ಬಘೀರಾ, ಸಲಾರ್, ಎನ್ಟಿಆರ್31, ಕೆಜಿಎಫ್ 3….. ಅಬ್ಬಬ್ಬಾ… ಕೆ.ಜಿ.ಎಫ್ ತಂಡದಿಂದ ಸಾಲು ಸಾಲು ಸಿನಿಮಾ… ಸಿನಿ ಪ್ರೇಮಿಗಳಿಗೆ ಹಬ್ಬವೋ ಹಬ್ಬ….
ಬೆಂಗಳೂರು: ಕೆಜಿಎಫ್ ನಿರ್ಮಾಪಕರ ತಂಡದಿಂದ ಶ್ರೀಮುರಳಿ ಅಭಿನಯದ ಮತ್ತೊಂದು ಅದ್ದೂರಿ ಚಿತ್ರ “ಬಘೀರ”ಗೆ ಚಾಲನೆ ದೊರೆತಿದೆ. ಇದರ ಬೆನ್ನಲ್ಲೇ ಕೆಜಿಎಫ್ ಚಾಪ್ಟರ್ 2ರ ಉತ್ತರಭಾಗ ಕೆಜಿಎಫ್ 3 ತೆರೆ ಮೇಲೆ ಮೂಡಿ ಬರುವ ಬಗ್ಗೆ ಮಾಹಿತಿಗಳು ಹರಿದಾಡುತ್ತಿವೆ. ಕೆಜಿಎಫ್ ಸಿನಿಮಾಗಳಿಗೆ ನಿರ್ದೇಶಕರಾಗಿರುವ ಪ್ರಶಾಂತ್ ನೀಲ್ ತಮ್ಮ ಮುಂದಿನ ಪ್ರಾಜೆಕ್ಟ್, ಪ್ರಭಾಸ್ ನಾಯಕ ನಟನಾಗಿರುವ ಸಲಾರ್ ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಾದ ಬಳಿಕ ಕೆ.ಜಿ.ಎಫ್- 3 ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ. ಇದರ ಜೊತೆಗೆ ಶುಕ್ರವಾರ, ಮೇ 20 ರಂದು […]