ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ಏಕಾಏಕಿ ಏರಿಕೆ: ಭಾರತಕ್ಕೆ ಅಪಾಯ ಇಲ್ಲದಿದ್ದರೂ ಜಾಗರೂಕತೆ ಅಗತ್ಯ
ನವದೆಹಲಿ: ಚೀನಾದಲ್ಲಿ ಮಕ್ಕಳಲ್ಲಿ ನ್ಯುಮೋನಿಯಾ ತರಹದ ಸೋಂಕಿನ ಏಕಾಏಕಿ ಏರಿಕೆಯನ್ನು ಭಾರತವು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ಈ ವೈರಸ್ ನಿಂದ ಯಾವುದೇ ಬೆದರಿಕೆಗಳು ಕಂಡು ಬರುತ್ತಿಲ್ಲವಾದರೂ ಕೇಂದ್ರ ಆರೋಗ್ಯ ಸಚಿವಾಲಯವು ಜಾಗರೂಕವಾಗಿದ್ದು, ಆಸ್ಪತ್ರೆಗಳು ತುರ್ತು ಪರಿಸ್ಥಿತಿಯ ಸಿದ್ದತೆಯನ್ನು ಗಮನಿಸುವಂತೆ ಸೂಚನೆ ನೀಡಿದೆ. ಚಳಿಗಾಲ ಮತ್ತು ಮಾಲಿನ್ಯಪೂರ್ಣ ಹವಾಮಾನದ ಸಂದರ್ಭದಲ್ಲಿ ವೈರಲ್ ಫ್ಲೂ ಸಾಮಾನ್ಯವಾಗಿದ್ದು, ಸಾರ್ವಜನಿಕರು ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡುವುದು ಈ ಪರಿಸ್ಥಿತಿಯಲ್ಲಿ ಅಗತ್ಯವೆನಿಸಿದೆ. ವೈದ್ಯರ ಪ್ರಕಾರ ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಸೀನುವಾಗ ಮತ್ತು ಕೆಮ್ಮುವಾಗ ಮಕ್ಕಳು […]
ನ್ಯುಮೋನಿಯಾದಿಂದುಂಟಾಗುವ ಮಕ್ಕಳ ಸಾವಿನ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಜಿಲ್ಲಾಧಿಕಾರಿ ಕರೆ
ಉಡುಪಿ: ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳು ನ್ಯುಮೋನಿಯಾ ಕಾರಣದಿಂದ ಮರಣ ಹೊಂದದಂತೆ ಎಲ್ಲ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮುಂಜಾಗ್ರತೆ ವಹಿಸಬೇಕು. ಮಕ್ಕಳಲ್ಲಿನ ಈ ಸಮಸ್ಯೆಯನ್ನು ಬೇಗನೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಪೋಷಕರಿಗೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ನ್ಯುಮೋನಿಯಾದಿಂದ ಆಗುವ ಮಕ್ಕಳ ಸಾವಿನ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಎಲ್ಲರೂ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕರೆ ನೀಡಿದರು. ಅವರು ಇಂದು ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ […]
ಸೂಕ್ತ ವೈದ್ಯಕೀಯ ಹಸ್ತಕ್ಷೇಪದಿಂದ ಶಿಶುಗಳಲ್ಲಿ ನ್ಯುಮೋನಿಯಾ ಸಂಬಂಧಿತ ಮರಣಗಳನ್ನು ತಡೆಗಟ್ಟಬಹುದು
ಜಗತ್ತಿನೆಲ್ಲೆಡೆ ಮಕ್ಕಳ ಸಾವಿನ ಏಕೈಕ ದೊಡ್ಡ ಕಾರಣಗಳಲ್ಲಿ ನ್ಯುಮೋನಿಯಾ ಒಂದಾಗಿದೆಯಲ್ಲದೇ, ಐದು ವರ್ಷಗಳಿಗಿಂತಲೂ ಕಡಿಮೆ ವಯಸ್ಸಿನ ಶಿಶುಗಳಲ್ಲಿ ಶೇ. 41ಕ್ಕಿಂತ ಹೆಚ್ಚಿನ ಮರಣಗಳಿಗೆ ಕಾರಣವಾಗಿದೆ. ಇವುಗಳನ್ನು ಸಮಯಕ್ಕೆ ಸರಿಯಾದ ಮತ್ತು ಸೂಕ್ತವಾದ ವೈದ್ಯಕೀಯ ಹಸ್ತಕ್ಷೇಪದೊಂದಿಗೆ ತಡೆಗಟ್ಟಬಹುದಾಗಿದೆ. ಹೆಚ್ಚಿನ ಸಂಖ್ಯೆಯ ನ್ಯುಮೋನಿಯಾ ಸಂಬಂಧಿತ ಸಾವುಗಳನ್ನು ತಡೆಯಬಹುದಾಗಿದೆ. ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಅಥವಾ ಪರಾವಲಂಬಿಗಳಿಂದಾಗಿ ಈ ಶ್ವಾಸಕೋಶದ ತೀವ್ರ ಉಸಿರಾಟದ ಸೋಂಕು ಉಂಟಾಗಬಹುದು. ಇದು ವಾಯು ಮಾಲಿನ್ಯದಿಂದ ಹೆಚ್ಚಾಗುತ್ತದೆ. ಅಲ್ಲದೇ ಇದು ಶಿಶು ಮರಣಗಳ ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ. ಅಪೌಷ್ಟಿಕತೆ, […]