ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆ ಸೇರಿದಂತೆ 14 ಎಫ್‌ಡಿಸಿ ಔಷಧಿಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ನವದೆಹಲಿ: ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆಗಳು ಮತ್ತು ಕ್ಲೋರ್ಫೆನಿರಮೈನ್ ಮಲೇಟ್ ಮತ್ತು ಕೊಡೈನ್ ಸಿರಪ್ ಸೇರಿದಂತೆ 14 ಫಿಕ್ಸೆಡ್ ಡೋಸ್ ಸಂಯೋಜನೆಯ ಔಷಧಗಳು ಜನರಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಕೇಂದ್ರ ಸರ್ಕಾರವು ನಿಷೇಧಿಸಿದೆ. ಈ ಫಿಕ್ಸ್‌ಡ್ ಡೋಸ್ ಕಾಂಬಿನೇಶನ್ (ಎಫ್‌ಡಿಸಿ) ಔಷಧಿಗಳಿಗೆ “ಯಾವುದೇ ಚಿಕಿತ್ಸಕ ಸಮರ್ಥನೆ” ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಹೇಳಿದೆ. ಎಫ್‌ಡಿಸಿ ಔಷಧಿಗಳೆಂದರೆ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳು ಒಂದು ಸ್ಥಿರ ಅನುಪಾತದಲ್ಲಿ ಸಂಯೋಜನೆಯನ್ನು ಒಳಗೊಂಡಿರುತ್ತದೆ. ತಜ್ಞರ ಸಮಿತಿಯ […]

ಶೀತ, ಕೆಮ್ಮು, ಚರ್ಮ ರೋಗದಂತಹ 16 ಔಷಧಿಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲು ಆರೋಗ್ಯ ಸಚಿವಾಲಯ ಚಿಂತನೆ

ನವದೆಹಲಿ: ಕೆಮ್ಮು, ಶೀತ, ನೋವು ಮತ್ತು ಚರ್ಮ ರೋಗಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರೆಸಿಟಮಾಲ್, ನೇಸಲ್ ಡಿಕೊಂಜೆಸ್ಟೆಂಟ್‌ಗಳು ಮತ್ತು ಆಂಟಿಫಂಗಲ್‌ಗಳು ಶೀಘ್ರದಲ್ಲೇ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಾಗಲಿದೆ ಎನ್ನಲಾಗಿದೆ. ಕೇಂದ್ರವು ಅವುಗಳನ್ನು ಓವರ್ ದ ಕೌಂಟರ್ (ಒಟಿಸಿ) ವರ್ಗದ ಅಡಿಯಲ್ಲಿ ಪಟ್ಟಿ ಮಾಡಲು ಯೋಜಿಸುತ್ತಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು 1945 ರ ಡ್ರಗ್ಸ್ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ಈಗ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಇಂತಹ 16 ಔಷಧಿಗಳಿಗೆ ವಿನಾಯಿತಿಗಳನ್ನು ಒದಗಿಸಲು […]