ಪಡುಬಿದ್ರಿ: ಜ.19 ರಿಂದ ಐತಿಹಾಸಿಕ ಢಕ್ಕೆ ಬಲಿ ಸೇವೆ ಆರಂಭ

ಪಡುಬಿದ್ರಿ: ಇಲ್ಲಿನ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆ ಬಲಿ ಸೇವೆಯು ಜ.19 ರಂದು ಮಂಡಲ ಸೇವೆಯೊಂದಿಗೆ ಆರಂಭಗೊಳ್ಳಲಿದೆ. ಮಾರ್ಚ್ 11 ರಂದು ನಡೆಯುವ ಮಂಡಲ ವಿಸರ್ಜೆಯೊಂದಿಗೆ ಢಕ್ಕೆ ಬಲಿ ಸೇವೆಗಳು ಸಂಪನ್ನವಾಗಲಿವೆ. ಈ ಬಾರಿ ಒಟ್ಟು 36 ಸೇವೆಗಳು ಇರಲಿವೆ. ಹೆಚ್ಚಿನ ಮಾಹಿತಿಗಾಗಿ ಬ್ರಹ್ಮಸ್ಥಾನದ ಕಚೇರಿ ಅಥವಾ ಖಡೇಶ್ವರಿ ವನದುರ್ಗಾ ಟ್ರಸ್ಟ್ ನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ.

ಉಚ್ಚಿಲ: ಸ್ಕಾರ್ಪಿಯೋ ಚಾಲಕನ ಅವಾಂತರದಿಂದ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಪಡುಬಿದ್ರೆ: ಉಚ್ಚಿಲದಲ್ಲಿ ಸ್ಕಾರ್ಪಿಯೋ ಚಾಲಕನ ಅವಾಂತರದಿಂದಾಗಿ ನಾಲ್ಕು ವಾಹನಗಳು ಸರಣಿ ಅಪಘಾತಕ್ಕೆ ತುತ್ತಾಗಿವೆ. ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಮಸೀದಿ ಎದುರು ಈ ಘಟನೆ ಸಂಭವಿಸಿದೆ. ಸ್ಕಾರ್ಪಿಯೋ ಚಾಲಕ ಅತೀವೇಗ ಹಾಗೂ ನಿರ್ಲಕ್ಷ ತನದಿಂದ ವಾಹನ ಚಲಾಯಿಸುತ್ತಾ ಮಂಗಳೂರಿನಿಂದ ಉಡುಪಿ ಕಡೆ ಬರುತ್ತಿದ್ದು, ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಬಳಿಕ ವಾಹನವನ್ನು ಅಲ್ಲಿ ನಿಲ್ಲಿಸದೆ ಅತಿವೇಗದಿಂದ ಮುಂದೆ ಸಾಗಿ ಅಲ್ಲಿ ಮತ್ತೆ ಎರ್ಟಿಗಾ ಕಾರು, ಬೈಕು ಹಾಗೂ ಮೀನಿನ ಲಾರಿಗೆ ಡಿಕ್ಕಿ […]

ನಂದಿಕೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಮಹೋತ್ಸವ

ಪಡುಬಿದ್ರೆ: ಇಲ್ಲಿನ ನಂದಿಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಸೆ. 26 ಸೋಮವಾರದಿಂದ ಅ. 05 ಬುಧವಾರದ ತನಕ ಶ್ರೀದೇವಿ ಸನ್ನಿಧಾನದಲ್ಲಿ ನಡೆಯುವ ಶರನ್ನವರಾತ್ರಿ ಮಹೋತ್ಸವದ ಕಾರ್ಯಕ್ರಮವು ಪ್ರತೀ ವರ್ಷದಂತೆ ಭಕ್ತಾದಿಗಳ, ಆಸ್ತಿಕ ಮಹಾಶಯರ ಸಹಕಾರದೊಂದಿಗೆ ವೈಭವದಿಂದ ನಡೆಯಲಿರುವುದು. ಭಕ್ತಾದಿಗಳು ಈ ಪರ್ವ ಕಾಲದಲ್ಲಿ ಶ್ರೀದೇವಿಯ ದರ್ಶನ ಮಾಡಿ ಶ್ರೀ ಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇವೆ ಎಂದು ಅಡೈ ನಂದಿಕೂರು, ಉಳ್ಳೂರು ಕೊಳಚೂರು ಗ್ರಾಮಸ್ಥರು ತಿಳಿಸಿದ್ದಾರೆ. ಪರ್ಯಾಯ ತಂತ್ರಿಗಳು, ಅರ್ಚಕರಾದ ವಿದ್ವಾನ್ […]

ಪಡುಬಿದ್ರೆ: ರೋಟರಿ ಸಮುದಾಯದಳದ ಪದಪ್ರಧಾನ ಸಮಾರಂಭ 

  ಪಡುಬಿದ್ರೆ: ರೋಟರಿ ಕ್ಲಬ್ಬಿನ ಅಂಗಸಂಸ್ಥೆಯಾದ ಪಡುಬಿದ್ರೆ ರೋಟರಿ ಸಮುದಾಯದಳದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ರೋಟರಿ ಜಿಲ್ಲಾ ಉಪಸಭಾಪತಿ ರೋ. ಸಚ್ಚಿದಾನಂದ ನಾಯಕ್ ಅವರ ಉಪಸ್ಥಿತಿಯಲ್ಲಿ ನೆರವೇರಿತು. ಪದಪ್ರಧಾನ ಮಾಡಿ ಮಾತನಾಡಿದ ಅವರು, ರೋಟರಿಯ ವ್ಯಕ್ತಿತ್ವ ಬೆಳೆಸುವ ಕಾರ್ಯದಿಂದ ವ್ಯಕ್ತಿ ನಿರ್ಮಾಣ, ಜನಸೇವೆಯಿಂದ ಸಧೃಡ ಸಮಾಜ ನಿರ್ಮಾಣ, ಮತ್ತು ದಾನಿಗಳಿಂದ ಮನುಕುಲದ ಸಾಂತ್ವನಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸಮುದಾಯದಳವು ರೋಟರಿಯ ಪ್ರತಿಬಿಂಬ. ನಮ್ಮ ಸರ್ವತೋಮುಖ ಬೆಳವಣಿಗೆಗೆ ರೋಟರಿ ಸಂಸ್ಥೆ ಸಹಕಾರಿ ಎಂದು ಹೇಳಿದರು. ವಲಯ 5ರ ಆರ್.ಸಿ.ಸಿ […]

ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಪಡುಬಿದ್ರೆ ಶಾಖೆ ಉದ್ಘಾಟನೆ

ಪಡುಬಿದ್ರೆ: ಹಳೆಯಂಗಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪ್ರಿಯದರ್ಶಿನಿ ಕೋ.ಆಪರೇಟಿವ್ ಸೊಸೈಟಿಯ ಉಡುಪಿ ಜಿಲ್ಲೆಯ ಪ್ರಥಮ ಶಾಖೆಯನ್ನು ಪಡುಬಿದ್ರಿ ಶ್ರೀ ಮಹಾ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ತೆರೆಯಲಾಯಿತು. ನೂತನ ಶಾಖೆಯನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ ಮಾತನಾಡಿ, ಹಳೆಯಂಗಡಿಯ ಭೀಷ್ಮ ದಿ.ನಾರಾಯಣ ಸನಿಲ್ ರವರ ಆದರ್ಶಗಳ ಮೂಲಕ ಪ್ರಾರಂಭಗೊಂಡ ಪ್ರಿಯದರ್ಶಿನಿ ಕೊ.ಆಪರೇಟಿವ್ ಸೊಸೈಟಿ ಪ್ರಾಮಾಣಿಕತೆಯ ಸೇವೆ ನೀಡುವ ಮೂಲಕ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ […]