ಯುವ ಜನತೆ ಕನ್ನಡ ಭಾಷೆ ಹಾಗೂ ಜಾನಪದ ಪ್ರಕಾರಗಳನ್ನು ಉಳಿಸಿ ಬೆಳೆಸಬೇಕು: ವಿದುಷಿ ಮಾನಸಿ ಸುಧೀರ್

ನಿಟ್ಟೆ: ಯುವಕ, ಯುವತಿಯರಲ್ಲಿ ಕನ್ನಡದ ಬಗೆಗಿನ ಒಲವು ಹಾಗೂ ಅಭಿಮಾನ ಹೆಚ್ಚುತ್ತಿರುವುದು ಸ್ವಾಗತಾರ್ಹ. ಜಾನಪದ ಪ್ರಕಾರಗಳನ್ನು ಇಂದಿನ ಜನತೆ ಅಭ್ಯಸಿಸಿ ಮುಂದಿನ ಪೀಳಿಗೆಗೆ ಕಲಾಪ್ರಕಾರವನ್ನು ದಾಟಿಸುವುದು ಅಗತ್ಯ ಎಂದು ಚಲನಚಿತ್ರ, ಕಾವ್ಯಾಭಿನಯ ಹಾಗೂ ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ದಿವ್ಯಾಂಕುರ’ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲಾವಿದರು, ಪ್ರಾಂತ್ಯಾವಾರು ವಿವಿಧ ಬಗೆಯ ಕಲಾಪ್ರಕಾರಗಳು, ತಿಂಡಿ ತಿನಿಸುಗಳು […]

ನಿಟ್ಟೆ: ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 2021-22 ನೇ ಸಾಲಿನ ಪದವಿ ಪ್ರದಾನ ಸಮಾರಂಭ

ನಿಟ್ಟೆ: ಪ್ರತಿಯೋರ್ವ ಮಾನವನೂ ತನ್ನ ವಿದ್ಯಾರ್ಥಿ ಜೀವನ, ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಎಡರು ತೊಡರುಗಳು, ಅನಿಶ್ಚಿತತೆಯನ್ನು ಸಮರ್ಥವಾಗಿ ತಮ್ಮ ಪ್ರತಿಭೆ ಹಾಗೂ ಸೃಜನಶೀಲತೆಯ ಮೂಲಕ ಎದುರಿಸಲು ಮಾರ್ಗದರ್ಶನ ನೀಡಿದ ಎಲ್ಲರನ್ನೂ ಜೀವನದುದ್ದಕ್ಕೂ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಹಾದಿಯಲ್ಲಿ ಎದುರಾಗುವ ತೊಂದರೆಗಳೇ ನಮ್ಮ ಯಶಸ್ಸಿಗೆ ಸ್ಪೂರ್ತಿ ಹಾಗೂ ದಾರಿದೀಪವಾಗಬೇಕು ಎಂದು ಅಮೇರಿಕದ ಹ್ಯಾರಿಸ್ಬರ್ಗ್ ನಲ್ಲಿರುವ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಎಕಡೆಮಿಕ್ ಎಫೇರ್ಸ್ ಎಂಡ್ ಎಡ್ಮಿನಿಶ್ಟ್ರೇಶನ್ ನ ಸೀನಿಯರ್ ಅಸೋಸಿಯೇಟ್ ಡೀನ್ ಡಾ.ಒಮಿದ್ ಅನ್ಸಾರಿ ಅಭಿಪ್ರಾಯಪಟ್ಟರು. ಅಕ್ಟೋಬರ್ […]

