ಹಿರಿಯಡಕ: ಬಾವಿಗೆ ಹಾರಿ ಪೆರ್ಡೂರು ನಿವಾಸಿ ಆತ್ಮಹತ್ಯೆ

ಹಿರಿಯಡಕ: ಒಂಟಿತನದಿಂದ ಮಾನಸಿಕವಾಗಿ ಮನನೊಂದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ‌ ತಾಲೂಕಿನ ಪೆರ್ಡೂರು ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ನಡೆದಿದೆ. ಪೆರ್ಡೂರು ಗ್ರಾಮದ ಗುಂಡ್ಯಡ್ಕ ನಿವಾಸಿ ಸುಬ್ಬಣ್ಣ ಪ್ರಭು (60) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.‌ ಇವರು ತಾಯಿಯೊಂದಿಗೆ ವಾಸವಾಗಿದ್ದರು. ಹೆಂಡತಿ ಕಾಯಿಲೆಯಿಂದ ಮೃತಪಟ್ಟಿದ್ದು, ಒಬ್ಬನೇ ಮಗ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಕಳೆದ 4 ತಿಂಗಳ ಹಿಂದೆ ಸುಬ್ಬಣ್ಣನ ತಮ್ಮ ಸತೀಶ ಪ್ರಭು ಎಂಬವರು ಬಾವಿಗೆ ಬಿದ್ದು ಮೃತಪಟ್ಟಿದ್ದರು. ಹಿಂದಿನಿಂದಲೂ ಕುಡಿತದ ಚಟ […]