ಅವಿಭಜಿತ ದ.ಕ ಜಿಲ್ಲೆಯಲ್ಲಿ ಧಾರಾಕಾರ ಮಳೆ; ಹೊಂಡ ಗುಂಡಿಯಿಂದ ಅಪಾಯಕ್ಕೆ ಆಹ್ವಾನವೀಯುತ್ತಿದೆ ರಾಷ್ಟ್ರೀಯ ಹೆದ್ದಾರಿ

ಉಡುಪಿ/ ಮಂಗಳೂರು: ಕಳೆದೊಂದು ವಾರದಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಉಡುಪಿ ಹಾಗೂ ಮಂಗಳೂರಿನ ಹಲವೆಡೆ ಕೃತಕ ನೆರೆ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದಲ್ಲದೆ, ಅಲ್ಲಲ್ಲಿ, ಮರ-ಮನೆಮಟ್ಟುಗಳು ಉರುಳಿ ಹಲವರು ಪ್ರಾಣ ಕಳೆದುಕೊಂಡ ಘಟನೆಗಳು ವರದಿಯಾಗಿವೆ. ಇದರ ಜೊತೆಗೆ ಧಾರಾಕಾರ ಮಳೆಯಿಂದಾಗಿ ಮುಲ್ಕಿ-ಮಂಗಳೂರು ಹಾಗೂ ನಂತೂರು-ಬಿ.ಸಿ ರೋಡು ರಾ.ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ಕಾಣಿಸಿಕೊಂಡಿದ್ದು ಅಪಾಯಕ್ಕೆ ಆಹ್ವಾನವೀಯುತ್ತಿದೆ. ಕುಂದಾಪುರ-ಉಡುಪಿ-ಮುಲ್ಕಿ ಮಾರ್ಗವಾಗಿ ಹಲವಾರು ವಾಹನಗಳು ಮಂಗಳೂರಿಗೆ ಪ್ರಯಾಣಿಸುತ್ತವೆ. ನಿತ್ಯ ಸಂಚಾರ ನಡೆಸುವ ಈ ವಾಹನಗಳು ರಾ.ಹೆದ್ದಾರಿಯ ಹೊಂಡ ಗುಂಡಿಗಳನ್ನು ತಪ್ಪಿಸಿಕೊಂಡು ಚಲಿಸಬೇಕಾದ ಪರಿಸ್ಥಿತಿ […]

ಬೆಂಗಳೂರು ರಸ್ತೆಯಲ್ಲಿ ಗಂಡಾತರದ ಗುಂಡಿಗಳು: ಬಿಬಿಎಂಪಿಗೆ ಎಚ್ಚರಿಕೆ ನೀಡಿದ ರಾಜ್ಯ ಹೈಕೋರ್ಟ್

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೋಮವಾರದಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ಎಚ್ಚರಿಕೆ ನೀಡಿದ್ದು, ನ್ಯಾಯಾಲಯವು ನಾಗರಿಕ ಸಂಸ್ಥೆಯ ಮೇಲೆ ಕೂಗಾಡದೆ ಇರಬಹುದು, ಅದರರ್ಥ ನಗರದಲ್ಲಿ ಗುಂಡಿಗಳನ್ನು ಮುಚ್ಚುವುದನ್ನು ಖಾತ್ರಿಪಡಿಸುವ ಬಗ್ಗೆ ಅದು ಗಂಭೀರವಾಗಿಲ್ಲ ಎಂದಲ್ಲ ಎಂದು ಹೇಳಿದೆ. ಬಿಬಿಎಂಪಿ ತನ್ನ ಕೆಲಸದ ಬಗ್ಗೆ ಪ್ರಾಮಾಣಿಕವಾಗಿ ವರ್ತಿಸುವಂತೆಯೂ ಹೈಕೋರ್ಟ್ ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠವು ಬಿಬಿಎಂಪಿ ವಕೀಲರಿಗೆ, “ನೀವು ತುರ್ತು ಅವಶ್ಯಕತೆಯನ್ನು ತಿಳಿಸಿರಿ, ಈ ಪರಿಸ್ಥಿತಿಯ ಗಂಭೀರತೆ ಮತ್ತು […]

ಉಡುಪಿ ರಾಷ್ಟ್ರೀಯ ಹೆದ್ದಾರಿಗಳು ಮಾಯ! ಹೊಂಡದಲ್ಲಿ ರಸ್ತೆಯೋ ರಸ್ತೆಯಲ್ಲಿ ಹೊಂಡವೋ? ಪ್ರಯಾಣಿಕರಲ್ಲಿ ಗಲಿಬಿಲಿ!

ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಸಂಪೂರ್ಣ ಹೊಂಡಗಳದ್ದೇ ಕಾರುಬಾರು. ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗಿರುವ ಹೆದ್ದಾರಿಗಳು ಮರಣ ಮೃದಂಗ ಬಾರಿಸುತ್ತಿವೆ. ಹೆದ್ದಾರಿಗಳಲ್ಲಿ ನಿರ್ಮಾಣವಾಗಿರುವ ಆಳತ್ತೆರದ ಗುಂಡಿಯಲ್ಲಿ ಬಿದ್ದು, ಪ್ರಾಣ ಕಳೆದುಕೊಂಡ, ಕೈ ಕಾಲು ಮುರಿದುಕೊಂಡ ಘಟನೆಗಳು ಹಲವಾರು ನಡೆದಿವೆ. ಸುರತ್ಕಲ್ -ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ ರಸ್ತೆಯಲ್ಲಿ ಗುಂಡಿಯೋ, ಗುಂಡಿಯೊಳಗೆ ರಸ್ತೆಯೋ ಎಂದು ಪ್ರಯಾಣಿಕರು ಗಲಿಬಿಲಿಗೊಂಡು ಪ್ರಾಣ ಕೈಯಲ್ಲಿ […]