ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್ ಗೋಲ್ಡ್ ಮೆಚ್ಚುಗೆ
ಟೆಕ್ಸಾಸ್( ಅಮೆರಿಕ): ಭಾರತದ ಚಂದ್ರಯಾನ-3 ಯೋಜನೆಯೇ ಒಂದು ದೊಡ್ಡ ಯಶಸ್ಸು ಎಂದು ನಾಸಾದ ಮಾಜಿ ಅಧಿಕಾರಿ ಮತ್ತು ರೆಡ್ವೈರ್ನ ಮುಖ್ಯ ಅಭಿವೃದ್ಧಿ ಅಧಿಕಾರಿ ಮೈಕ್ ಗೋಲ್ಡ್ ಪ್ರಶಂಸಿದ್ದಾರೆ.ಇಂದು ಸಂಜೆ ಚಂದ್ರಯಾನ-3 ಯೋಜನೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಲಿ ಅಥವಾ ಬಿಡಲಿ, ಭಾರತದ ಈ ಯೋಜನೆಯೇ ಒಂದು ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ಚಂದ್ರಯಾನ-3 ಯಶಸ್ಸಿಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದ್ದು, ಭಾರತದ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ […]