ಆನ್‌ಲೈನ್ ಗೇಮಿಂಗ್, ಕ್ಯಾಸಿನೋ, ಕುದುರೆ ರೇಸಿಂಗ್ ಮೇಲೆ 28% ತೆರಿಗೆ: ವರದಿಯನ್ನು ಮುಂದೂಡಿದ ಜಿ.ಎಸ್.ಟಿ ಕೌನ್ಸಿಲ್

ನವದೆಹಲಿ: ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಕಾರ್ಯವಿಧಾನದ ವಿಸ್ತರಣೆ ಮತ್ತು ಆನ್‌ಲೈನ್ ಗೇಮಿಂಗ್, ಕ್ಯಾಸಿನೋಗಳು ಮತ್ತು ಕುದುರೆ ರೇಸಿಂಗ್‌ಗಳ ಮೇಲೆ ಗರಿಷ್ಠ 28 ಪ್ರತಿಶತ ತೆರಿಗೆ ದರದ ಮೇಲೆ ಎಲ್ಲರ ಗಮನ ಕೇಂದ್ರಿತವಾಗಿದೆ. ಆನ್‌ಲೈನ್ ಗೇಮಿಂಗ್, ಕ್ಯಾಸಿನೊಗಳು, ಕುದುರೆ ರೇಸಿಂಗ್ ಕುರಿತು ಸಚಿವರ ಗುಂಪು ವರದಿ(ಜಿಒಎಂ)ಯನ್ನು ಮುಂದೂಡಲಾಗಿದೆ. ಜಿಒಎಂ ಈಗ 15 ದಿನಗಳಲ್ಲಿ ನಿಯಮಗಳ ಕುರಿತು ಸಲಹೆಗಳನ್ನು ಸಲ್ಲಿಸಲಿದೆ. ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಜಿಒಎಂ, ಆನ್‌ಲೈನ್ ಗೇಮಿಂಗ್‌ಗೆ ಆಟಗಾರರು ಆಟದಲ್ಲಿ ಭಾಗವಹಿಸುವಾಗ ಪಾವತಿಸುವ ಸ್ಪರ್ಧೆಯ ಪ್ರವೇಶ […]

ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ಉದ್ಘಾಟಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಉಡುಪಿ: ಇಲ್ಲಿನ ಪೇಜಾವರ ಮಠದ ಅಂಗಸಂಸ್ಥೆಯಾದ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ, ಶ್ರೀಕೃಷ್ಣ ಸೇವಾಧಾಮ ಟ್ರಸ್ಟ್ ಅನ್ನು ಭಾರತ ಸರಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿತರಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಕೃಷಿ ಸಚಿವೆ ಶೋಭಾ ಕೆರಂದ್ಲಾಜೆ,ಉಡುಪಿ ಶಾಸಕರಾದ ಕೆ.ರಘುಪತಿ ಭಟ್,ಉಡುಪಿ ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.