ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ “ಇಂಡಿಯಾ”ವನ್ನು “ಭಾರತ” ಎಂದು ಬದಲಿಸಲು NCERT ಸಮಿತಿ ಶಿಫಾರಸು
ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಸಮಿತಿಯು ಎಲ್ಲಾ ಶಾಲಾ ಪಠ್ಯಪುಸ್ತಕಗಳಲ್ಲಿ ಸಾರ್ವತ್ರಿಕವಾಗಿ “ಇಂಡಿಯಾ”ವನ್ನು “ಭಾರತ” ಎಂದು ಬದಲಿಸಲು ಪ್ರಸ್ತಾಪಿಸಿದೆ. ಇದು ಕೇವಲ ಶಿಫಾರಸು ಮಾತ್ರ ಮತ್ತು ಇದು ಇನ್ನೂ ಅನುಮೋದನೆ ಪಡೆಯಬೇಕಾಗಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ. ನಾವು ಸದ್ಯಕ್ಕೆ ಏನನ್ನೂ ಒಪ್ಪಿಕೊಂಡಿಲ್ಲ. ಸಮಿತಿಯು ತಮ್ಮ ವರದಿಯನ್ನು ಕಳುಹಿಸಿದೆ ಎಂದು ಎನ್‌ಸಿಇಆರ್‌ಟಿ ನಿರ್ದೇಶಕರು ತಿಳಿಸಿದ್ದಾರೆ. ಹಲವು ತಿಂಗಳ ಹಿಂದೆಯೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ […]