ನೆದರ್ಲ್ಯಾಂಡ್ಸ್ : ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ

ಹೈದರಾಬಾದ್: ವಿಶ್ವಕಪ್ 2023ರ ಅಂಗವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್​ ಗೆದ್ದ ನೆದರ್ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.ನ್ಯೂಜಿಲೆಂಡ್ ಆಟಗಾರರನ್ನು ಬ್ಯಾಟಿಂಗ್​ ಮಾಡಲು ಆಹ್ವಾನ ನೀಡಿದ್ದಾರೆ. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ ನ್ಯೂಜಿಲೆಂಡ್, ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ನೆದರ್ಲ್ಯಾಂಡ್ಸ್ ಕೂಡ ನ್ಯೂಜಿಲೆಂಡ್​ಗೆ ಕಠಿಣ ಸ್ಪರ್ಧೆಯೊಡ್ಡುವ ಉತ್ಸಾಹದಲ್ಲಿದೆ. ನಡೆಯುತ್ತಿರುವ ವಿಶ್ವಕಪ್‌ನ ಆರಂಭಿಕ […]