ಪಂಜಾಬ್ ನಲ್ಲೊಬ್ಬ ‘ಪಿಎಚ್‌ಡಿ ಸಬ್ಜಿ ವಾಲಾ’: ಅಧ್ಯಾಪನ ವೃತ್ತಿಗೆ ತಿಲಾಂಜಲಿ ಇತ್ತು ತರಕಾರಿ ಮಾರುತ್ತಿರುವ ಪ್ರಾಧ್ಯಾಪಕ!

ಅಮೃತಸರ್: ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಹೊಂದಿರುವ ವ್ಯಕ್ತಿಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ತರಕಾರಿ ಮಾರುತ್ತಿದ್ದಾರೆ. 39 ವರ್ಷದ ಡಾ. ಸಂದೀಪ್ ಸಿಂಗ್ 11 ವರ್ಷಗಳ ಕಾಲ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಅವರು ಕಾನೂನಿ ವಿಷಯದಲ್ಲಿ ಪಿಎಚ್‌ಡಿ ಮತ್ತು ಪಂಜಾಬಿ, ಪತ್ರಿಕೋದ್ಯಮ ಮತ್ತು ರಾಜಕೀಯ ವಿಜ್ಞಾನ ಸೇರಿದಂತೆ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಮತ್ತು ಇನ್ನೂ ತಮ್ಮ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ. ಸಂಬಳ ಕಡಿತ ಮತ್ತು ಅನಿಯಮಿತ ವೇತನದಂತಹ ಅಡೆತಡೆಗಳನ್ನು […]