ಕಾರ್ಕಳ: ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ಶಿಬಿರ ಉದ್ಘಾಟನೆ

ಕಾರ್ಕಳ: ಸೇವಾ ಮನೋಭಾವನೆ ಹಾಗೂ ಸಹಬಾಳ್ವೆ ಮೂಲಕ ಬದುಕು ಕಲಿಸಲು ಎನ್ ಎಸ್ ಎಸ್ ಸಹಕಾರಿಯಾಗಿದೆ ಎಂದು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಕಾರ್ಕಳ ತಾಲೂಕಿನ ಕ್ರಿಯೆಟಿವ್  ಕಾಲೇಜು ವತಿಯಿಂದ  ಹಿರ್ಗಾನದ ಬಿ.ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ  ಸುಲೋಚನಾ ಸುಂದರ ಶೆಟ್ಟಿ ಕಲಾ ವೇದಿಕೆಯಲ್ಲಿ ನಡೆದ ಕಾಲೇಜಿನ ಮೊದಲ ಎನ್ ಎಸ್‌ ಎಸ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸೇವಾ ಭಾವನೆ ಜೀವನದ ಉತ್ಕರ್ಷಕ್ಕೆ ಭದ್ರ ಬುನಾದಿಯಾಗಿದೆ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚಿನ ಉತ್ತೆಜನ ನೀಡಿದಂತಾಗುತ್ತಿದೆ […]

ಕಾರ್ಕಳ: ಕ್ರಿಯೇಟಿವ್‌ ಕಾಲೇಜಿನ ಎನ್.ಎಸ್.ಎಸ್‌ ಶಿಬಿರದ ಪೂರ್ವಭಾವಿ ಸಭೆ

ಕಾರ್ಕಳ: ಇಲ್ಲಿನ ಮೂರೂರಿನಲ್ಲಿಅ12 ರಿಂದ 18 ರ ವರೆಗೆ ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ಎನ್‌.ಎಸ್‌.ಎಸ್‌ ಶಿಬಿರವು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೆ.30 ರಂದು ಊರಿನ ಹಿರಿಯರು ಹಾಗೂ ಗಣ್ಯರ ಮಾರ್ಗದರ್ಶನದಲ್ಲಿ ಶಿಬಿರದ ಪೂರ್ವಭಾವಿ ಸಭೆ ನಡೆಯಿತು. ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಯವರು ಶಿಬಿರದ ಆಯೋಜನೆಯ ಉದ್ದೇಶ ಮತ್ತು ನಾಗರಿಕ ಸಮುದಾಯಗಳ ಪ್ರಗತಿ, ಊರಿನವರ ಸಹಕಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಊರಿನ […]

ವಿದ್ಯಾರ್ಥಿ ಜೀವನದಲ್ಲಿ ನೈತಿಕ ಮೌಲ್ಯ ಅಳವಡಿಸಿಕೊಳ್ಳಲು ಎನ್.ಎಸ್.ಎಸ್ ಸಹಕಾರಿ: ಡಾ. ಗಣನಾಥ ಎಕ್ಕಾರು

ಉಡುಪಿ: ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವ, ಸಹಕಾರ, ಸಹಬಾಳ್ವೆ ಮುಂತಾದ ಜೀವನದ ನೈತಿಕ ಮೌಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಲು ಎನ್. ಎಸ್. ಎಸ್ ಸಹಕಾರಿಯಾಗುತ್ತದೆ ಎಂದು ನಿಕಟ ಪೂರ್ವ ರಾಷ್ಟ್ರೀಯ ಸೇವಾ ಯೋಜನಾ ಸಂಪರ್ಕಾಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ ಡಾ. ಗಣನಾಥ ಎಕ್ಕಾರು ಹೇಳಿದರು. ನಗರದ ಡಾ. ಜಿ. ಶಂಕರ್. ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಯು. ಜಿ. ಸ್ ಸಭಾಂಗಣದಲ್ಲಿ ಮಂಗಳವಾರ ಎನ್.ಎಸ್.ಎಸ್ ಘಟಕ-1 ಮತ್ತು ಘಟಕ-2 ರ ಪ್ರಸ್ತುತ ಶೈಕ್ಷಣಿಕ ಸಾಲಿನ ಕಾರ್ಯಕ್ರಮಗಳನ್ನು […]

ಜ್ಞಾನಸುಧಾ ಕಾಲೇಜಿನಲ್ಲಿ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನೆ

ಕಾರ್ಕಳ: ಪಠ್ಯ ಶಿಕ್ಷಣದ ಜೊತೆಗೆ ಎನ್.ಎಸ್.ಎಸ್ ನಂತಹ ಪಠ್ಯೇತರ ಚಟುವಟಿಕೆಗಳು ನಮ್ಮ ಶೈಕ್ಷಣಿಕ ಜೀವನದಲ್ಲಿ ಜೀವನ ಕೌಶಲ್ಯಗಳನ್ನು ಕಲಿಸಿಕೊಡುತ್ತದೆ ಎಂದು ಜ್ಞಾನಸುಧಾ ವಾಣಿಜ್ಯ ವಿಭಾಗದ ಹಳೆವಿದ್ಯಾರ್ಥಿಗಳಾದ ಸಿ.ಎ. ರಘುರಾಮ್ ಪ್ರಭು ಹೇಳಿದರು. ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಎನ್.ಎಸ್.ಎಸ್.ನ ವಿವಿಧ ಚಟುವಟಿಕೆಗಳು ಶೈಕ್ಷಣಿಕ ಜೀವನದ ನಂತರ ನಮ್ಮ ವೃತ್ತಿ ಜೀವನಕ್ಕೆ, ಸಾಮಾಜಿಕ ಬದುಕಿಗೆ ಸಹಕಾರಿಯಾಗುತ್ತದೆ. ವಾಣಿಜ್ಯ ವಿಭಾಗದ ಸ್ಪರ್ಧಾತ್ಮಕ ಪ್ರಪಂಚಕ್ಕೆ ನಾವು ಕೌಶಲ್ಯಭರಿತರಾಗಿ ತೆರೆದುಕೊಳ್ಳಬೇಕಾಗಿದೆ ಎಂದರು. ಸಿಎ […]

ಬ್ರಹ್ಮಾವರ: ಸ.ಪ.ಪೂ ಕಾಲೇಜು ಎನ್.ಎಸ್.ಎಸ್ ವತಿಯಿಂದ ಯುವ ಸ್ಪಂದನ ಕಾರ್ಯಕ್ರಮ

ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಸರಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ “ಎನ್ ಎಸ್ ಎಸ್ ಯುವಸ್ಪಂದನ ” ಕಾರ್ಯಕ್ರಮದ ಅಡಿಯಲ್ಲಿ “ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಗಳು” ಎಂಬ ವಿಚಾರವಾಗಿ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಬ್ರಹ್ಮಾವರ ತಾಲೂಕಿನ ತಹಸೀಲ್ದಾರ್ ರಾಜಶೇಖರ ಮೂರ್ತಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ವಿಶೇಷ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಪರಿಚಯದೊಂದಿಗೆ ತಮ್ಮ ಜೀವನದ ಗುರಿ ಮತ್ತು ತಮ್ಮ ಜೀವನದ ಪ್ರೇರಕ ಶಕ್ತಿಗಳಾದ ಆದರ್ಶ […]