ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಅನಿರುದ್ದ ಜತ್ಕರ್; ಬಾಳೆ ಬಂಗಾರ ಸಾಕ್ಷ್ಯಚಿತ್ರಕ್ಕೆ ಪ್ರಶಸ್ತಿಯ ಗರಿ
ನವದೆಹಲಿ: 69ನೇ ಸಾಲಿನ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನುಅಕ್ಟೋಬರ್ 17 ರಂದು ದೆಹಲಿಯಲ್ಲಿ ಪ್ರದಾನ ಮಾಡಲಾಗಿದ್ದು, ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಅವರ ಸಾಧನೆ ಹಾಗೂ ಜೀವನದ ಬಗ್ಗೆ ಅನಿರುದ್ದ ಜತ್ಕರ್ ನಿರ್ದೇಶಿಸಿರುವ ‘ಬಾಳೆ ಬಂಗಾರ’ ಸಾಕ್ಷ್ಯಚಿತ್ರಕ್ಕೆ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ದೊರೆತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನಿರುದ್ಧ್ ಜತ್ಕರ್ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅನಿರುದ್ದ್, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ನನ್ನ […]
ಒಬ್ಬ ಬುಡಕಟ್ಟು ಮಹಿಳೆಗೆ ರಾಷ್ಟ್ರಪತಿ ಪದವಿಯ ಗೌರವ; ದನಕಾಯುವ ಮತ್ತೊಬ್ಬ ಮಹಿಳೆಗೆ ರಾಷ್ಟ್ರಪ್ರಶಸ್ತಿಯ ಗರಿ! ಇದು ಬದಲಾದ ಭಾರತದ ಮಹಿಳೆಯರ ಯಶೋಗಾಥೆ….
ಪಾಲಕ್ಕಡ್: ಆಕೆ ಕೇರಳದ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯ ಎಂಬ ಪುಟ್ಟ ಹಳ್ಳಿಯಲ್ಲಿ ದನ ಮೇಯಿಸುವ ಬುಡಕಟ್ಟು ಜನಾಂಗದ ಮಹಿಳೆ. ಆಕೆ ಹಾಡಿದ ಚಲಚಿತ್ರದ ಹಾಡಿಗೆ ರಾಷ್ಟ್ರಪ್ರಶಸ್ತಿ ದೊರಕಿದೆ. ಅತ್ತ ಒಡಿಸ್ಸಾದ ಪುಟ್ಟ ಹಳ್ಳಿಯಿಂದ ಬಂದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು, ದೇಶದ ಅತ್ಯುನ್ನತ ಪದವಿಯಾದ ರಾಷ್ಟ್ರಪತಿ ಪದವಿಯನ್ನು ಅಲಂಕರಿಸಿದ್ದಾರೆ. ಹತ್ತಿಪ್ಪತ್ತು ವರ್ಷಗಳ ಹಿಂದೆ ಇದನ್ನೆಲ್ಲ ಊಹಿಸಲೂ ಸಾಧ್ಯವಿರಲಿಲ್ಲ. ರಾಜಕೀಯದಲ್ಲಾಗಲೀ, ಸಿನಿಮಾ ರಂಗದಲ್ಲಾಗಲೀ ಗಾಡ್ ಫಾದರ್, ಮದರ್ ಗಳಿಲ್ಲದೆ ಕೇವಲ ತಮ್ಮ ಪ್ರತಿಭೆ ಮತ್ತು ಸ್ವಂತ ಬಲದಿಂದಲೇ ತಮ್ಮ […]
ಕಟಪಾಡಿಯ ಬಹುಮುಖ ಪ್ರತಿಭೆ ಪ್ರಥಮ್ ಕಾಮತ್ ಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ
ಕಟಪಾಡಿ: ಶಾಸಕರ ಜನ ಸ್ಪಂದನ ಪತ್ರಿಕೆಯ 13ನೇ ವರ್ಷದ ವಾರ್ಷಿಕೋತ್ಸವ ಹಾಗೂ ಭಗವಾನ್ ಬುದ್ಧ, ಬಸ ವೇಶ್ವರ, ಅಂಬೇಡ್ಕರ್, ಡಾ. ಶಿವಕುಮಾರ ಸ್ವಾಮೀಜಿ ಜಯಂತಿ ಹಾಗೂ ಸಂಗಮ ಸಮಾವೇಶ ಸಮಾರಂಭದಲ್ಲಿ ‘ಸಂಗಮ ರತ್ನ’ ರಾಷ್ಟ್ರೀಯ ಪ್ರಶಸ್ತಿಯನ್ನು ಕಟಪಾಡಿಯ ಬಹುಮುಖ ಪ್ರತಿಭೆಯಾದ ಯುವ ಜಾದೂಗಾರ ಪ್ರಥಮ ಕಾಮತ್ ಪಡೆದಿರುತ್ತಾರೆ. ಮೇ 22 ರ ಭಾನುವಾರ ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ ನೀಡಿ ಇವರನ್ನು ಗೌರವಿಸಲಾಯಿತು. ಡಾ. ಆರೂಢ ಭಾರತೀ […]
ಮಾಸ್ಟರ್ ಪ್ರಥಮ್ ಕಾಮತ್ ಕಟಪಾಡಿಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ
ಉಡುಪಿ: ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯ ಅಂಗವಾಗಿ ಸಂಗಮ ಸಮಾವೇಶ ಸಮಾರಂಭ ಮತ್ತು ಜನಸ್ಪಂದನ ಪತ್ರಿಕೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಿರುವ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿಗಾಗಿ ಬಹುಮುಖ ಪ್ರತಿಭೆ ಮಾ. ಪ್ರಥಮ್ ಕಾಮತ್ ಕಟಪಾಡಿ ಇವರು ಆಯ್ಕೆಯಾಗಿರುತ್ತಾರೆ. ಮೇ 22 ರಂದು ಬೆಂಗಳೂರಿನ ಜೆ. ಪಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಪ್ರಥಮ್ ಕಾಮತ್ ಕಟಪಾಡಿ ಇವರಿಂದ 75 ನೇ ಜಾದೂ ಪ್ರದರ್ಶನ […]