ಆಜಾದಿ ಕಾ ಅಮೃತ್ ಮಹೋತ್ಸವ ಐಕಾನಿಕ್ ವೀಕ್ ಆಚರಣೆ: ಕೆನರಾ ಬ್ಯಾಂಕ್ ಸಿಂಡಿಕೇಟ್ ಗೋಲ್ಡನ್ ಜ್ಯೂಬಿಲಿ ಹಾಲ್‌ನಲ್ಲಿ ನೇರಪ್ರಸಾರ
ಉಡುಪಿ: ನವದೆಹಲಿಯ ವಿಜ್ಞಾನ ಭವನ್‌ನಲ್ಲಿ ನಡೆಯುವ ಆಜಾದಿ ಕಾ ಅಮೃತ್ ಮಹೋತ್ಸವ ಐಕಾನಿಕ್ ವೀಕ್ ಸೆಲೆಬ್ರೇಷನ್ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 6 ರಂದು ಉದ್ಘಾಟಿಸಲಿದ್ದಾರೆ. ಭಾರತದ ಹಣಕಾಸು ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಭಾರತ ಸರಕಾರದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಭಾರತದಾದ್ಯಂತ ಸುಮಾರು 75 ಜಿಲ್ಲೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಕರ್ನಾಟಕದಿಂದ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ನೇರ ಪ್ರಸಾರ ಕಾರ್ಯಕ್ರಮವನ್ನು ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್ ಉಡುಪಿ, ಇವರ […]
ಚರ್ಮರೋಗ ಪೀಡಿತನ ಆಧಾರ್ ಕಾರ್ಡ್ ಸಮಸ್ಯೆಗೆ ಒಂದೇ ಟ್ವೀಟ್ ನಿಂದ ದೊರಕಿತು ನಾಲ್ಕೇ ದಿನಗಳಲ್ಲಿ ಪರಿಹಾರ!
ಮಂಡ್ಯ : ಬಗೆಯರಿಯದೇ ಉಳಿದಿದ್ದ ಆಧಾರ್ ಕಾರ್ಡ್ ಸಮಸ್ಯೆಯೊಂದು ಕೇವಲ ಒಂದೇ ಟ್ವೀಟ್ ನಿಂದ ನಾಲ್ಕೇ ದಿನಗಳಲ್ಲಿ ಬಗೆಹರಿದಿದೆ. ಮಂಡ್ಯದ ತಂಡಸನಹಳ್ಳಿಯ ನೂತನ್ ಎನ್ನುವ ಯುವಕ ವಿಚಿತ್ರ ಚರ್ಮ ರೋಗದಿಂದ ಬಳಲುತ್ತಿದ್ದು, ಆತನ ಆಧಾರ್ ಕಾರ್ಡ್ ಲಭ್ಯವಿರಲಿಲ್ಲವಾದ್ದರಿಂದ ಆತನಿಗೆ ಸರಕಾರದ ಯಾವುದೇ ಸವಲತ್ತುಗಳು ದೊರೆಯುತ್ತಿರಲಿಲ್ಲ. ನೂತನ್ ನ ಈ ಸಮಸ್ಯೆಯ ಬಗ್ಗೆ ಯುವ ರೈತ ಮುಖಂಡ, ‘ಸಾವಯವ ಮಂಡ್ಯ’ದ ಸಿಇಒ ಮತ್ತು ಸಂಸ್ಥಾಪಕ ಮಧುಚಂದನ್ ಎಸ್ ಸಿ ಗಮನಹರಿಸಿದ್ದಾರೆ. ಮಧುಚಂದನ್ ಈ ಬಗ್ಗೆ ಟ್ವೀಟ್ ಮಾಡಿ ನೂತನ್ […]
ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಿದ ಭರವಸೆಯ ನಾಯಕ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಉಡುಪಿ : ಭಾರತವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಆಶಾಕಿರಣ. ಕಳೆದ 8 ವರ್ಷದಲ್ಲಿ ನರೇಂದ್ರ ಮೋದಿಯವರು ಸಮರ್ಥ ಮತ್ತು ಭರವಸೆಯ ನಾಯಕರಾಗಿ ಭಾರತದ ಅಭಿವೃದ್ಧಿಯ ಪರ್ವಕ್ಕೆ ನಾಂದಿ ಹಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. ಬುಧವಾರ ಅವರು ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 8ನೇ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ದೇಶದ ಪ್ರಗತಿಗೆ ರಾಜಕೀಯ […]
ಕೋವಿಡ್ -19ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು 4,000 ರೂಪಾಯಿ: ಪ್ರಧಾನಿ ಮೋದಿ
ದೆಹಲಿ: ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯಡಿ ಪ್ರಯೋಜನಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್ -19 ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳ ದೈನಂದಿನ ಅಗತ್ಯಗಳನ್ನು ಪೂರೈಸಲು ವಿವಿಧ ಯೋಜನೆಗಳ ಮೂಲಕ 4,000 ರೂಪಾಯಿಗಳನ್ನು ನೀಡಲಾಗುವುದು ಎಂದು ಸೋಮವಾರ ಘೋಷಿಸಿದರು. ವೃತ್ತಿಪರ ಕೋರ್ಸ್‌ಗಳಿಗಾಗಿ, ಉನ್ನತ ಶಿಕ್ಷಣಕ್ಕಾಗಿ ಯಾರಿಗಾದರೂ ಶಿಕ್ಷಣ ಸಾಲದ ಅಗತ್ಯವಿದ್ದರೆ, ಪಿಎಂ ಕೇರ್ಸ್ ಅದಕ್ಕೆ ಸಹಾಯ ಮಾಡುತ್ತದೆ. ಇದಲ್ಲದೆ, 18 ರಿಂದ 23 ವರ್ಷದೊಳಗಿನವರಿಗೆ ಸ್ಟೈಫಂಡ್ ನೀಡಲಾಗುವುದು ಎಂದು ಅವರು ಹೇಳಿದರು. “ನಾನು ಮಕ್ಕಳೊಂದಿಗೆ […]
ರಸಗೊಬ್ಬರ ಬೆಲೆ ಏರಿಕೆ: ರೈತ ರಕ್ಷಣೆಗಾಗಿ ರೂ 3.4 ಲಕ್ಷ ಕೋಟಿ ಸಹಾಯಧನ; ಕೇಂದ್ರ ಸರ್ಕಾರದ ವಾಗ್ದಾನ
ನವದೆಹಲಿ: ಜಾಗತಿಕವಾಗಿ ಏರುತ್ತಿರುವ ರಸಗೊಬ್ಬರಗಳ ಬೆಲೆಯಿಂದ ರೈತರನ್ನು ರಕ್ಷಿಸಲು 2022-23 ರ ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಮಂಜೂರು ಮಾಡಲಾದ 1.05 ಲಕ್ಷ ಕೋಟಿ ರೂಪಾಯಿಗಳ ಜೊತೆಗೆ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕ ಕಡಿತವನ್ನು ಘೋಷಿಸಿ, “ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್‌ಗೆ 6 […]