ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟ: ನಿಟ್ಟೆ ಪ.ಪೂ ಕಾಲೇಜಿನ ಬಾಲಕರ ತಂಡ ಪ್ರಥಮ

ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾರ್ಕಳದ ಕ್ರೈಸ್ಟ್ ಕಿಂಗ್ ಪಿ.ಯು ಕಾಲೇಜಿನ ಆಶ್ರಯದಲ್ಲಿ ಸೆ.19 ರಂದು ನಡೆದ ಕಾರ್ಕಳ ತಾಲೂಕು ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಗೊಂಡಿದೆ.
ನಿಟ್ಟೆ: ಕೆಮ್ಮಣ್ಣು ಬಾಲಕೃಷ್ಣ ರಾವ್ ಅವರ ‘ಇನ್ವೆಸ್ಟ್ ಇನ್ ಯುವರ್ಸೆಲ್ಫ್’ ಪುಸ್ತಕ ಬಿಡುಗಡೆ

ನಿಟ್ಟೆ: ಪ್ರತಿಯೋರ್ವನ ಜೀವನಾನುಭವವೂ ಇನ್ನೋರ್ವನಿಗೆ ಕಲಿಕೆಯ ಪಾಠವಾಗಬಹುದು. ಜೀವನದ ಕಲಿಕೆಯನ್ನು ನಮ್ಮ ನೆನಪಿನ ಹೊತ್ತಗೆಯನ್ನಾಗಿಸುವುದು ಸುಲಭದ ಕೆಲಸವಲ್ಲ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅಭಿಪ್ರಾಯಪಟ್ಟರು. ಸೆ.12 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ, ವಿವಿಧ ಕಾರ್ಫೋರೇಟ್ ಕಂಪೆನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಕೆಮ್ಮಣ್ಣು ಬಾಲಕೃಷ್ಣ ರಾವ್ ಅವರ ‘ಇನ್ವೆಸ್ಟ್ ಇನ್ ಯುವರ್ಸೆಲ್ಫ್’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಬಾಲಕೃಷ್ಣ ರಾವ್ ಅವರ ವೃತ್ತಿ ಜೀವನದ ಹಲವು […]
ಕೆಮ್ಮಣ್ಣು ರೋಟರಿ ಸಮುದಾಯದಳದ ಪದಪ್ರಧಾನ ಸಮಾರಂಭ

ಕೆಮ್ಮಣ್ಣು: ನಿಟ್ಟೆ ರೋಟರಿ ಕ್ಲಬ್ಬಿನ ಅಂಗಸಂಸ್ಥೆಯಾದ ಕೆಮ್ಮಣ್ಣು ರೋಟರಿ ಸಮುದಾಯದಳದ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲಾ ಉಪಾಧ್ಯಕ್ಷ ರೋ. ಸಚ್ಚಿದಾನಂದ ನಾಯಕ್, 34 ವರ್ಷಗಳ ಇತಿಹಾವಿರುವ ಈ ಸಂಸ್ಥೆ ರೋಟರಿ ಜಿಲ್ಲೆ 3182 ಇದಕ್ಕೆ ಕೀರ್ತಿಪ್ರಾಯವಾಗಿದೆ. ಸಮಾಜದ ಎಲ್ಲಾ ವರ್ಗದ ಜನರನ್ನು ಸೇರಿಸಿಕೊಂಡು ನಿರಂತರ ಸಕ್ರಿಯವಾಗಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಹೊಸ ಪದಾಧಿಕಾರಿಗಳು ಈ ಪರಂಪರೆಯನ್ನು ಇನ್ನೂ ಹೆಚ್ಚಿನ ಉತ್ಸಾಹದಿಂದ ನಡೆಸಿಕೊಂಡು ಹೋಗಲಿ ಎಂದು ಹಾರೈಸಿದರು. ನೂತನ […]
ರೈತ ಉತ್ಪಾದಕ ಕಂಪನಿ ಸ್ಥಾಪನೆಯಿಂದ ಜಸ್ಟೀಸ್ ಕೆ.ಎಸ್. ಹೆಗ್ಡೆಯವರ ಕನಸು ಸಾಕಾರ: ಯೋಗೀಶ್ ಹೆಗ್ಡೆ

ನಿಟ್ಟೆ: ನಿಟ್ಟೆ ಎಂಬ ಹಳ್ಳಿಯ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಇಂಗಿತ ಹೊಂದಿದ್ದ ಜಸ್ಟೀಸ್ ಕೆ.ಎಸ್. ಹೆಗ್ಡೆ ಅವರ ಕನಸು ಇಂದು ನಿಟ್ಟೆ ರೈತ ಉತ್ಪಾದಕ ಕಂಪನಿ ಉದ್ಘಾಟನೆಯಿಂದ ಸಾಕಾರಗೊಂಡಿದೆ ಎಂದರೆ ತಪ್ಪಾಗದು. ದೇಶದಲ್ಲಿ ಹಳ್ಳಿಗಳ ಅಭಿವೃದ್ದಿ, ಕೃಷಿ ಹಾಗೂ ರೈತರ ಅಭಿವೃದ್ದಿಗೆ ಬೆಂಬಲ ಸಿಕ್ಕರಷ್ಟೇ ದೇಶದ ಅಭಿವೃದ್ಧಿ ಸಾಧ್ಯ ಎಂದು ನಿಟ್ಟೆ ಕ್ಯಾಂಪಸ್ ಮೈಂಟೆನೆನ್ಸ್ ಎಂಡ್ ಡೆವಲಪ್ಮೆಂಟ್ ನ ನಿರ್ದೇಶಕ ಯೋಗೀಶ್ ಹೆಗ್ಡೆ ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಕೃಷಿ, […]
ನಿಟ್ಟೆ: ಎನ್.ಐ.ಆರ್.ಎಫ್ ಪ್ರಾಮುಖ್ಯತೆ ಕುರಿತು ಕಾರ್ಯಾಗಾರ

ನಿಟ್ಟೆ: ನಿಟ್ಟೆ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆ.25 ರಂದು ನಡೆದ ಒಂದು ದಿನದ ಎನ್.ಐ.ಆರ್.ಎಫ್ ಶ್ರೇಯಾಂಕ ಕುರಿತಾದ ಕಾರ್ಯಾಗಾರ ನಡೆಯಿತು. ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ಕೆ. ಬಲವೀರ ರೆಡ್ಡಿ, ದೇಶದ ಅಭಿವೃದ್ದಿಯಲ್ಲಿ ಶಿಕ್ಷಣ ಕ್ಷೇತ್ರ ಅತಿ ಪ್ರಾಮುಖ್ಯತೆಯನ್ನು ಪಡೆದಿದೆ. ಶಿಕ್ಷಣದ ಗುಣಮಟ್ಟ ಉತ್ತಮವಾಗಿದ್ದರೆ ಸಮಾಜದ ಏಳಿಗೆ ಕ್ಷಿಪ್ರವಾಗಲಿದೆ ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಮೌಲ್ಯಮಾಪನಕ್ಕಾಗಿ ನ್ಯಾಕ್, […]