ನೀಟ್ ಟಾಪರ್ ನಿತ್ಯ ಗಂಗಾರತಿ ಬೆಳಗುವ ವಿಭು ಉಪಾಧ್ಯಾಯನ ಸಾಧನೆ ಸರ್ವರಿಗೂ ಮಾದರಿ
ಹೊಸದಿಲ್ಲಿ: ಮಳೆ-ಗಾಳಿ-ಛಳಿ ಎಂದು ಲೆಕ್ಕಿಸದೆ ನಿತ್ಯವೂ ಗಂಗಾನದಿಗೆ “ಗಂಗಾರತಿ” ಬೆಳಗುವ ಉತ್ತರ ಪ್ರದೇಶದ ಬದೌನ್ನ 17 ವರ್ಷದ ಬಾಲಕ ವಿಭು ಉಪಾಧ್ಯಾಯ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಪರೀಕ್ಷೆಯಲ್ಲಿ 720 ಕ್ಕೆ 662 ಅಂಕಗಳೊಂದಿಗೆ ಮೊದಲಪ್ರಯತ್ನದಲ್ಲೆ ತೇರ್ಗಡೆಯಾಗಿ ದೇಶದಲ್ಲಿ ಮನೆಮಾತಾಗಿದ್ದಾನೆ. ಉತ್ತರಪ್ರದೇಶದ ಬದೌನ್ ಜಿಲ್ಲೆಯವನಾದ ವಿಧು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಮಾತನಾಡುತ್ತಾ, ನಾನು ಚಿಕ್ಕಂದಿನಿಂದಲೂ ವೈದ್ಯನಾಗಲು ಬಯಸಿದ್ದೆ ಮತ್ತು ಇದಕ್ಕಾಗಿ ನಾನು 9 ನೇ ತರಗತಿಯಿಂದಲೇ ತಯಾರಿ ಆರಂಭಿಸಿದ್ದೆ ಎಂದಿದ್ದಾನೆ. ನೀಟ್ ಪರೀಕ್ಷೆಯಲ್ಲಿ 720 ರಲ್ಲಿ […]
ನೀಟ್ ಪರೀಕ್ಷೆ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ನಿತೇಶ್ ಗೆ 564 ಅಂಕ
ಕುಂದಾಪುರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಿತೇಶ್ 564 ಅಂಕಗಳನ್ನು ಪಡೆದು ಅರ್ಹತೆ ಪಡೆದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕ ವರ್ಗದವರು ಅಭಿನಂದಿಸಿದ್ದಾರೆ.
ನೀಟ್ ಫಲಿತಾಂಶ: ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳಿಂದ ಅಮೋಘ ಸಾಧನೆ
ಕಾರ್ಕಳ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಿದ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆ ಪ್ರಾರಂಭವಾದ ದ್ವಿತೀಯ ವರ್ಷದಲ್ಲೇ ಅತ್ಯುತ್ತಮ ಫಲಿತಾಂಶ ಗಳಿಸಿದ್ದಾರೆ. ಆಲ್ ಇಂಡಿಯಾ ರ್ಯಾಂಕಿಂಗ್ನಲ್ಲಿ ಕುಮಾರಿ ಜಾಗೃತಿ ಕೆ ಪಿ 661 ಅಂಕಗಳೊಂದಿಗೆ ಕೆಟೆಗರಿಯಲ್ಲಿ 23 ನೇ ರ್ಯಾಂಕ್, ಉದ್ಭವ್ ಎಂ ಆರ್ 625 ಅಂಕಗಳೊಂದಿಗೆ ಕೆಟೆಗರಿಯಲ್ಲಿ 72 ನೇ ರ್ಯಾಂಕ್ ಗಳಿಸಿದ್ದಾರೆ. ಹಾಗೆಯೇ ಸಂಸ್ಥೆಯ ವಿದ್ಯಾರ್ಥಿಗಳಾದ ತನುಶ್ರೀ ಕೆ ಎನ್ 625, ಶ್ರೇಯಸ್ ಎಸ್ ಚಿಕಾಲೇ 612, […]
ಏ. 3 ರಿಂದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸಿ.ಇ.ಟಿ, ನೀಟ್ ಹಾಗೂ ಜೆ.ಇ.ಇ ಕ್ರಾಶ್ ಕೋರ್ಸ್ ತರಬೇತಿ
ಉಡುಪಿ: ಪದವಿ ಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸಿ.ಇ.ಟಿ, ನೀಟ್ ಹಾಗೂ ಜೆ.ಇ.ಇ ಕ್ರಾಶ್ ಕೋರ್ಸ್ ತರಬೇತಿಯು ಏಪ್ರಿಲ್ 3 ರಿಂದ ಈ ಕೆಳಕಂಡ ಕಾಲೇಜುಗಳಲ್ಲಿ ನಡೆಯಲಿದೆ. ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿಯ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಬೇತಿ ನಡೆಯಲಿದ್ದು, ನೋಡೆಲ್ ಅಧಿಕಾರಿಯಾಗಿ ಕಾಲೇಜಿನ […]
ನೀಟ್ 2022: ಎಕ್ಸ್ ಪರ್ಟ್ ಕಾಲೇಜಿನ ಶೇ.93ರಷ್ಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ
ಮಂಗಳೂರು: ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆದ ಅಖಿಲ ಭಾರತ ಮಟ್ಟದ ನೀಟ್ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಆದಿತ್ಯ ಕಾಮತ್ ಅಮ್ಮೇಂಬಳ ಅಖಿಲ ಭಾರತ ಮಟ್ಟದಲ್ಲಿ 28ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಒಟ್ಟು ಕಾಲೇಜಿನ 1168 ವಿದ್ಯಾರ್ಥಿಗಳಲ್ಲಿ 1094ರಷ್ಟು ಅಂದರೆ ಶೇ. 93.66ರಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ. ಕಾಲೇಜಿನ 720ರಲ್ಲಿ 705 ಅಂಕ ಪಡೆದ ಆದಿತ್ಯ ಕಾಮತ್ ಅಮ್ಮೇಂಬಳ ಸಾಮಾನ್ಯ ವಿಭಾಗದಲ್ಲಿ ಅಖಿಲ ಭಾರತ […]