ದೊಡ್ಡಣ್ಣ ಗುಡ್ಡೆ : ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಶರನ್ನವರಾತ್ರಿ ಮಹೋತ್ಸವಕ್ಕೆ ಚಾಲನೆ

ದೊಡ್ಡಣ್ಣ ಗುಡ್ಡೆ: ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲ ನಿರಂತರ ಹತ್ತು ದಿನಗಳ ಕಾಲ ನೆರವೇರಲಿರುವ ನವರಾತ್ರಿ ಮಹೋತ್ಸವಕ್ಕೆ ಕದಿರು ಕಟ್ಟುವಿಕೆಯೊಂದಿಗೆ ಚಾಲನೆ ನೀಡಲಾಯಿತು. ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ, ಕೃಷ್ಣಮೂರ್ತಿ ತಂತ್ರಿಗಳ ನೇತೃತ್ವದಲ್ಲಿ ಆದ್ಯ ಗಣಪತಿಯಾಗ ಜೋಡಿ ಚಂಡಿಕಾಯಾಗ ಕಲ್ಪೋಕ್ತ ಪೂಜಾ ಸಹಿತ ರಂಗ ಪೂಜೆ ದುರ್ಗಾ ನಮಸ್ಕಾರ ಪೂಜೆ ರಾತ್ರಿಯ ಮಹಾಪೂಜೆಗಳು ನೆರವೇರಿದವು. ವಿವೇಕ್ ನಳಿನಿ ರಾವ್ ಹಾಗೂ ಆದಿತ್ಯ ಮುಕುಂದ ರಾವ್ ಅವರ ಪ್ರಯುಕ್ತ ಚಂಡಿಕಾಯಾಗ ರಾಧಾ […]

ದೊಡ್ಡಣ್ಣಗುಡ್ಡೆ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಅ.15 ರಿಂದ 24 ರವರೆಗೆ ನವರಾತ್ರಿ ಉತ್ಸವ

ದೊಡ್ಡಣ್ಣಗುಡ್ಡೆ: ಇಲ್ಲಿನ ಶ್ರೀ ಚಕ್ರ ಪೀಠ ಸುರಪೂಜಿತೆಯ ಸನ್ನಿಧಾನದಲ್ಲಿ ಅ.15 ರಿಂದ 24ರ ವಿಜಯದಶಮಿಯ ಪರ್ವಕಾಲದವರಿಗೆ ನವರಾತ್ರಿ ಮಹೋತ್ಸವವು ಬಹು ವಿಜೃಂಭಣೆಯಿಂದ ನಿತ್ಯ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ. ಈ ಮಹಾನ್ ಉತ್ಸವದಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಶ್ರೀದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಧರ್ಮದರ್ಶಿ ರಮಾನಂದ ಗುರೂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀಲಾವರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅ.15ರಿಂದ 24ರ ವರೆಗೆ ಶರನ್ನವರಾತ್ರಿ ಮಹೋತ್ಸವ

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅ.15ರಿಂದ 24ರ ವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಈ ಪ್ರಯುಕ್ತ ಪ್ರತಿದಿನ ದುರ್ಗಾಹೋಮ ವಿಜಯ ದಶಮಿಯಂದು ಚಂಡಿಕಾ ಹೋಮ ಹಾಗೂ ಸಂಜೆ ಸಾಮೂಹಿಕ ದೀಪ ನಮಸ್ಕಾರ ಮತ್ತು ಅನ್ನಸಂತರ್ಪಣೆ ಜರುಗಲಿವೆ. ನವರಾತ್ರಿ ಉತ್ಸವದ ವಿಶೇಷ ಸೇವೆಗಳು ಒಂದು ದಿನದ ದುರ್ಗಾಹೋಮ ರೂ.4500/ ದೇವಸ್ಥಾನಕ್ಕೆ ಒಂದು ದಿನದ ಹೂವಿನ ಅಲಂಕಾರ ರೂ.10000/- ವಿಜಯದಶಮಿ ಚಂಡಿಕಾ ಹೋಮ ರೂ. 1000/- ವಿಜಯದಶಮಿ ದಿನದಂದು ಸಂಜೆ ಸಾಮೂಹಿಕ ದೀಪ ನಮಸ್ಕಾರ ರೂ.1500/- ನವರಾತ್ರಿಯ […]

ಅ.15 ರಿಂದ 24 ರ ವರೆಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಅ.15 ರಿಂದ 24 ರ ವರೆಗೆ ಮಹಾನವರಾತ್ರಿ ಉತ್ಸವ ಜರುಗಲಿದೆ. ಅ.23 ರಂದು ಮಹಾ ನವಮಿ ದಿನ ಬೆಳಗ್ಗೆ 11.30ಕ್ಕೆ ಚಂಡಿಕಾ ಯಾಗ, ಮಧ್ಯಾಹ್ನ 12.20ಕ್ಕೆ ರಥೋತ್ಸವ ಜರುಗಲಿದೆ. ಅ.24 ರಂದು ವಿಜಯ ದಶಮಿಯಂದು ವಿದ್ಯಾರಂಭ, ನವಾನ್ನಪ್ರಾಶನ ನಡೆಯಲಿದೆ. ನವರಾತ್ರಿ ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕು ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ ತಿಳಿಸಿದ್ದಾರೆ. ಮಹಾನವರಾತ್ರಿ ಉತ್ಸವದ ಸಂದರ್ಭ ಪ್ರತಿದಿನ ಶತರುದ್ರ ನಡೆಯಲಿದ್ದು, […]

ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಎಂಟನೇ ದಿನದ ನವರಾತ್ರಿ ವಿಶೇಷಗಳು

ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಎಂಟನೇ ದಿನದ ನವರಾತ್ರಿ ವಿಶೇಷಗಳು ಬೆಳಿಗ್ಗೆ 9: 30 ರಿಂದ ದುರ್ಗಾಹೋಮ ಬೆಳಿಗ್ಗೆ 10.00ರಿಂದ “ಭಜನಾ ಕಾರ್ಯಕ್ರಮ” (ಶ್ರೀ ಲಕ್ಷ್ಮೀ ಚೆನ್ನಕೇಶವ ಭಜನಾ ಮಂಡಳಿ ಗಜಪುರ ಆನಗಳ್ಳಿ, ಕುಂದಾಪುರ ಇವರಿಂದ) ಮಧ್ಯಾಹ್ನ 12.00ಕ್ಕೆ ಮಹಾಪೂಜೆ, “ಭಜನಾ ಕಾರ್ಯಕ್ರಮ” (ಶ್ರೀ ರಾಮ ಭಜನಾ ಮಂಡಳಿ ಮಟಪಾಡಿ ಇವರಿಂದ) ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ ಸಂಜೆ 5.00ರಿಂದ “ಭಜನಾ ಕಾರ್ಯಕ್ರಮ” (ಪಂಚವರ್ಣ ಮಹಿಳಾ ಭಜನಾ ಮಂಡಳಿ ಕೋಟ ಇವರಿಂದ) ಸಂಜೆ 7.00ರಿಂದ “ದಾಸ […]