ಕಾರ್ಕಳ: ಕ್ರಿಯೇಟಿವ್‌ ಕಾಲೇಜಿನ ಎನ್.ಎಸ್.ಎಸ್‌ ಶಿಬಿರದ ಪೂರ್ವಭಾವಿ ಸಭೆ

ಕಾರ್ಕಳ: ಇಲ್ಲಿನ ಮೂರೂರಿನಲ್ಲಿಅ12 ರಿಂದ 18 ರ ವರೆಗೆ ಬಿ. ಎಂ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರಿಯೇಟಿವ್‌ ಕಾಲೇಜಿನ ಎನ್‌.ಎಸ್‌.ಎಸ್‌ ಶಿಬಿರವು ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಸೆ.30 ರಂದು ಊರಿನ ಹಿರಿಯರು ಹಾಗೂ ಗಣ್ಯರ ಮಾರ್ಗದರ್ಶನದಲ್ಲಿ ಶಿಬಿರದ ಪೂರ್ವಭಾವಿ ಸಭೆ ನಡೆಯಿತು.
ಕ್ರಿಯೇಟಿವ್‌ ವಿದ್ಯಾ ಸಂಸ್ಥೆಯ ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಯವರು ಶಿಬಿರದ ಆಯೋಜನೆಯ ಉದ್ದೇಶ ಮತ್ತು ನಾಗರಿಕ ಸಮುದಾಯಗಳ ಪ್ರಗತಿ, ಊರಿನವರ ಸಹಕಾರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಊರಿನ ಗಣ್ಯರಲ್ಲಿ ಶಿಬಿರದ ಎಲ್ಲ ಕೆಲಸ ಕಾರ್ಯಗಳಲ್ಲಿ ತನು-ಮನ-ಧನ ಸಹಾಯ ಮತ್ತು ಸಹಕಾರ ಕೋರಿದರು.
ಶಿಬಿರದ ಸಂಯೋಜಕಉಪನ್ಯಾಸಕ ಉಮೇಶ್‌ ರವರು ಪೂರ್ವ ತಯಾರಿ ಮತ್ತು ಶಿಬಿರದಲ್ಲಿ ಅಗತ್ಯತೆ ಮತ್ತು ಖರ್ಚು ವೆಚ್ಚಗಳ ಕುರಿತು ಮಾಹಿತಿ ನೀಡಿದರು.
 ಪಂಚಾಯತ್‌ ಮಾಜಿ ಅಧ್ಯಕ್ಷ ಸಂತೋಷ ಶೆಟ್ಟಿ, ಉದ್ಯಮಿ-ಚೇತನ್‌ ಶೆಟ್ಟಿ, ಸರ್ವತ್ತೋಮ ಕಡಂಬ, ವಾಸು ಶೆಟ್ಟಿ, ಹರಿಶ್ಚಂದ್ರ ಕುಲಾಲ್‌, ಚಂದ್ರಶೇಖರ ಹೆಗ್ಡೆ, ಶಾಂತರಾಮ ಹೆಗ್ಡೆ, ಮಹಾವೀರ ಕಡಂಬ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಮಾಜದ ಇನ್ನೂ ಅನೇಕರು ಉಪಸ್ಥಿತರಿದ್ದು ಸಂಪೂರ್ಣ ಸಹಕಾರದ ಭರವಸೆ ನೀಡಿದರು.