ಕಾರ್ಕಳ ಭುವನೆಂದ್ರ ಕಾಲೇಜಿನಲ್ಲಿ ಅಗ್ನಿಪಥ್ ದೌಡ್ ಮ್ಯಾರಥಾನ್ ಗೆ ಚಾಲನೆ

ನಿಟ್ಟೆ: ಉಡುಪಿ ಜಿಲ್ಲಾ ರಜತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸುವ ಜೊತೆಯಲ್ಲಿ ಯುವ ಜನತೆಯನ್ನು ಸೈನ್ಯಕ್ಕೆ ಸೇರಿಸುವ ಹಾಗೂ ಅಗ್ನಿಪಥ್ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ ಮತ್ತು ಟೀಮ್ ನೇಶನ್ ಫಸ್ಟ್ ಸಹಭಾಗಿತ್ವದಲ್ಲಿ, ಉಡುಪಿಯ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಆ. 24 ಮತ್ತು 25 ರಂದು ಆಯೋಜಿಸಲಾಗಿರುವ 75 ಕಿ.ಮೀ. ಮ್ಯಾರಥಾನ್ ಓಟ “ಅಗ್ನಿಪಥ್ ದೌಡ್” ಗೆ ಆ.24 ರಂದು ಕಾರ್ಕಳ ಭುವನೆಂದ್ರ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು. ಈ ತಂಡವು ನಿಟ್ಟೆ ವಿದ್ಯಾಸಂಸ್ಥೆಯ […]

ನಿಟ್ಟೆ: ನಿಟ್ಟೆ ಸಮೂಹದ ವಿದ್ಯಾಸಂಸ್ಥೆಯಲ್ಲಿ ಶ್ರೀ ಕೃ‍ಷ್ಣಜನ್ಮಾ‍ಷ್ಟಮಿ ಆ‍ಚರಣೆ

ನಿಟ್ಟೆ: ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಲಯದ ವತಿಯಿಂದ ನಿಟ್ಟೆ ಕ್ಯಾಂಪಸ್ ನ ಸದಾನಂದ ಸಭಾಂಗಣದಲ್ಲಿ ಆಗಸ್ಟ್ 19 ರಂದು ಶ್ರೀ ಕೃ‍ಷ್ಣಜನ್ಮಾ‍ಷ್ಟಮಿ ಹಬ್ಬವನ್ನು ವಿಜೃಂಭಣೆ ಹಾಗೂ ವಿಭಿನ್ನವಾಗಿ ಆ‍ಚರಿಸಲಾಯಿತು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್, ಕ್ಯಾಂಪಸ್ ಮೈಂಟೆನೆನ್ಸ್ ಎಂಡ್ ಡೆವಲಪ್ಮೆಂಟ್ ನ ನಿರ್ದೇಶಕ ಪ್ರೊ.ಯೋಗೀಶ್ ಹೆಗ್ಡೆ, ನಿಟ್ಟೆ ವಿದ್ಯಾಸಂಸ್ಥೆಯ ಹಿತೈಶಿ ಶ್ರೀ ಅಶೋಕ್ ಅಡ್ಯಂತಾಯ, ವಿದ್ಯಾರ್ಥಿ ನಿಲಯಗಳ ಚೀಫ್ ವಾರ್ಡನ್ ಗಳಾದ ಡಾ.ವೀಣಾದೇವಿ ಶಾಸ್ತ್ರೀಮಠ್, ಡಾ.ವಿಶ್ವನಾಥ್, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ […]

