ಪಡುಬಿದ್ರಿ: ಜ.19 ರಿಂದ ಐತಿಹಾಸಿಕ ಢಕ್ಕೆ ಬಲಿ ಸೇವೆ ಆರಂಭ

ಪಡುಬಿದ್ರಿ: ಇಲ್ಲಿನ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆ ಬಲಿ ಸೇವೆಯು ಜ.19 ರಂದು ಮಂಡಲ ಸೇವೆಯೊಂದಿಗೆ ಆರಂಭಗೊಳ್ಳಲಿದೆ.

ಮಾರ್ಚ್ 11 ರಂದು ನಡೆಯುವ ಮಂಡಲ ವಿಸರ್ಜೆಯೊಂದಿಗೆ ಢಕ್ಕೆ ಬಲಿ ಸೇವೆಗಳು ಸಂಪನ್ನವಾಗಲಿವೆ.

ಈ ಬಾರಿ ಒಟ್ಟು 36 ಸೇವೆಗಳು ಇರಲಿವೆ.

ಹೆಚ್ಚಿನ ಮಾಹಿತಿಗಾಗಿ ಬ್ರಹ್ಮಸ್ಥಾನದ ಕಚೇರಿ ಅಥವಾ ಖಡೇಶ್ವರಿ ವನದುರ್ಗಾ ಟ್ರಸ್ಟ್ ನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸಲು ಕೋರಲಾಗಿದೆ.