ಭಾರತದ ಕೂಟನೀತಿಗೆ ಜಯ: ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯ ವಾಪಾಸ್ ಪಡೆದ ಚೀನಾ

ವಿಯೆನ್ನಾ: ಶನಿವಾರ ವಿಯೆನ್ನಾದಲ್ಲಿ ನಡೆದ ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಸಾಮಾನ್ಯ ಸಮ್ಮೇಳನದಲ್ಲಿ ಅಮೇರಿಕಾ-ಯುಕೆ-ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ಒಪ್ಪಂದದ ವಿರುದ್ಧ ನಿರ್ಣಯವನ್ನು ಅಂಗೀಕರಿಸುವ ಚೀನಾದ ಪ್ರಯತ್ನವನ್ನು ತಡೆಯುವಲ್ಲಿ ಭಾರತದ ಚತುರ ರಾಜತಾಂತ್ರಿಕತೆಯು ನೆರವಾಗಿದೆ. ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಆಸ್ಟ್ರೇಲಿಯಾಕ್ಕೆ ಒದಗಿಸುವ ಎ.ಯುಕೆ.ಯುಎಸ್ ಸಂಯುಕ್ತ ಸಂಘಟೆನೆ ವಿರುದ್ಧ ನಿರ್ಣಯವನ್ನು ಅಂಗೀಕರಿಸಲು ಚೀನಾ ಪ್ರಯತ್ನಿಸುತ್ತಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ದದ ಕರಡು ನಿರ್ಣಯಕ್ಕೆ ಬಹುಮತದ ಬೆಂಬಲ ಸಿಗದಂತೆ ನೋಡಿಕೊಳ್ಳಲು ಭಾರತವು ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ ಅನೇಕ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ […]