ಪಡುಬಿದ್ರೆ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಪಡುಬಿದ್ರೆ: ಬಿಸ್ಕೆಟ್ ಕೊಡುವ ನೆಪದಲ್ಲಿ ಐದು ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಮುಫಿಜುಲ್ ಶೇಖ್ (26) ಎಂಬಾತನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಮುಫಿಜುಲ್ ಕೆಲಸ ಮಾಡುತ್ತಿದ್ದ. ಸಂತ್ರಸ್ತ ಬಾಲಕಿಯ ಪೋಷಕರು ಕೂಡ ಇದೇ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದು ಇವರು ಕೂಡ ಮುರ್ಷಿದಾಬಾದ್ ಮೂಲದವರಾಗಿದ್ದಾರೆ. ಜುಲೈ 26 ರಂದು ಮಧ್ಯಾಹ್ನ, ಮುಫಿಜುಲ್ ಬಿಸ್ಕತ್ತು ಕೊಡುವುದಾಗಿ ಬಾಲಕಿಯ ಪೋಷಕರಿಗೆ ಹೇಳಿ […]
ಪಡುಬಿದ್ರೆ: ಬ್ಲ್ಯೂ ಫ್ಲ್ಯಾಗ್ ಬೀಚ್‍ನಲ್ಲಿ ತೀವ್ರ ಕಡಲ್ಕೊರೆತ; ಸಮುದ್ರ ಪಾಲಾದ ರಕ್ಷಣಾ ಗೋಡೆ

ಪಡುಬಿದ್ರೆ: ಪಡುಬಿದ್ರೆ ಎಂಡ್ ಪಾಯಿಂಟ್ ನಲ್ಲಿರುವ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಬೀಚ್ ಅಭಿವೃದ್ಧಿಗಾಗಿ ನಿರ್ಮಿಸಿದ ಕಾಂಕ್ರೀಟ್ ತಡೆಗೋಡೆ, ವಾಚಿಂಗ್ ಟವರ್ ಪಕ್ಕದಲ್ಲಿ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿವೆ. ಪ್ರವಾಸಿಗರ ಅನುಕೂಲತೆಗಾಗಿ ಅಳವಡಿಸಿದ ಗುಡಿಸಲು, ಗಿಡ ಮರಗಳು, ಲೈಟ್ ಕಂಬಗಳು, ಪೈಪ್‍ಲೈನ್ ಎಲ್ಲವೂ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ರಕ್ಷಣೆಗಾಗಿ ಕಟ್ಟಿದ ಕಲ್ಲಿನ ಕಟ್ಟೆ ಕೊಚ್ಚಿಕೊಂಡು […]
ಪಡುಬಿದ್ರೆ: ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದ ವಿನಯ್ ಕುಮಾರ್ ಸೊರಕೆ

ಪಡುಬಿದ್ರೆ: ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪಡುಬಿದ್ರಿ ಬೀಚ್ ನ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಇಲಾಖೆ ಅಭಿಯಂತರರನ್ನು ಕರೆಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಪ್ರಯುಕ್ತ ದುರ್ಗಾ ಪ್ರಸಾದ್ ಜ್ಯುವೆಲ್ಲರ್ಸ್ ನಲ್ಲಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ

ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ದುರ್ಗಾಪ್ರಸಾದ್ ಜ್ಯುವೆಲ್ಲರ್ಸ್ ವತಿಯಿಂದ ಕರ್ನಾಟಕ ಗೋಲ್ಡ್ ಫೆಸ್ಟಿವಲ್ ಅಂಗವಾಗಿ ಚಿನ್ನ, ವಜ್ರಾಭರಣ ಹಾಗೂ ಬೆಳ್ಳಿ ಪದಾರ್ಥಗಳ ಮೇಲೆ ಕೂಪನ್ ಗಳನ್ನು ಪಡೆದುಕೊಂಡು ಹೆಚ್ಚು ಬಹುಮಾನಗಳನ್ನು ಗೆಲ್ಲುವ ಅವಕಾಶ. ಬಂಪರ್ ಬಹುಮಾನ 1 ಕಿಲೋ ಚಿನ್ನ, 5 ಕಿಲೋ ವರೆಗೆ ಇತರ ಬೆಳ್ಳಿ ನಾಣ್ಯ ಹಾಗೂ ಜಿಲ್ಲಾ ಬಹುಮಾನಗಳನ್ನು ಗೆಲ್ಲುವ ಅವಕಾಶ ಕೊಡುಗೆ ಮೇ 32 ರವರೆಗೆ ಮಾತ್ರ. ಕ್ಲಪ್ತ ಸಮಯಕ್ಕೆ ವಿವಿಧ ನಮೂನೆಯ ಚಿನ್ನ ಹಾಗೂ ವಜ್ರದ ಆಭರಣಗಳನ್ನು ತಯಾರಿಸಿ […]
ಪಡುಬಿದ್ರಿ: ಕೋಟ್ಪಾ ದಾಳಿ; 20 ಪ್ರಕರಣ ದಾಖಲು

ಪಡುಬಿದ್ರಿ : ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಸೋಮವಾರದಂದು ಉಡುಪಿ ತಾಲೂಕಿನ ಪಡುಬಿದ್ರಿ ಹಾಗೂ ಇಂಡಸ್ಟ್ರಿಯಲ್ ಏರಿಯಾ ನಂದಿಕೂರು ವ್ಯಾಪ್ತಿಯ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4 ಮತ್ತು 6(ಎ) ಅಡಿಯಲ್ಲಿ ಒಟ್ಟು 20 ಪ್ರಕರಣ ದಾಖಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವಪ್ಪ ಪಟಗಾರ್, ಕಾರ್ಮಿಕ […]