ನಿಟ್ಟೆ: ನಿಟ್ಟೆ ಮಹಾವಿದ್ಯಾಲಯದ ಪು‍ಷ್ಪರಾಜ್ ಅವರಿಗೆ ಡಾಕ್ಟರೇಟ್

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಪು‍ಷ್ಪರಾಜ್ ಎ. ನಾಯ್ಕ ಅವರು ತಮ್ಮದೇ ವಿಭಾಗದ ಪ್ರಾಧ್ಯಾಪಕ ಡಾ. ಉದಯಕುಮಾರ್ ಜಿ ಹಾಗೂ ಬಯೋಟೆಕ್ನಾಲಜಿ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ಸಿ ವಾಮನ್ ರಾವ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ರೀಡ್ ಬೆಡ್ ಕಾನ್ಸೆಪ್ಟ್ ಆಫ್ ವಾಟರ್ ವೇಸ್ಟ್ ಟ್ರೀಟ್ಮೆಂಟ್ ಎಂಡ್ ಪ್ರೊಡಕ್ಷನ್ ಆಫ್ ಬಯೋಗ್ಯಾಸ್ ಫ್ರಮ್ ರೀಡ್ ಛಾಫ್ ಎಂಡ್ ಅದರ್ ಬ್ಲೆಂಡ್ಸ್” ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು […]

ಭಾರತವನ್ನು ವಿಶ್ವಗುರುವಾಗಿಸಲು ಎಲ್ಲರ ಶ್ರಮವೂ ಅಗತ್ಯ: ಎ.ಯೋಗೀಶ್ ಹೆಗ್ಡೆ

ನಿಟ್ಟೆ: ಇಂದಿನ ನಮ್ಮ ಉತ್ತಮ ಬದುಕಿಗೆ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವೇ ಕಾರಣವೆಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇ ರೀತಿ ಪ್ರಸ್ತುತ ದಿನಗಳಲ್ಲಿ ಪ್ರತಿನಿತ್ಯದ ನೆಮ್ಮದಿಯ ಬದುಕಿಗೆ ಕಾರಣವಾಗಿರುವ ದೇಶದ ಗಡಿ ಕಾಯುವ ಯೋಧರ ತ್ಯಾಗಬಲಿದಾನವೂ ಸ್ಮರಣೀಯವಾದುದು. ಜಾಗತಿಕ ಮಟ್ಟದಲ್ಲಿ ಭಾರತವನ್ನು ವಿಶ್ವಗುರುವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ನಿಟ್ಟೆ ಕ್ಯಾಂಪಸ್‌ನ ಮೈಂಟೆನೆನ್ಸ್ ಎಂಡ್ ಡೆವಲೆಪ್ಮೆಂಟ್ ನ ನಿರ್ದೇಶಕ ಎ.ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು. ಅವರು ಆಗಸ್ಟ್15 ರಂದು ನಿಟ್ಟೆ ಕ್ಯಾಂಪಸ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ […]

ನಿಟ್ಟೆ ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನಿಟ್ಟೆ: ಜುಲೈ 12 ರಂದು ನಿಟ್ಟೆ ರೋಟರಿ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಿಟ್ಟೆ ಕಾಲೇಜಿನ ಸಂಭ್ರಮ ಸಭಾಂಗಣದಲ್ಲಿ ನೆರವೇರಿತು. 2023-24 ನೇ ಸಾಲಿನ ಪದಗ್ರಹಣ ಅಧಿಕಾರಿಯಾಗಿ ರೋಟರಿ ಜಿಲ್ಲೆ 3182 ನ ಗವರ್ನರ್ ಬಿ.ಸಿ. ಗೀತಾರವರು ಪದಗ್ರಹಣವನ್ನು ನೆರವೇರಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ನೂತನ ಅಧ್ಯಕ್ಷ ರೋ.ಡಾ.ಸುದೀಪ ಕೆ.ಬಿ, ಕಾರ್ಯದರ್ಶಿ ರೋ.ಡಾ.ಕೃಷ್ಣ ಪ್ರಸಾದ್ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷ ರೋ.ಡಾ.ಸುದೀಪ ಕೆ.ಬಿ ಮಾತನಾಡಿ, ಮುಂದಿನ ಜನಾಂಗಕ್ಕೆ ಶುದ್ದ ಗಾಳಿ, ನೀರು, ನೆಲದ ಪ್ರಕೃತಿಯನ್ನು […]