ನಿಟ್ಟೆ: ಜಪಾನಿನ ನಿಡ್ಯಾಕ್-ರೀಡ್ ಕಂಪೆನಿಯ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಜಪಾನ್ ನ ನಿಡ್ಯಾಕ್-ರೀಡ್ ಕಾರ್ಪೋರೇಶನ್ ಸಂಸ್ಥೆಯ ಸಹಯೋಗದಲ್ಲಿ ನಿಟ್ಟೆ ಕ್ಯಾಂಪಸ್ ನಲ್ಲಿ ನಿಡ್ಯಾಕ್-ರೀಡ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಆರಂಭಿಸಿದೆ. ಮಂಗಳವಾರದಂದು ನಿಡ್ಯಾಕ್-ರೀಡ್ ಸಂಸ್ಥೆಯ ನಿರ್ದೇಶಕ ಹಾಗೂ ಸಿ.ಇ.ಒ ಹಿಡೆಕಾಜು ಯಮಜಕಿ ಅವರು ಗಣ್ಯರ ಸಮ್ಮುಖದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆಗೊಳಿಸಿ ಮಾತನಾಡಿ, ಭಾರತದ ಪ್ರತಿ‍ಷ್ಟಿತ ವಿದ್ಯಾಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ನಿಡ್ಯಾಕ್ ರೀಡ್ ಸಂಸ್ಥೆಯು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿದ್ದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ […]

ನಿಟ್ಟೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕುಮಾರ್ ಹೆಗ್ಡೆ ಇವರಿಗೆ ಡಾಕ್ಟರೇಟ್

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ್ ಕುಮಾರ್ ಹೆಗ್ಡೆ ಅವರು ‘ಎಫೀಶಿಯೆಂಟ್ ಮೆಶಿನ್ ಲರ್ನಿಂಗ್ ಟೆಕ್ನಿಕ್ಸ್ ಫಾರ್ ಇಂಪ್ರೂವಿಂಗ್ ದಿ ಪ್ರಿಡಿಕ್ಷನ್ ಆಫ್ ಕ್ರೋನಿಕ್ ಡಿಸೀಸ್’ ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪಿ.ಎಚ್.ಡಿ. ಪದವಿಯನ್ನು ನೀಡಿದೆ. ಇವರು ಬೆಂಗಳೂರಿನ ಎಂ.ಎಸ್ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಂಪ್ಯೂಟರ್ ಸೈನ್ಸ್ ಎಂಡ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ […]

ತಂತ್ರಜ್ಞಾನಾಧಾರಿತ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ: ಗುರುಪ್ರಸಾದ್ ಎಸ್

ಕಾರ್ಕಳ: ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉದ್ಯೋಗಾವಕಾಶಕ್ಕೆ ಬೇಕಾದ ರೀತಿಯ ಎಲ್ಲಾ ಕೌಶಲ್ಯತೆಗಳೊಂದಿಗೆ ಅಣಿಗೊಳಿಸುವುದು ಅಗತ್ಯ. ಪ್ರಸ್ತುತ ದಿನಗಳಲ್ಲಿ ಕಾಣಲಾಗುತ್ತಿರುವ ತಂತ್ರಜ್ಞಾನದ ಬೆಳವಣಿಗೆಯನ್ನು ನಾವೆಲ್ಲರೂ ಅರಗಿಸಿಕೊಳ್ಳುವ ಮನಸ್ಥಿತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಬಾಶ್ ಗ್ಲೋಬಲ್ ಸಾಫ್ಟ್ವೇರ್ ಟೆಕ್ನಾಲಜೀಸ್ ಪ್ರೈ ಲಿ ಬೆಂಗಳೂರಿನ ಉಪಾಧ್ಯಕ್ಷ ಮತ್ತು ಜಾಗತಿಕ ನಿರ್ದೇಶಕ ಗುರುಪ್ರಸಾದ್ ಎಸ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಎಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗವು ಇಎಸಿ, ಐಇಇಇ ಮಂಗಳೂರು ಸಬ್ ಸೆಕ್ಷನ್, ಐಇಇಇ ಸ್ಟೂಡೆಂಟ್ ಬ್ರಾಂಚ್, ಎನ್.ಎಂ.ಎ.ಎಂ.ಐ.ಟಿ ಹಾಗೂ ಇಂಟರ್ನಲ್ […]