾಗತ ಕೋರಿದರು.
ಅಮೆರಿಕಾದ ಫೀನಿಕ್ಸ್ ನಲ್ಲಿರುವ ಶ್ರೀ ವೆಂಕಟೇಶ್ವರನಿಗೆ ವಜ್ರಖಚಿತ ಸ್ವರ್ಣಮಯ ಕಿರೀಟ ಸಮರ್ಪಣೆ
ಉಡುಪಿ: ಪೂಜ್ಯ ಪುತ್ತಿಗೆ ಶ್ರೀಪಾದರು ಅಮೆರಿಕಾದ ಫೀನಿಕ್ಸ್ ನಗರದಲ್ಲಿ ಸ್ಥಾಪಿಸಿದ ಪ್ರಥಮ ದೇವಾಲಯದಲ್ಲಿ ಪೂಜೆಗೊಳ್ಳುವ ಶ್ರೀ ವೆಂಕಟೇಶ್ವರ ದೇವರಿಗೆ ಅಲ್ಲಿಯ ಭಕ್ತರಾದ ಶ್ರೀಮತಿ ಅನಿಲಾ ದಂಪತಿಗಳು 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರಖಚಿತ ಸ್ವರ್ಣಮಯ ಕಿರೀಟವನ್ನು ಶ್ರೀ ಪುತ್ತಿಗೆ ಶ್ರೀಪಾದರಿಗೆ ಗುರುವಾರ ಅರ್ಪಿಸಿದರು. ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಕಿರೀಟ ಅರ್ಪಿಸಿದ ಕುಟುಂಬಕ್ಕೂ, ಲೋಕಕ್ಕೂ ಕಲ್ಯಾಣವಾಗಲಿ ಎಂದು ಶ್ರೀಪಾದರು ಹಾರೈಸಿದರು. ಈ ಅಮೂಲ್ಯ ಮತ್ತು ದುಬಾರಿ ಕಿರೀಟ ಜನವರಿ1 ರಂದು ಶ್ರೀ ವೆಂಕಟೇಶನ ಮುಕುಟವನ್ನಲಂಕರಿಸಲಿದೆ. ಪ್ರಧಾನ ಅರ್ಚಕರಾದ […]
ಕಾರ್ಮಿಕ ಪರಿಹಾರ ಹಣ ಬಾಕಿ ಪ್ರಕರಣ: ಉಡುಪಿ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದ ವಿರುದ್ಧ ವಾರಂಟ್ ಜಾರಿಗೊಳಿಸಿದ ಜಿಲ್ಲಾ ನ್ಯಾಯಾಲಯ
ಉಡುಪಿ: ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಸ್ಟಿಸ್ ಶಾಂತವೀರ ಶಿವಪ್ಪನವರು ಶನಿವಾರ ಉಡುಪಿ ಶ್ರೀ ಅನಂತೇಶ್ವರ ದೇವಸ್ಥಾನದ, ಪುತ್ತಿಗೆ ಮಠದ ಟ್ರಸ್ಟಿಗೆ ಎರೆಸ್ಟ್ ವಾರಂಟ್ ಶೋಕಾಸ್ ನೋಟೀಸ್ ಜಾರಿ ಮಾಡಲು ಆದೇಶಿಸಿದೆ. ಉಡುಪಿ ಜಿಲ್ಲಾ ನ್ಯಾಯಾಧೀಶರ ಆದೇಶದ ಕಾರ್ಮಿಕ ಪರಿಹಾರ ಹಣ ನೀಡದೇ ಇರುವ ಹಿನ್ನಲೆಯಲ್ಲಿ ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸದ ಕಾರಣ ಪ್ರತಿವಾದಿ ಪುತ್ತಿಗೆ ಮಠದ ಸುಪರ್ದಿಯಲ್ಲಿರುವ ಉಡುಪಿ ರಥಬೀದಿಯ ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದ ವಿರುದ್ಧ ವಾರಂಟ್ ಹೊರಡಿಸಿದೆ. ಫಿರ್ಯಾದಿದಾರರಾದ ಟಿ. […]
ಉಡುಪಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ದೂರು ದಾಖಲು
ಉಡುಪಿ : ಇಲ್ಲಿನ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌನ್ಯದ ಚಿನ್ನದ ಗಿಂಡಿ ಕಳವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ವಿವರ: ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ ಮಠದ 6 ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದಿಡುವ ಸಂದರ್ಭದಲ್ಲಿ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಅವರು […]