ಭಾರತದ ಸರಕು ಮತ್ತು ಸೇವಾ ರಫ್ತು ಬೆಳವಣಿಗೆ ಶೇ.11.51ರಷ್ಟು ಏರಿಕೆ: ಅಂದಾಜು 61.18 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ

ನವದೆಹಲಿ: ಸರಕು ಮತ್ತು ಸೇವೆಗಳು ಸೇರಿದಂತೆ ದೇಶದ ಒಟ್ಟಾರೆ ರಫ್ತುಗಳು ಕಳೆದ ತಿಂಗಳು ಬೆಳವಣಿಗೆಯನ್ನು ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತುಗಳು ಶೇಕಡಾ 11.51 ರಷ್ಟು ಬೆಳವಣಿಗೆಯನ್ನು ಪದರ್ಶಿಸಿವೆ ಮತ್ತು 61.18 ಬಿಲಿಯನ್ ಯುಎಸ್ ಡಾಲರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಆಮದುಗಳು ಶೇ 42.90 ರಷ್ಟು ಬೆಳವಣಿಗೆಯನ್ನು ಪ್ರದರ್ಶಿಸಿವೆ. ಕಳೆದ ತಿಂಗಳಲ್ಲಿ ದೇಶದ ಆಮದು 82.22 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಕಳೆದ ಏಪ್ರಿಲ್-ಜುಲೈ […]

ಸ್ಟಾರ್ಟ್ ಅಪ್ ಶ್ರೇಯಾಂಕ: ಗುಜರಾತ್, ಮೇಘಾಲಯ ಮತ್ತು ಕರ್ನಾಟಕ ಅತ್ಯುತ್ತಮ ಪ್ರದರ್ಶಕರು

ನವದೆಹಲಿ: ಉದ್ಯಮ ಮತ್ತು ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆ (ಡಿಪಿಐಐಟಿ)ಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ಪ್ರಕಾರ, ಉದಯೋನ್ಮುಖ ಉದ್ಯಮಿಗಳಿಗಾಗಿ(ಸ್ಟಾರ್ಟ್ ಅಪ್) ಆರಂಭಿಕ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಗುಜರಾತ್, ಮೇಘಾಲಯ ಮತ್ತು ಕರ್ನಾಟಕವು ಅತ್ಯುತ್ತಮ ಪ್ರದರ್ಶನ ನೀಡುವ ರಾಜ್ಯಗಳಾಗಿ ಹೊರಹೊಮ್ಮಿವೆ. ಕೇರಳ, ಮಹಾರಾಷ್ಟ್ರ, ಒಡಿಶಾ ಮತ್ತು ತೆಲಂಗಾಣವನ್ನು ಉನ್ನತ ಪ್ರದರ್ಶನಕಾರರು ಎಂದು ವರ್ಗೀಕರಿಸಲಾಗಿದೆ. ರಾಜ್ಯಗಳ ಸ್ಟಾರ್ಟಪ್ ಶ್ರೇಯಾಂಕ 2021 ಅನ್ನು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಸೋಮವಾರ ಬಿಡುಗಡೆ ಮಾಡಿದರು. ಒಟ್ಟು 24 […]