ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆ ಸೇರಿದಂತೆ 14 ಎಫ್‌ಡಿಸಿ ಔಷಧಿಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ನವದೆಹಲಿ: ನಿಮೆಸುಲೈಡ್ ಮತ್ತು ಪ್ಯಾರೆಸಿಟಮಾಲ್ ಮಾತ್ರೆಗಳು ಮತ್ತು ಕ್ಲೋರ್ಫೆನಿರಮೈನ್ ಮಲೇಟ್ ಮತ್ತು ಕೊಡೈನ್ ಸಿರಪ್ ಸೇರಿದಂತೆ 14 ಫಿಕ್ಸೆಡ್ ಡೋಸ್ ಸಂಯೋಜನೆಯ ಔಷಧಗಳು ಜನರಿಗೆ ಅಪಾಯವನ್ನುಂಟುಮಾಡುತ್ತವೆ ಎಂದು ಕೇಂದ್ರ ಸರ್ಕಾರವು ನಿಷೇಧಿಸಿದೆ.

ಈ ಫಿಕ್ಸ್‌ಡ್ ಡೋಸ್ ಕಾಂಬಿನೇಶನ್ (ಎಫ್‌ಡಿಸಿ) ಔಷಧಿಗಳಿಗೆ “ಯಾವುದೇ ಚಿಕಿತ್ಸಕ ಸಮರ್ಥನೆ” ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ಹೇಳಿದೆ.

ಎಫ್‌ಡಿಸಿ ಔಷಧಿಗಳೆಂದರೆ ಎರಡು ಅಥವಾ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳು ಒಂದು ಸ್ಥಿರ ಅನುಪಾತದಲ್ಲಿ ಸಂಯೋಜನೆಯನ್ನು ಒಳಗೊಂಡಿರುತ್ತದೆ. ತಜ್ಞರ ಸಮಿತಿಯ ಶಿಫಾರಸುಗಳನ್ನು ಅನುಸರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಈ ನಿಷೇಧಿತ ಔಷಧಿಗಳಲ್ಲಿ ಸಾಮಾನ್ಯ ಸೋಂಕುಗಳು, ಕೆಮ್ಮು ಮತ್ತು ಜ್ವರದ ಸಂಯೋಜನೆಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇವುಗಳಲ್ಲಿ ನಿಮೆಸುಲೈಡ್, ಪ್ಯಾರೆಸಿಟಮಾಲ್ ಮಾತ್ರೆಗಳು, ಕ್ಲೋರ್ಫೆನಿರಮೈನ್ ಮಲೇಟ್ ಕೊಡೈನ್ ಸಿರಪ್, ಫೋಲ್ಕೊಡೈನ್ ಪ್ರೊಮೆಥಾಜಿನ್, ಅಮೋಕ್ಸಿಸಿಲಿನ್ ಬ್ರೋಮ್ಹೆಕ್ಸಿನ್, ಮತ್ತು ಬ್ರೋಮ್ಹೆಕ್ಸಿನ್ ಡೆಕ್ಸ್ಟ್ರೋಮೆಥೋರ್ಫಾನ್ ಅಮೋನಿಯಂ ಕ್ಲೋರೈಡ್ ಮೆಂಥಾಲ್, ಪ್ಯಾರೆಸಿಟಮಾಲ್ ಬ್ರೋಮ್ಹೆಕ್ಸಿನ್ ಫೆನೈಲ್ಫ್ರಿನ್ ಕ್ಲೋರ್ಫೆನಿರಮೈನ್ ಗ್ವೈಫೆನೆಸಿನ್ ಮತ್ತು ಸಾಲ್ಬುಟಮಾಲ್ ಬ್ರೋಮ್ಹೆಕ್ಸಿನ್.

ತಜ್ಞರ ಸಮಿತಿಯು “ಈ ಎಫ್‌ಡಿಸಿ (ಫಿಕ್ಸ್‌ಡ್ ಡೋಸ್ ಕಾಂಬಿನೇಶನ್) ಗೆ ಯಾವುದೇ ಚಿಕಿತ್ಸಕ ಸಮರ್ಥನೆ ಇಲ್ಲ ಮತ್ತು ಎಫ್‌ಡಿಸಿ ಮನುಷ್ಯರಿಗೆ ಅಪಾಯವನ್ನು ಒಳಗೊಂಡಿರಬಹುದು ಎಂದಿದೆ. ಆದ್ದರಿಂದ, ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಲ್ಲಿ, ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್, 1940 ರ ಸೆಕ್ಷನ್ 26 ಎ ಅಡಿಯಲ್ಲಿ ಈ ಎಫ್‌ಡಿಸಿಯ ತಯಾರಿಕೆ, ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವುದು ಅವಶ್ಯಕ. ರೋಗಿಗಳಲ್ಲಿ ಯಾವುದೇ ಬಳಕೆಯು ಸಮರ್ಥನೀಯವಲ್ಲ ಎಂದು ಅಧಿಸೂಚನೆ ಹೇಳಿದೆ.

ತಜ್ಞರ ಸಮಿತಿ ಮತ್ತು ಔಷಧಗಳ ತಾಂತ್ರಿಕ ಸಲಹಾ ಮಂಡಳಿಯ ಶಿಫಾರಸುಗಳ ಆಧಾರದ ಮೇಲೆ, ಕೇಂದ್ರ ಸರ್ಕಾರವು ಸಾರ್ವಜನಿಕ ಹಿತಾಸಕ್ತಿಯಿಂದ ಸದರಿ ಔಷಧಿಗಳ ಉತ್ಪಾದನೆ ಮತ್ತು ಮಾರಾಟ ಮತ್ತು ವಿತರಣೆಯನ್ನು ದೇಶದಲ್ಲಿ ನಿಷೇಧಿಸುವ ಮೂಲಕ ನಿಯಂತ್ರಿಸುವುದು ಅಗತ್ಯ ಮತ್ತು ಸೂಕ್ತವೆಂದು ಕಂಡುಕೊಂಡಿದೆ ಎಂದು ಅಧಿಸೂಚನೆ ಸೇರಿಸಿದೆ.