ಹೈದರಾಬಾದ್: ವಿಶ್ವಕಪ್ 2023ರ ಅಂಗವಾಗಿ ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.ನ್ಯೂಜಿಲೆಂಡ್ ಆಟಗಾರರನ್ನು ಬ್ಯಾಟಿಂಗ್ ಮಾಡಲು ಆಹ್ವಾನ ನೀಡಿದ್ದಾರೆ. ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ ನ್ಯೂಜಿಲೆಂಡ್, ಇಂದಿನ ಪಂದ್ಯವನ್ನು ಕೂಡ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ. ನೆದರ್ಲ್ಯಾಂಡ್ಸ್ ಕೂಡ ನ್ಯೂಜಿಲೆಂಡ್ಗೆ ಕಠಿಣ ಸ್ಪರ್ಧೆಯೊಡ್ಡುವ ಉತ್ಸಾಹದಲ್ಲಿದೆ.
ನಡೆಯುತ್ತಿರುವ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಮೇಲುಗೈ ಸಾಧಿಸಿದ ನ್ಯೂಜಿಲೆಂಡ್, ಇಂದು ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸುತ್ತಿದೆ. ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಬೌಲಿಂಗ್ ಆರಿಸಿಕೊಂಡಿದೆ. ನಾವು ಮೊದಲು ಬೌಲಿಂಗ್ ಮಾಡಲು ಇಷ್ಟಪಡುತ್ತೇವೆ. ಹಿಂದಿನಕ್ಕೆ ಹೋಲಿಸಿದರೆ ತಂಡದಲ್ಲಿ ಸದ್ಯ ಬೌಲಿಂಗ್ ಮಾಡುವ ವಿಧಾನ ಬಹಳಷ್ಟು ಸುಧಾರಿಸಿದೆ. ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದಾಗಿ ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಹೇಳಿದರು.
ಕಳೆದ ವಾರ ನಾವು ಇಲ್ಲಿ ಅಭ್ಯಾಸ ಪಂದ್ಯವನ್ನು ಆಡಿದ್ದೇವೆ. ಅಲ್ಲದೇ ಕೊನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಲಾಗಿತ್ತು. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ಕಡೆಗಳಲ್ಲಿ ನಿರೀಕ್ಷಿತ ಫಲಿತಾಂಶ ಬಂದಿದೆ. ಆಡುವ ಹನ್ನೊಂದರಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಂಡಿದ್ದು, ಜೇಮ್ಸ್ ನೀಶಮ್ ಬದಲಿಗೆ ವೇಗಿ ಲಾಕಿ ಫರ್ಗುಸನ್ ಕಣಕ್ಕಿಳಿಯಲಿದ್ದಾರೆ ಎಂದು ನ್ಯೂಜಿಲೆಂಡ್ ತಂಡದ ನಾಯಕ ಟಾಮ್ ಲ್ಯಾಥಮ್ ಹೇಳಿದರು.
ಆಡುವ 11ರ ಬಳಗ: ಉಭಯ ತಂಡಗಳು ಕೆಲವು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದ್ದು ಆಡುವ 11ರ ಬಳಗ ಇಂತಿದೆ.
ನ್ಯೂಜಿಲೆಂಡ್: ಡೆವೊನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ (ನಾಯಕ ಮತ್ತು ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್, ಮ್ಯಾಟ್ ಹೆನ್ರಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್.
ನೆದರ್ಲ್ಯಾಂಡ್ಸ್: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಕಾಲಿನ್ ಅಕರ್ಮನ್, ಬಾಸ್ ಡಿ ಲೀಡೆ, ತೇಜ ನಿಡಮನೂರು, ಸ್ಕಾಟ್ ಎಡ್ವರ್ಡ್ಸ್ (ನಾಯಕ ಮತ್ತು ವಿಕೆಟ್ ಕೀಪರ್), ಸೈಬ್ರಾಂಡ್ ಎಂಗಲ್ಬ್ರೆಕ್ಟ್, ರೋಲೋಫ್ ವ್ಯಾನ್ ಡೆರ್ ಮೆರ್ವೆ, ರಯಾನ್ ಕ್ಲೈನ್, ಆರ್ಯನ್ ದತ್, ಪಾಲ್ ವ್ಯಾನ್ ಮೀಕೆರೆನ್.ಇತ್ತೀಚೆಗೆ ಅಹಮದಾಬಾದ್ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಪ್ರಾಬಲ್ಯ ಮೆರೆದ ಕಿವೀಸ್ ಪಡೆ, ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಚೆಂಡಾಡಿತ್ತು. ರವೀಂದ್ರ, ಕಾನ್ವೆ ಅಬ್ಬರದ ಶತಕದ ಮುಂದೆ ಇಂಗ್ಲೆಂಡ್ ಮಂಡಿಯೂರಿತ್ತು. ಇನ್ನು ಅರ್ಹತಾ ಟೂರ್ನಿಯಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಅನ್ನು ಹೊರಹಾಕಿರುವ ನೆದರ್ಲ್ಯಾಂಡ್ಸ್, ಸುಧಾರಿತ ಬೌಲಿಂಗ್ ಹೊಂದಿದೆ. ಇದರಿಂದ ಕಿವೀಸ್ಗೆ ಗೆಲುವು ಅಷ್ಟು ಸಲುಭವೇ ಅನ್ನೋದನ್ನು ಕಾದು ನೋಡಬೇಕಿದೆ.












