2050 ರ ವೇಳೆಗೆ ಹೆಚ್ಚಾಗಲಿದೆಯಂತೆ ಶ್ರವಣ ಸಮಸ್ಯೆ,WHO ವರದಿಯಲ್ಲೇನಿದೆ?

ಇತ್ತೀಚೆಗೆ World Health Organization (WHO) ಒಂದು ವರದಿ ಪ್ರಕಟಿಸಿದ್ದು. ಆ ವರದಿ ನಮ್ಮನ್ನು ಕಂಗಾಲಾಗಿಸುವಂತಿದೆ. ಹೌದು. ಮೊದಲ ವಿಶ್ವ ಶ್ರವಣ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ಶ್ರವಣ ಸಮಸ್ಯೆಗಳು ಗಂಭೀರವಾಗಿ ಏರಿಕೆಯಾಗುತ್ತಿವೆ. 2050 ರೊಳಗೆ ಸುಮಾರು 250 ಕೋಟಿ ಜನರು ಅಂದರೆ ಪ್ರತಿ ನಾಲ್ವರಲ್ಲಿ ಒಬ್ಬರು ಯಾವುದಾದರೂ ಮಟ್ಟದ ಶ್ರವಣ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಇವರಲ್ಲಿ ಸುಮಾರು 70 ಕೋಟಿ ಜನರಿಗೆ ವಿಶೇಷ ಶ್ರವಣ ಆರೈಕೆ ಹಾಗೂ ಪುನರ್ವಸತಿ ಸೇವೆಗಳ […]
ಉಡುಪಿ XPRESS.COM ಉಡುಪಿ ಪರ್ಯಾಯ ವಿಶೇಷ ಸಂಚಿಕೆ “ಪರ್ಯಾಯ ಚರಿತೆ”ಬಿಡುಗಡೆ

ಉಡುಪಿ: ಉಡುಪಿ xpress.com ಡಿಜಿಟೆಲ್ ಸುದ್ದಿ ಮಾಧ್ಯಮ, ಉಡುಪಿಯ ಶೀರೂರು ಪರ್ಯಾಯ ಮಹೋತ್ಸವದ ಕುರಿತು ಸಿದ್ಧಪಡಿಸಿದ ವಿಶೇಷ ಸಂಚಿಕೆ “ಪರ್ಯಾಯ ಚರಿತೆ” ಯನ್ನು ಶೀರೂರು ಮಠದ ಪರ್ಯಾಯ ಪೀಠವೇರಲಿರುವ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿಯವರು ಶನಿವಾರ ಶೀರೂರು ಮಠದಲ್ಲಿ ಅನಾವರಣಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ Xprss.Com ಸಂಪಾದಕರಾದ ಪ್ರಸಾದ್ ಶೆಣೈ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ಸ್ವರೂಪ್ ಶ್ರೀಯನ್, ಅಶೋಕ್ ಆಚಾರ್ಯ ಕೊಂಡಾಡಿ ಉಪಸ್ಥಿತರಿದ್ದರು. ಸಂಚಿಕೆಯ ಕುರಿತ ವಿಡಿಯೋ ನೋಡಲು ಈ ಕೆಳಗಿನ ಫೇಸ್ಬುಕ್ ಲಿಂಕ್ […]
ಪ್ರಸಾದ ಶೆಣೈ ಅವರಿಗೆ ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯ 2025 ರ ದ್ವಿತೀಯ ಕಥಾ ಪ್ರಶಸ್ತಿ

ಬೆಂಗಳೂರು: ಪ್ರಜಾವಾಣಿ ಪತ್ರಿಕೆಯ ಪ್ರತಿಷ್ಠಿತ ದೀಪಾವಳಿ ಕಥಾ ಸ್ಪರ್ಧೆ 2025 ರ ಪ್ರಶಸ್ತಿಯ ಫಲಿತಾಂಶ ಪ್ರಕಟವಾಗಿದ್ದು ಕತೆಗಾರ ದಯಾನಂದ ಅವರು ಮೊದಲ ಪ್ರಶಸ್ತಿ ಪಡೆದರೆ, ಎರಡನೇ ಕಥಾ ಪ್ರಶಸ್ತಿಯನ್ನು ಕತೆಗಾರ, ಬರಹಗಾರರಾದ ಉಡುಪಿ ಜಿಲ್ಲೆಯ ಕಾರ್ಕಳದ ಪ್ರಸಾದ ಶೆಣೈ ಆರ್ ಕೆ ಅವರು ಪಡೆದುಕೊಂಡಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿಪತ್ರವನ್ನು ಒಳಗೊಂಡಿದೆ. ಪ್ರಸಾದ್ ಶೆಣೈ ಅವರು ಉಡುಪಿXPRESS’ನ ಸಂಪಾದಕರಾಗಿ, ಕ್ರಿಯೇಟಿವ್ ಕಂಟೆಂಟ್ ಹೆಡ್ ಆಗಿ, ಉಪನ್ಯಾಸಕರಾಗಿಯೂ ಸಕ್ರೀಯರಾಗಿದ್ದಾರೆ. “ಲೂಲು ಟ್ರಾವೆಲ್ಸ್” “ಒಂದು ಕಾಡಿನ ಪುಷ್ಪಕ ವಿಮಾನ”, “ನೇರಳೆ […]
ಪ್ರಸಾದ್ ಶೆಣೈ ಅವರ “ನೇರಳೆ ಐಸ್ ಕ್ರೀಂ” ಕೃತಿ ವೀರಲೋಕ ಪ್ರಕಾಶನದಿಂದ ಅದ್ದೂರಿ ಬಿಡುಗಡೆ

