ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅನುಮತಿ
ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗವು ರೈಲುಗಳಲ್ಲಿ ಹಾಗೂ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳಲ್ಲಿಯೂ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕೆ ಅನುಮತಿಸಿ ಅವಕಾಶ ನೀಡಿದೆ. ಮದುವೆ ಮತ್ತು ಇತರ ವಾಣಿಜ್ಯ ಉದ್ದೇಶಗಳಿಗಾಗಿ ಸ್ಟಿಲ್ ಫೋಟೋಗ್ರಫಿಗಾಗಿ ದಿನಕ್ಕೆ 5,000 ರೂ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಉದ್ದೇಶವು ಶೈಕ್ಷಣಿಕವಾಗಿದ್ದರೆ, ಪರವಾನಗಿ ಶುಲ್ಕ 2,500 ರೂ ಮತ್ತು ವೈಯಕ್ತಿಕ ಬಳಕೆಗಾಗಿ, ಶುಲ್ಕ 3,500 ರೂ ಆಗಿರಲಿದೆ. ರೈಲು ನಿಂತಿದ್ದಾಗ ಅಥವಾ ಚಲಿಸುತ್ತಿದ್ದಾಗ ವಾಣಿಜ್ಯ ಉದ್ದೇಶಕ್ಕಾಗಿ ಸ್ಟಿಲ್ ಫೋಟೋಗ್ರಫಿಗಾಗಿ ದಿನಕ್ಕೆ […]
ವೃತ್ತಿಯಲ್ಲಿ ನಿಷ್ಠೆ- ಪ್ರಾಮಾಣಿಕತೆ ಇದ್ದಾಗ ಗೌರವ ಹೆಚ್ಚಾಗುವುದು: ಡಾ. ಹರೀಶ್ಚಂದ್ರ
ಉಡುಪಿ: ವೃತ್ತಿಯನ್ನು ಪ್ರೀತಿಸಿ, ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯಿಂದ ತನ್ನನ್ನು ಸಮರ್ಪಿಸಿಕೊಂಡಾಗ ವೃತ್ತಿ ಗೌರವವೂ ಮತ್ತು ವ್ಯಕ್ತಿ ಗೌರವವೂ ಹೆಚ್ಚಾಗುತ್ತದೆ ಎಂದು ಗಾಂಧಿ ಆಸ್ಪತ್ರೆಯ ಎಮ್.ಡಿ ಡಾ. ಹರೀಶ್ಚಂದ್ರ ಅಭಿಪ್ರಾಯಪಟ್ಟರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಉಡುಪಿ ವಲಯ ಹಮ್ಮಿಕೊಂಡಿದ್ದ ಛಾಯಾಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಮತ್ತು ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮತ್ತೋರ್ವ ಅತಿಥಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಮಾತನಾಡಿ, ಪ್ರವಾಸೋದ್ಯಮಕ್ಕೂ ಛಾಯಾಚಿತ್ರಗ್ರಾಹಕರಿಗೂ ಅವಿನಾಭಾವ ಸಂಬಂಧವಿದೆ. ಛಾಯಾಗ್ರಹಣದ ಮೂಲಕ […]
ಕೇಂದ್ರ ಲಲಿತ ಕಲಾ ಅಕಾಡೆಮಿ ಚಿತ್ರಕಲಾ ಪ್ರದರ್ಶನ: ಆಸ್ಟ್ರೋ ಮೋಹನ್ ಅವರ ‘ಶುಭೋದಯ’ ಕಲಾಕೃತಿ ಆಯ್ಕೆ
ಉಡುಪಿ: ಕೇಂದ್ರ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ 62 ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ಉದಯವಾಣಿ ಮಣಿಪಾಲ ಆವೃತ್ತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಚಿತ್ರ ಕಲಾಕೃತಿ ಶುಭೋದಯ ಪ್ರದರ್ಶನಗೊಂಡಿದೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಿರ್ಮಿಸಲಾದ ಈ ಚಿತ್ರ ಕೃತಿ ಕಲಾಚಿತ್ರ ವಿಭಾಗದಲ್ಲಿ ಆಯ್ಕೆಗೊಂಡಿರುವುದು ಬಹು ಪ್ರಶಂಸೆಗೆ ಪಾತ್ರವಾಗಿದೆ. ದೇಶದ 2351 ಕಲಾವಿದರಿಂದ 5450 ಕಲಾಕೃತಿಗಳು ಆಯ್ಕೆಗೆ ಆಗಮಿಸಿದ್ದವು. ಅದರಲ್ಲಿ ಕೇವಲ 300 ಕಲಾಕೃತಿಗಳನ್ನು ಮಾತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು.
ಕರಾವಳಿ ಹುಡುಗನ ಕ್ಯಾಮರಾ ಕಣ್ಣುಗಳ ಚಿನ್ನದ ಬೇಟೆ: ಅಮೃತ್ ಬೀಜಾಡಿಯವರ ‘ಥೈಯಂ’ ಛಾಯಾಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ!
ಕುಂದಾಪುರ: ಕರಾವಳಿಯ ಕುಂದಾಪುರದ ಛಾಯಾಗ್ರಾಹಕ ಅಮೃತ್ ಬೀಜಾಡಿಯವರ ‘ಥೈಯಂ’ ಛಾಯಾಚಿತ್ರಕ್ಕೆ ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಯ ಜೊತೆಗೆ ಚಿನ್ನದ ಪದಕ ಲಭಿಸಿದೆ. ಇತ್ತೀಚೆಗೆ ಕೋಲ್ಕತ್ತಾದಲ್ಲಿ ನಡೆದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಮೃತ್ ಬೀಜಾಡಿಯ ಕೇರಳದಲ್ಲಿ ಸೆರೆಹಿಡಿದಿದ್ದ ಥೈಯಂ ಛಾಯಾಚಿತ್ರಕ್ಕೆ ಎಫ್ ಎಸ್ ಗೋಲ್ಡ್ ಮೆಡಲ್ ಮತ್ತು ಎಂಟು ಎಕ್ಸೆಪ್ಟನ್ಸ್ ಪ್ರಶಸ್ತಿಗಳು ದೊರಕಿವೆ. ಫೋಟೋಗ್ರಫಿಯನ್ನು ಹವ್ಯಾಸವಾಗಿ ಆರಂಭಿಸಿದ್ದ ಅಮೃತ್ ತದನಂತರ ಅದನ್ನೇ ವೃತ್ತಿಯಾಗಿ ಬೆಳೆಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಛಾಯಾಚಿತ್ರಗಳಿಗಾಗಿ ಈಗಾಗಾಲೇ ಹೆಸರುವಾಸಿಯಾಗಿರುವ ಅಮೃತ್, ಹೊಸತರ ತುಡಿತದಲ್ಲಿ ಸದಾ […]