ಲಿಕ್ವಿಡ್ ನೈಟ್ರೋಜನ್ ಸಂಶೋಧನೆಗೆ ಸಹಕಾರ: ನಿಟ್ಟೆ ಹಾಗೂ ಇಲೈಟ್ ಇಂಡಸ್ಟ್ರೀಸ್ ನಡುವೆ ಒಪ್ಪಂದ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಲೈಟ್ ಇಂಡಸ್ಟ್ರೀಸ್ ಗ್ರೂಪ್ ಆಫ್ ಕಂಪೆನೀಸ್, ದಮನ್ & ಡಿಯು ನ ನಡುವಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕುವ ಹಾಗೂ ಹಸ್ತಾಂತರ ಮಾಡುವ ಕಾರ್ಯಕ್ರಮವು ಜು.12 ರಂದು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಇಲೈಟ್ ಇಂಡಸ್ಟ್ರೀಸ್ ಸಂಸ್ಥೆಯ ಸಿ.ಇ.ಒ ದಿನೇಶ್ ಶೆಟ್ಟಿ ಒಪ್ಪಂದದಕ್ಕೆ ಸಹಿ ಹಾಕಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಉದಯ್, ಇಲೈಟ್ ಸಂಸ್ಥೆಯೊಂದಿಗಿನ […]

ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ ಶಿಪ್: ನಾಲ್ಕು ಪ್ರಶಸ್ತಿ ಗೆದ್ದ ನಿಟ್ಟೆ ವಿದ್ಯಾರ್ಥಿಗಳು

ನಿಟ್ಟೆ: ಜೂ. 21 ರಿಂದ 26 ರವರೆಗೆ ಚಿತ್ರದುರ್ಗದ ಎಸ್.ಜೆ.ಎಂ ತಾಂತ್ರಿಕ ಕಾಲೇಜಿನಲ್ಲಿ ನಡೆದ ವಿ.ಟಿ.ಯು ಮಟ್ಟದ ಚೆಸ್ ಚ್ಯಾಂಪಿಯನ್ಶಿಪ್ ನಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಾಲ್ಕು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿಟ್ಟೆ ಕಾಲೇಜಿನ ಮಹಿಳಾ ಚೆಸ್ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ವಿಭಾಗದಲ್ಲಿ ಪ್ರಥಮ ಸ್ಥಾನ, ಇಂಟರ್ ಝೋನ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಪುರುಷ ತಂಡವು ರೆಸ್ಟ್ ಆಫ್ ಬೆಂಗಳೂರು ಝೋನ್ ಮತ್ತು ಇಂಟರ್ ಝೋನ್ ವಿಭಾಗಗಳೆರಡರಲ್ಲೂ ದ್ವಿತೀಯ […]

ಅಂತರ್ ಇಂಜಿನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ನಿಟ್ಟೆ ಕಾಲೇಜಿಗೆ ಪ್ರಶಸ್ತಿಅಂತರ್ ಇಂಜಿನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ನಿಟ್ಟೆ ಕಾಲೇಜಿಗೆ ಪ್ರಶಸ್ತಿ

ನಿಟ್ಟೆ: ಜೂ.25 ಹಾಗೂ 26 ರಂದು ಬೆಂಗಳೂರಿನ ಜೆ.ಎಸ್.ಎಸ್ ಅಕಾಡೆಮಿ ತಾಂತ್ರಿಕ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಅಂತರ್ ಇಂಜಿನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಕಾಲೇಜು ತಿಳಿಸಿದೆ.

ಡಾ.ಎನ್.ಎಸ್.ಎ.ಎಂ ಪ.ಪೂ ಕಾಲೇಜು: ದ್ವಿತೀಯ ಪಿಯುಸಿ ಯಲ್ಲಿ 95% ಫಲಿತಾಂಶ

ಕಾರ್ಕಳ: ನಿಟ್ಟೆಯಲ್ಲಿರುವ ಡಾ.ಎನ್.ಎಸ್.ಎ.ಎಂ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸ್ಮಿಶಾ ಕುಟಿನ್ಹೊ 589 ಅಂಕ ಗಳಿಸಿ ರಾಜ್ಯಕ್ಕೆ 10 ನೇ ರ‍್ಯಾಂಕ್‌ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಶ್ರೇಷ್ಠಾ 584 ಅಂಕ ಪಡೆದು ಕಾಲೇಜಿನ ವಾಣಿಜ್ಯ ವಿಭಾಗದ ಟಾಪರ್ ಆಗಿರುವರು. ವಿಜ್ಞಾನ ವಿಭಾಗದಲ್ಲಿ ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 80 ಮಂದಿ ತೇರ್ಗಡೆ ಹೊಂದಿರುತ್ತಾರೆ. ಅವರಲ್ಲಿ 41 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯನ್ನು ಪಡೆದಿದ್ದಾರೆ. […]

ನಿಟ್ಟೆ: ರೈತ ಉತ್ಪಾದಕ ಸಂಸ್ಥೆಯ ವ್ಯಾಪಾರ ಮಳಿಗೆ ಆರಂಭ

ನಿಟ್ಟೆ: ಕಾರ್ಕಳ ಪಡುಬಿದ್ರೆ ಮುಖ್ಯರಸ್ತೆಯ ಹಾಲೆಕಟ್ಟೆ ಕಲ್ಯಾದ ಸುರಕ್ಷ ಸಂಕೀರ್ಣದಲ್ಲಿ ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ವ್ಯಾಪಾರ ಮಳಿಗೆಯು ಜೂ.17 ರಂದು ಆರಂಭವಾಯಿತು. ನಿಟ್ಟೆ ಆಸುಪಾಸಿನ ಎಲ್ಲಾ ರೈತರ ಸಮೂಹ ಇದಾಗಿದ್ದು, ಕೃಷಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳು ಹಾಗೂ ಸೇವಾ ಸೌಲಭ್ಯಗಳು ಇಲ್ಲಿ ಲಭ್ಯವಿರುತ್ತದೆ. ಕಾರ್ಯಕ್ರಮದಲ್ಲಿ ನಿಟ್ಟೆ ರೈತ ಉತ್ಪಾದಕ ಸಂಸ್ಥೆಯ ಚೇರ್ ಮ್ಯಾನ್ ಅಶೋಕ್ ಅಡ್ಯಂತಾಯ, ನಿಟ್ಟೆ ಸಂಸ್ಥೆಯ ಅಟಲ್ ಇಂಕ್ಯೂಬೇಶನ್ ಸೆಂಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎ.ಪಿ. ಆಚಾರ್ಯ, ಇಂಕ್ಯೂಬೇಶನ್ ಮ್ಯಾನೇಜರ್ ಪುನೀತ್ […]