ಬೆಂಗಳೂರು: ಯುವ ಕತೆಗಾರ, ಕನ್ನಡನಾಡಿನ ಪ್ರತಿಷ್ಠಿತ ಟೊಟೋ ಪ್ರಶಸ್ತಿ ಪುರಸ್ಕೃತ ಬರಹಗಾರ ಕಾರ್ಕಳದ ಪ್ರಸಾದ್ ಶೆಣೈ ಆರ್ ಕೆ ಅವರ ಮೂರನೇ ಕೃತಿ “ನೇರಳೆ ಐಸ್ ಕ್ರೀಂ” ಕಥಾ ಸಂಕಲನದ ಬಿಡುಗಡೆ ಕಾರ್ಯಕ್ರಮ ಸಾಹಿತ್ಯ ಯುಗಾದಿ ಭಾನುವಾರ ಬೆಂಗಳೂರಿನ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ , ಕಾದಂಬರಿಗಾರ್ತಿ ಸಹನಾ ವಿಜಯ್ ಕುಮಾರ್, ವಿಮರ್ಶಕ ಬಸವರಾಜ್ ಸರಬದ, ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ವೀರಲೋಕದ ಪ್ರತಿಷ್ಠಾನದ ವೀರಕಪುತ್ರ ಶ್ರೀನಿವಾಸ […]
ಪ್ರೇಕ್ಷಕನ ಎದೆಯೊಳಗೆ ವಿಭಿನ್ನ ಲೋಕ ಸೃಷ್ಟಿಸಿದ “ದಸ್ಕತ್”: ನೋಡಿದ ಮೇಲೂ ಮತ್ತೆ ಮತ್ತೆ ಕಾಡುವ ಒಂದು ಅದ್ಬುತ ಅನುಭವ

ಬರಹ: ಪ್ರಸಾದ ಶೆಣೈ ” ದಸ್ಕತ್” ತನ್ನ ಗ್ರಾಮ್ಯ ಜೀವನದ ಸಮೃದ್ಧ ಫೀಲ್ ಕೊಡುವ, ನಮ್ಮೂರಿನ ಕತೆಯೇ ಇದು ಅನ್ನುವ ಭಾವ ಮೂಡಿಸುವ ಒಂದೊಳ್ಳೆಯ ತುಳು ಸಿನಿಮಾ. ಸತ್ವಯುತವಾದ ಕತೆಯನ್ನು ಅದೆಷ್ಟು ಸಹಜವಾಗಿ, ಹೃದ್ಯವಾಗಿ ಕಟ್ಟಿಕೊಟ್ಟಿದ್ದಾರೆಂದರೆ ಕೇಪುಳಪಲ್ಕೆಯ ಹಸಿರು, ಅಲ್ಲಿನ ರಾತ್ರಿ, ಅಲ್ಲಿನ ಭಾಷೆ, ಅಲ್ಲಿನ ಹಾಡು, ಅಲ್ಲಿನ ಮೌನ, ಅಲ್ಲಿನ ಪಂಚಾಯತ್ ಕಚೇರಿ, ಎಲ್ಲಿಗೋ ಕರೆದೊಯ್ಯುವ ಅಲ್ಲಿನ ಪುಟ್ಟ ಪುಟ್ಟ ಮನೆಗಳು, ಅಲ್ಲಿನ ಆಚರಣೆ, ಅಲ್ಲಿನ ಹುಲಿವೇಷ, ಎಲ್ಲವೂ ನೋಡುತ್ತ ನೋಡುತ್ತ ನಮ್ಮದಾಗುತ್ತ ಹೋಗುತ್ತದೆ. ಅದೆಷ್ಟು […]