ಮದುವೆ ಮನೆಗಳಂತೆ ಶೃಂಗಾರಗೊಂಡಿವೆ ಸಖಿ ಮತಗಟ್ಟೆಗಳು..

ಉಡುಪಿ: ಏಪ್ರಿಲ್ 18 ರಂದು ನಡೆಯುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಪ್ರಯುಕ್ತ , ಮಹಿಳಾ ಮತದಾರರನ್ನು ಆಕರ್ಷಿಸಲು ಉಡುಪಿ ಜಿಲ್ಲೆಯಲ್ಲಿ ಪ್ರಾರಂಭಿಸಿರುವ, ಮಹಿಳಾ ಸಿಬ್ಬಂದಿಗಳೇ ನಿರ್ವಹಿಸುವ 25 ಸಖಿ ಮತಗಟ್ಟೆಗಳು ಮದುವೆ ಮನೆಗಳಂತೆ ಕಂಗೊಳಿಸುತ್ತಿವೆ. ಮತಗಟ್ಟೆಗಳನ್ನು ಆಕರ್ಷಕ ಬಟ್ಟಯ ಬಣ್ಣಗಳಿಂದ ಶೃಂಗಾರಗೊಳಿಸಿದ್ದು, ಮತಗಟ್ಟೆಯಲ್ಲಿ ಮ್ಯಾಟ್ ಅಳವಡಿಕೆ ಜೊತೆಗೆ ಟೇಬಲ್ ಮತ್ತು ಕುರ್ಚಿಗಳನ್ನು ಸಹ ಅಲಂಕರಿಸಲಾಗಿದೆ. ಮತಗಟ್ಟೆಯ ಗೋಡೆಯ ಮೇಲೆ ಮಕ್ಕಳು ಬಿಡಿಸಿರುವ ಚಿತ್ರಗಳನ್ನು ಅಳವಡಿಸಲಾಗಿದೆ. ಮತಗಟ್ಟಯ ಹೊರಗೆ ಶಾಮಿಯಾನ ಮೂಲಕ ನೆರಳಿನ ವ್ಯವಸ್ಥೆ ಮಾಡಿದ್ದು, ತುರ್ತು […]
ಜಿಲ್ಲಾಧಿಕಾರಿಯವರಿಂದ ಮತದಾನ ಆಮಂತ್ರಣ.. ಉಡುಪಿ ಜಿಲ್ಲೆಯ ಆತ್ಮೀಯ ಮತದಾರ ಬಂಧುಗಳೇ..

ನಮ್ಮದು ಜಗತ್ತಿನಲ್ಲಿ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ, ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಹಲವಾರು ಭಾಷೆ, ಜನಾಂಗ, ಸಂಸ್ಕøತಿ, ಧರ್ಮ ಹೊಂದಿರುವ ನಾವೆಲ್ಲರೂ ಒಂದು ಎಂಬ ಭಾವನೆಯಿಂದ ಬದುಕುತ್ತಿದ್ದೇವೆ. ಆದ್ದರಿಂದ ವಿಶ್ವದಲ್ಲಿ ನಮ್ಮದು ಬೃಹತ್ ಪ್ರಜಾ ಸತ್ತಾತ್ಮಕ ಜಾತ್ಯಾತೀತ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಮತದಾರ ಬಂದುಗಳೇ, ನಮ್ಮ ದೇಶಕ್ಕೆ ಸುಭದ್ರ ಸರ್ಕಾರವನ್ನು ಆಯ್ಕೆ ಮಾಡಲು ಇದೇ ಏಪ್ರಿಲ್ 18 ರ ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಅಂದು […]
ಮತಗಟ್ಟೆ ಸಮೀಪ ಪಕ್ಷಗಳ ಬೂತ್ ಅನುಮತಿ ಅಗತ್ಯ: ಜಿಲ್ಲಾಧಿಕಾರಿ

ಉಡುಪಿ: ಏಪ್ರಿಲ್ 18 ರಂದು ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನದ ದಿನದಂದು, ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಪರವಾಗಿ ಮತಗಟ್ಟೆಯ 200 ಮೀಟರ್ ದೂರದಲ್ಲಿ ಸರಳವಾಗಿ ಬೂತ್ ರಚಿಸಬೇಕು, ಬೂತ್ ರಚಿಸಲು ಸ್ಥಳೀಯ ಗ್ರಾಮ ಪಂಚಾಯತ್ ಅಥವಾ ಪುರಸಭೆ, ನಗರಸಭೆಯ, ಪಟ್ಟಣ ಪಂಚಾಯತ್‍ನಿಂದ ಕಡ್ಡಾಯವಾಗಿ ಅನುಮತಿ ಪಡೆದಿರಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ. ಅವರು ಸೋಮವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಲೋಕಸಭಾ ಚುನವಣೆಯಲ್ಲಿ ಸ್ಪರ್ಧಿಸಿರುವ ರಾಜಕೀಯ ಪಕ್ಷಗಳ ಮತ್ತು […]
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ 1,513231 ಮತದಾರರು

ಎಪ್ರಿಲ್ 18 ರಂದು ನಡೆಯುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ, ಕುಂದಾಪುರದ 222 ಮತಗಟ್ಟೆ ವ್ಯಾಪ್ತಿಯಲ್ಲಿ 97,692 ಪುರುಷರು, 1,05585 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 2,03279, ಉಡುಪಿ ಯ 226 ಮತಗಟ್ಟೆ ವ್ಯಾಪ್ತಿಯಲ್ಲಿ 1,01386 ಪುರುಷರು, 1,08116 ಮಹಿಳೆಯರು ಮತ್ತು ಇತರೆ 2 ಸೇರಿ ಒಟ್ಟು 2,09504, ಕಾಪು ನ 208 ಮತಗಟ್ಟೆ ವ್ಯಾಪ್ತಿಯಲ್ಲಿ 87,704 ಪುರುಷರು, 96,384 ಮಹಿಳೆಯರು ಮತ್ತು ಇತರೆ 13 ಸೇರಿ ಒಟ್ಟು 1,84101, ಕಾರ್ಕಳದ 209 […]
ಲೋಕಸಭಾ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ

ಉಡುಪಿ: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ರ ಕರ್ತವ್ಯ ನಿರ್ವಹಿಸಲು ನೇಮಕಾತಿ ಆದೇಶ ಪಡೆದ ಎಲ್ಲಾ ಮತಗಟ್ಟೆ ಅಧಿಕಾರಿ ಮತ್ತು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮಾರ್ಚ್ 31 ರಂದು 118- ಬೈಂದೂರು ವಿಧಾನಸಭಾ ಕ್ಷೇತ್ರದ ಶೀರೂರು ಗ್ರೀನ್ ವ್ಯಾಲಿ ಇಂಟರ್ ನ್ಯಾಷನಲ್ ಸ್ಕೂಲ್, 119- ಕುಂದಾಪುರ ವಿಧಾನಸಭಾ ಕ್ಷೇತ್ರದ ಕುಂದಾಪುರ ಜೂನಿಯರ್ ಕಾಲೇಜು, 120- ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಗಿರಿ ಸೈಂಟ್ ಸಿಸಿಲೀಸ್ ಶಿಕ್ಷಣ ಸಂಸ್ಥೆ, 121- ಕಾಪು ವಿಧಾನಸಭಾ ಕ್ಷೇತ್ರದ ಕಾಪು ಉಳಿಯಾರಗೋಳಿ ದಂಡತೀರ್ಥ […]