ಐದನೇ ಬಾರಿಗೆ ಐಪಿಎಲ್ ಕಪ್ ಎತ್ತಿದ ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರಾ ಜಡೇಜಾ ರೋಚಕ ಬ್ಯಾಟಿಂಗ್ ನಿಂದ ಸಿ.ಎಸ್.ಕೆ ಗೆ ಒಲಿದ ವಿಜಯಮಾಲೆ!

ಅಹಮದಾಬಾದ್: ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಫೈನಲ್‌ನಲ್ಲಿ ಚೆನ್ನೈ ಸುಪರ್ ಕಿಂಗ್ಸ್ ನ ರವೀಂದ್ರ ಜಡೇಜಾ ಅವರ ಐತಿಹಾಸಿಕ ಪ್ರದರ್ಶನದ ಬಳಿಕ ತಂಡವು ಐದನೇ ಬಾರಿಗೆ ಕಪ್ ಎತ್ತಿ ಬೀಗಿದೆ. ಮುಂಬೈ ಇಂಡಿಯನ್ಸ್ ನಂತರ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಎರಡನೇ ತಂಡವಾಗಿದೆ. ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆದು ಈ ಐತಿಹಾಸಿಕ ಗೆಲುವು ದಾಖಲಿಸಿದರು. ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ 2023 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ […]

ಐಪಿಎಲ್ ಫೈನಲ್: ಮೀಸಲು ದಿನ ಕೂಡ ಮಳೆ ಬಂದರೆ ಯಾರಾಗುವರು ಚಾಂಪಿಯನ್ ?

ಅಹಮದಾಬಾದ್: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಭಾನುವಾರ ನಡೆಯಬೇಕಿದ್ದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯವನ್ನು ಮಳೆ ಹಿನ್ನೆಲೆ ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ. ನಿನ್ನೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸುರಿದ ಮಳೆಯಿಂದಾಗಿ ಟಾಸ್ ಪ್ರಕ್ರಿಯೆ ಕೂಡ ನಡೆಸಲಾಗಿಲ್ಲ. ಇದರಿಂದಾಗಿ ರೋಚಕ ಕಾದಾಟ ವೀಕ್ಷಿಸಲು ಬಂದಿದ್ದ 1,32,000ಕ್ಕು ಮಿಕ್ಕಿ ಪ್ರೇಕ್ಷಕರು ನಿರಾಸೆ ಅನುಭವಿಸಿದ್ದಾರೆ. ಭಾನುವಾರ ರಾತ್ರಿ 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಬೇಕಿತ್ತು. ಆದರೆ ಸಂಜೆ 6.30ರ ವೇಳೆಗೆ ಮಳೆ […]